ಚೈನೀಸ್ ರೆಸಿಪಿ ಇದೀಗ ಯುವ ಜನತೆ ತುಂಬಾ ಇಷ್ಟವಾಗುತ್ತದೆ. ಹೋಟೆಲ್ಗಳಿಗೆ ಹೋದರೆ ಹೆಚ್ಚಾಗಿ ನಾವು ಚೈನೀಸ್ ಫುಡ್ ಇದೆಯಾ ಎಂದು ಮೆನುನಲ್ಲಿ ನೋಡುತ್ತವೆ. ಆದರೆ ಇಂದು ನಾವು ಮನೆಯಲ್ಲಿಯೇ ಚೈನೀಸ್ ಆಹಾರದಲ್ಲಿ ಒಂದು ಪದಾರ್ಥವಾದ ಚಿಕನ್ ಫ್ರೈಡ್ ರೈಸ್ ಮಾಡುವ ಸರಳ ವಿಧಾನವನ್ನು ನೀವೂ ಒಮ್ಮೆ ನೋಡಿ.
Advertisement
ಬೇಕಾಗುವ ಸಾಮಗ್ರಿಗಳು:
* ಚಿಕನ್ ತುಂಡು- 2 ಕಪ್
* ಅಡುಗೆ ಎಣ್ಣೆ – 5 ಟೇಬಲ್ ಸ್ಪೂನ್
* ಅಕ್ಕಿ- 2 ಕಪ್
* ಗೇರು ಬೀಜ – 1 ಕಪ್
* ಕೆಂಪು ದೊಣ್ಣೆ ಮೆಣಸು- 1 ಕಪ್
*ಅನಾನಸು- 1 ಕಪ್
*ಈರುಳ್ಳಿ – 1 ಕಪ್
*ಮೊಟ್ಟೆ – 2
*ಸೋಯಾ ಸಾಸ್- 2 ಟೇಬಲ್ ಸ್ಪೂನ್
* ಕರಿಮೆಣಸು – 1 ಟೇಬಲ್ ಸ್ಪೂನ್
*ಹಸಿ ಬಟಾಣಿ ಕಾಳು- ಅರ್ಧ ಕಪ್
*ಶುಂಠಿ
*ಬೆಳ್ಳುಳ್ಳಿ-1 ಟೇಬಲ್ ಸ್ಪೂನ್
*ಲಿಂಬೆ ರಸ – 1ಟೇಬಲ್ ಸ್ಪೂನ್
* ಕೊತ್ತಂಬರಿ
* ರುಚಿಗೆ ತಕ್ಕಷ್ಟು ಉಪ್ಪು
Advertisement
Advertisement
ಮಾಡುವ ವಿಧಾನ:
* ಒಂದು ಬೌಲ್ನಲ್ಲಿ ಚಿಕನ್ ತುಂಡುಗಳನ್ನು ಹಾಕಿ. ಅದಕ್ಕೆ ಸೋಯಾ ಸಾಸ್ ಹಾಕಿ ಕರಿಮೆಣಸು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಫ್ರಿಜ್ನಲ್ಲಿ ಇರಿಸಿ.
* ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಯಾಗುತ್ತಿದ್ದಂತೆ ಚಿಕನ್ ತುಂಡುಗಳನ್ನು ಹಾಕಿ. ಅದು ಗುಲಾಬಿ ಬಣ್ಣಕ್ಕೆ ತಿರುಗುವವರೆಗೂ ಸಣ್ಣ ಉರಿಯಲ್ಲಿ ಬೇಯಿಸಿ ಅದನ್ನು ಪಕ್ಕಕ್ಕೆ ತೆಗೆದಿಟ್ಟಿರಬೇಕು. ಹೀಗೆ ಬಾಣಲೆಗೆ ಎಣ್ಣೆ ಹಾಕಿ ಅದು ಕಾದಾಗ ಅದಕ್ಕೆ ಮೊಟ್ಟೆ ಸುರಿದು ಕದಡಿ. ಬೆಂದಾಗ, ಬೇರೆ ಬೌಲ್ನಲ್ಲಿ ತೆಗೆದಿರಿಸಿಟ್ಟಿರಬೇಕು.
Advertisement
* ನಂತರ ಬಾಣಾಲೆಗೆ ಎಣ್ಣೆ ಸೇರಿಸಿ ಅನಾನಸ್, ಕೆಂಪು ದೊಣ್ಣೆ ಮೆಣಸು, ಈರುಳ್ಳಿ, ಹಸಿ ಬಟಾಣಿ ಕಾಳು, ಸಣ್ಣಗೆ ಕತ್ತರಿಸಿದ ಶುಂಠಿ ಮತ್ತು ಬೆಳ್ಳುಳ್ಳಿಗಳನ್ನು ಹಾಕಿ ಚೆನ್ನಾಗಿ ಫ್ರೈ ಮಾಡಬೇಕು.
* ನಂತರ ಇದೇ ಬಾಣಲೆಗೆ ಗೇರು ಬೀಜ, ಅನ್ನವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಈಗ ಅದಕ್ಕೆ ಈ ಮೊದಲೇ ಫ್ರೈ ಮಾಡಿಟ್ಟ ಮಸಾಲೆಯನ್ನು ಮೇಲಿಂದ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಬೇಯಿಸಬೇಕು.
* ನಂತರ ಈಗ ಚಿಕನ್ ಕಾಕಿ ಚೆನ್ನಾಗಿ ಮಿಶ್ರಣ ಮಾಡಿ ಸೋಯಾ ಸಾಸ್, ಮತ್ತು ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಉದುರಿಸಿ, ಲಿಂಬೆ ರಸ ಬೆರೆಸಬೇಕು. ಇದೀಗ ಚಿಕನ್ ಫ್ರೈಡ್ ರೈಸ್ ಸಿದ್ಧವಾಗುತ್ತದೆ.