– ಬಿಹಾರ ಪರಿಸ್ಥಿತಿ ಹೇಳಿ, ಮತದಾರರಿಗೆ ಸಲಹೆ
ಮುಂಬೈ: ಇಂದು ಬಿಹಾರ ಚುನಾವಣೆಯ ಮೊದಲ ಹಂತದ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಬಾಲಿವುಡ್ ನಟ ಸೋನು ಸೂದ್ ಮತದಾರರಿಗೆ ಸಲಹೆ ನೀಡಿದ್ದಾರೆ. ಇವಿಎಂ ಯಂತ್ರದ ಬಟನ್ ಕೇವಲ ಬೆರಳಿನಿಂದ ಒತ್ತದೇ, ಯೋಚಿಕೆ ಬುದ್ಧಿವಂತಿಕೆ ಒತ್ತಿ ಎಂದು ಹೇಳಿದ್ದಾರೆ.
Advertisement
ನಮ್ಮ ಬಿಹಾರಿ ಸೋದರರರು ಮನೆ ತೊರೆದು ಬೇರೆ ರಾಜ್ಯಕ್ಕೆ ಹೋಗುವುದು ನಿಲ್ಲಬೇಕು. ಬೇರೆ ರಾಜ್ಯದ ಜನತೆ ಕೆಲಸ ಅರಸಿ ಬಿಹಾರಕ್ಕೆ ಬರುವಂತಾದ ದಿನವೇ ದೇಶದ ಗೆಲುವು. ವೋಟ್ ಹಾಕುವಾಗ ಎಚ್ಚರಿಕೆ ಮತ್ತು ಯೋಚಿಸಿ ಬಟ್ನ್ ಒತ್ತಿ ಎಂದು ಸೋನು ಸೂದ್ ಟ್ವೀಟ್ ಮಾಡಿದ್ದಾರೆ. ಸೋನು ಸೂದ್ ನೀಡಿರುವ ಸಂದೇಶ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
Advertisement
जिस दिन हमारे बिहारी भाइयों को घर छोड़ कर दूसरे राज्य नहीं जाना पड़ेगा।
जिस दिन दूसरे राज्य के लोग बिहार में काम ढूँढने आएँगे।
उस दिन देश की जीत होगी।
वोट के लिए बटन उँगली से नहीं
दिमाग़ से लगाना ????#biharelections
— sonu sood (@SonuSood) October 28, 2020
Advertisement
ಕೊರೊನಾ ಮತ್ತು ಲಾಕ್ಡೌನ್ ವೇಳೆ ಕೆಲಸ ಕಳೆದುಕೊಂಡು ಊರಿಗೆ ತೆರಳಲಾಗದೇ ಸಂಕಷ್ಟದಲ್ಲಿದ್ದ ಬಿಹಾರ ಜನರಿಗೆ ಸೋನು ಸೂದ್ ಮರಭೂಮಿಯಲ್ಲಿ ಸಿಕ್ಕ ಸಂಜೀವಿನಿ ಆಗಿದ್ದರು. ಮುಂಬೈನಲ್ಲಿದ್ದ ಬಿಹಾರದ ಜನರನ್ನ ಸೋನು ಸೂದ್ ಊರುಗಳಿಗೆ ತಲುಪಿಸುವ ಕೆಲಸ ಮಾಡಿದ್ದರು. ಈ ಹಿನ್ನೆಲೆ ಬಿಹಾರ ಪ್ರವಾಸಿ ಕಾರ್ಮಿಕರ ಕಷ್ಟ ಅರಿತಿರುವ ಸೋನು ಸೂದ್, ಉತ್ತಮ ಜನಪ್ರತಿನಿಧಿಯನ್ನ ಆಯ್ಕೆ ಮಾಡಿಕೊಳ್ಳುವ ಸಮಯ ಬಂದಿದೆ ಎಂದು ಮತದಾನದ ಜಾಗೃತಿ ಮೂಡಿಸಿದ್ದಾರೆ.
Advertisement
Voting underway at polling booth number 23 in Mokama for the first phase of #BiharAssemblyElection2020. pic.twitter.com/nmTOBwrnmJ
— ANI (@ANI) October 28, 2020
16 ಜಿಲ್ಲೆಗಳ 71 ವಿಧಾನಸಭಾ ಕ್ಷೇತ್ರಗಳಲ್ಲಿ 114 ಮಹಿಳಾ ಅಭ್ಯರ್ಥಿಗಳು ಸೇರಿ ಒಟ್ಟು 1,066 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆ ಇಳಿದಿದ್ದಾರೆ. ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದ್ದು, ಕೊರೊನಾ ಸೋಂಕಿತರಿಗೂ ಮತದಾನಕ್ಕೆ ಅವಕಾಶ ನೀಡಲಾಗಿದೆ.
ಕೊರೊನಾ ನಡುವೆ ನಡೆಯುತ್ತಿರುವ ಮೊದಲ ಚುನಾವಣೆ ಹಿನ್ನೆಲೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿದೆ. ಅಲ್ಲದೇ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಭದ್ರತೆ ಮಾಡಲಾಗಿದೆ. ನಕ್ಸಲ್ ಹಾವಳಿ ಇರುವ ಸೂಕ್ಷ್ಮ ಪ್ರದೇಶಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಆಡಳಿತ ರೂಢ ಎನ್ಡಿಎ ಹಾಗೂ ಮಹಾ ಮೈತ್ರಿಕೂಟಕ್ಕೆ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ.
ಇಂದಿನ ಮತದಾನದಲ್ಲಿ ಎನ್ಡಿಎ ಮೈತ್ರಿಕೂಟದ ಸರ್ಕಾರದಲ್ಲಿ ಸಚಿವರಾಗಿರುವ ಕೃಷ್ಣನಂದನ್ ವರ್ಮ, ಪ್ರೇಮ್ ಕುಮಾರ್, ಜೈ ಕುಮಾರ್ ಸಿಂಗ್, ಸಂತೋಷ್ ಕುಮಾರ್ ನಿರಾಲ, ವಿಜಯ ಸಿನ್ಹಾ ಮತ್ತು ರಾಮ್ನಾರಾಯಣ್ ಮಂಡಲ್ ಕ್ಷೇತ್ರಗಳು ಒಳಗೊಂಡಿದ್ದು, ಸಂಜೆ ವೇಳೆಗೆ 1,066 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಮೊದಲ ಹಂತ ಚುನಾವಣೆಗಾಗಿ ಸೋಮವಾರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಂಡಿತ್ತು.