– ಸಚಿವ ಲಕ್ಷ್ಮಣ್ ಸವದಿಗೆ ಸಾರಾ ತಿರುಗೇಟು
ಮೈಸೂರು: ಡ್ರಗ್ಸ್ ದಂಧೆ ಕುರಿತು ತನಿಖೆ ನಡೆಯುತ್ತಿರುವಾಗಲೇ ಈ ವಿಚಾರ ರಾಜಕೀಯವಾಗಿದ್ದು, ಒಬ್ಬರಿಗೊಬ್ಬರು ಕೆಸರೆರಚಾಟ ನಡೆಸಿದ್ದಾರೆ. ಇದೀಗ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿಗೆ ಮಾಜಿ ಸಚಿವ ಸಾರಾ ಮಹೇಶ್ ತಿರುಗೇಟು ನೀಡಿದ್ದಾರೆ.
Advertisement
ಈ ಕುರಿತು ಟ್ವೀಟ್ ಮಾಡುವ ಮೂಲಕ ಕಿಡಿ ಕಾರಿರುವ ಅವರು, ಡ್ರಗ್ಸ್ ದಂಧೆಕೋರರೇ ಸರ್ಕಾರ ಬೀಳಿಸಿದರು ಎಂಬ ಮಾಜಿ ಸಿಎಂ ಎಚ್ಡಿಕೆ ಅವರ ಆರೋಪ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ನಗು ತರಿಸಿತ್ತಂತೆ. ಬ್ಲೂ ಫಿಲಂ ನೋಡುವ ಅಡಿಕ್ಷನ್ (ವ್ಯಸನ) ಇರುವವರು ಈ ರಾಜ್ಯದ ಡಿಸಿಎಂ ಆಗುತ್ತಿದ್ದಾರೆ ಎಂದಾಗ ರಾಜ್ಯದ ಜನರಿಗೇ ನಗು, ದುಃಖ ಬಂದಿತ್ತು. ಅಸಲಿಗೆ ಎಲ್ಲವೂ ವ್ಯವಸನವೇ ಡ್ರಗ್ಸ್ ಆದರೂ, ಬ್ಲ್ಯೂ ಫಿಲಂ ಆದರೂ… ಎಂದು ಟಾಂಗ್ ನೀಡಿದ್ದಾರೆ.
Advertisement
ಡ್ರಗ್ಸ್ ದಂಧೆಕೋರರು ಸರ್ಕಾರ ಬೀಳಿಸಿದರು ಎಂದು ಈ ಹಿಂದೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಈ ಕುರಿತು ಲಕ್ಷ್ಮಣ್ ಅವದಿ ಪ್ರತಿಕ್ರಿಯಿಸಿ, ಕುಮಾರಸ್ವಾಮಿಯವರ ಹೇಳಿಕೆ ಹಾಸ್ಯಾಸ್ಪದ ಎಂದಿದ್ದರು. ಇದೀಗ ಟ್ವೀಟ್ ಮೂಲಕ ಸಾರಾ ಮಹೇಶ್ ತಿರುಗೇಟು ನೀಡಿದ್ದಾರೆ.
Advertisement
ಡ್ರಗ್ಸ್ ದಂದೆಕೋರರೇ ಸರ್ಕಾರ ಬೀಳಿಸಿದರು ಎಂಬ ಮಾಜಿ ಸಿಎಂ ಎಚ್ಡಿಕೆ ಅವರ ಆರೋಪ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ನಗು ತರಿಸಿತ್ತಂತೆ.
ಬ್ಲೂ ಫಿಲಂ ನೋಡುವ ಅಡಿಕ್ಷನ್ (ವ್ಯಸನ) ಇರುವವರು ಈ ರಾಜ್ಯದ ಡಿಸಿಎಂ ಆಗುತ್ತಿದ್ದಾರೆ ಎಂದಾಗ ರಾಜ್ಯದ ಜನರಿಗೇ ನಗು, ದುಃಖ ಬಂದಿತ್ತು. ಅಸಲಿಗೆ ಎಲ್ಲವೂ ವ್ಯವಸನವೇ ಡ್ರಗ್ಸ್ ಆದರೂ, ಬ್ಲೂ ಫಿಲಂ ಆದರೂ…
— Sa Ra Mahesh (@SaRa_Mahesh_JDS) September 10, 2020
Advertisement
ಡ್ರಗ್ಸ್ ಮಾಫಿಯಾ ಬಗ್ಗೆ ಮೊದಲು ಧ್ವನಿ ಎತ್ತಿದ್ದೇ ಕುಮಾರಸ್ವಾಮಿ, ಈ ಜಾಲದಲ್ಲಿ ಸಿಕ್ಕಿ ಬೀಳುತ್ತಿರುವವರು ಬಿಜೆಪಿಯವರು. ಕೃಷಿ ಸಚಿವ ಬಿ.ಸಿ.ಪಾಟೀಲ್ ಕೂಡ ಬಾಲ ಸುಟ್ಟ ಬೆಕ್ಕಿನಂತೆ ಆಡುತ್ತಿದ್ದಾರೆ ಎಂದು ಟ್ವೀಟ್ ಮೂಲಕ ಮಾಜಿ ಸಚಿವ ಸಾರಾ ಮಹೇಶ್ ಕಿಡಿಕಾರಿದ್ದಾರೆ.