ಬೆಂಗಳೂರು: ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಮಹಾಸ್ಫೋಟದ ಮುನ್ಸೂಚನೆ ಸಿಗುತ್ತಿದೆ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ನಿಧಾನಕ್ಕೆ ಏರಿಕೆಯಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಮತ್ತೆ ಸೋಂಕಿತರು ದಾಖಲಾಗುತ್ತಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ಹೊಸ ಸೋಂಕಿತರು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿದ್ದಾರೆ. ಜುಲೈ 13ರಿಂದ 16 ರ ತನಕ 127 ಖಾಸಗಿ ಆಸ್ಪತ್ರೆಗಳಲ್ಲಿ 1674 ಸೋಂಕಿತರು ದಾಖಲಾಗಿದ್ದು, ಜುಲೈ 13 ರಂದು 22 ಖಾಸಗಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ. ಯಾವ ರೂಪಾಂತರ ತಳಿಯಿಂದ ವೈರಸ್ ಅಟ್ಯಾಕ್ ಆಗ್ತಿದೆ ಎಂದು ಜಿನೋಮಿಕ್ ಸಿಕ್ವೆನ್ಸಿಂಗ್ ಸಂಗ್ರಹಿಸಲಾಗುತ್ತಿದೆ.
Advertisement
Advertisement
ಬಹುತೇಕ ಸೋಂಕಿತರಿಗೆ ಡೆಲ್ಟಾ ವೆರಿಯೆಂಟ್ ರೂಪಾಂತರ ತಳಿಯ ವೈರಸ್ ಇರುವ ಸಾಧ್ಯತೆ ಹೆಚ್ಚಾಗಿದೆ. 120ಕ್ಕೂ ಹೆಚ್ಚು ಜಿನೋಮಿಕ್ ಸಿಕ್ವೆನ್ಸಿಂಗ್ ಸ್ಯಾಂಪಲ್ಸ್ ಸಂಗ್ರಹ ಮಾಡಲಾಗಿದೆ. ಸದ್ಯ ಬೆಂಗಳೂರಿನಲ್ಲಿ ಎರಡು ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆಯಾಗಿವೆ.
Advertisement
ಇತ್ತ ರಾಜ್ಯದಲ್ಲಿ ಕೊರೊನಾ ಡೆತ್ ರೇಟ್ ನಲ್ಲಿಯೂ ಏರಿಕೆ ಕಂಡುಬಂದಿದೆ. ನಿನ್ನೆ ಒಂದೇ ದಿನ ಸಾವಿನ ಪ್ರಮಾಣ ಶೇ.3.09ಕ್ಕೆ ಏರಿಕೆಯಾಗಿದೆ. 3ನೇ ಅಲೆಗೂ ಮುನ್ನ ಡೆತ್ ರೇಟ್ ಏರಿಕೆಯಿಂದಾಗಿ ಆತಂಕ ಹೆಚ್ಚಾಗಿದೆ. ಇದನ್ನೂ ಓದಿ: ವೃದ್ಧ ಭಿಕ್ಷುಕಿಯನ್ನು ಅತ್ಯಾಚಾರವೆಸಗಿ ಕೊಂದ್ರು!
Advertisement
ಸಾವು ಹೆಚ್ಚಳಕ್ಕೆ ಕಾರಣ..?
ಸರಿಯಾದ ಸಮಯಕ್ಕೆ ಸೋಂಕಿತರು ಚಿಕಿತ್ಸೆಗೆ ಒಳಗಾಗದಿರುವುದು. ಕೊನೆಯ ಹಂತದಲ್ಲಿ ಆಸ್ಪತ್ರೆಗಳ ಮೊರೆ ಹೋಗುತ್ತಿರುವುದು. ಕೊರೋನಾ ಬಗ್ಗೆ ನಿರ್ಲಕ್ಷ್ಯ ಹೆಚ್ಚಾಗುತ್ತಿರುವುದು. ಆಸ್ಪತ್ರೆ ಬದಲು ಹೋಂ ಐಸೋಲೇಷನ್ಗೆ ಹೆಚ್ಚು ಮನ್ನಣೆ ನೀಡುತ್ತಿರುವುದು ಸಾವಿನ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆ.