ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಕಬಂಧಬಾಹುಗಳು ಹರಡಿಕೊಳ್ಳುತ್ತಿದೆ. ಇಂದು ಒಂದೇ ದಿನ 28 ಮಂದಿಗೆ ಸೋಂಕು ತಗುಲಿದೆ.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 987ಕ್ಕೆ ಏರಿಕೆಯಾಗಿದ್ದು, ಈ ಪೈಕಿ 460 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ ಇನ್ನೂ 491 ಜನರು ಚಿಕಿತ್ಸೆ ಪಡೆಯುತ್ತಿದ್ದು, ಇದುವರೆಗೂ 35 ಮಂದಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
Advertisement
ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಇಂದು ಸಂಜೆ ಬಿಡುಗಡೆ ಮಾಡಿದ ಬುಲೆಟಿನ್ ಮಾಹಿತಿ ಪ್ರಕಾರ, ಬೆಂಗಳೂರಿನಲ್ಲಿ 5, ಬೀದರ್ 7, ಮಂಡ್ಯ 5, ಗದಗನಲ್ಲಿ 4, ದಾವಣಗೆರೆ 3, ಕಲಬುರಗಿ 2, ಬೆಳಗಾವಿ ಹಾಗೂ ಬಾಗಲಕೋಟೆಯಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿರೋದು ದೃಢಪಟ್ಟಿದೆ.
Advertisement
Advertisement
ಸೋಂಕಿತರ ವಿವರ: ಸಂಜೆಯ ಬುಲೆಟಿನ್
23.ರೋಗಿ-962: ಮಂಡ್ಯದ 37 ವರ್ಷದ ಪುರುಷ. ರೋಗಿ-179ರ ಸಂಪರ್ಕದಲ್ಲಿದ್ದರು.
24.ರೋಗಿ-963: ಕಲಬುರಗಿಯ 80 ವರ್ಷದ ವೃದ್ಧೆ. ರೋಗಿ-587ರ ಸಂಪರ್ಕ.
25.ರೋಗಿ-984: ಕಲಬುರಗಿಯ 28 ವರ್ಷದ ಪುರುಷ. ರೋಗಿ-610ರ ಸಂಪರ್ಕ.
26.ರೋಗಿ 985- ಬೀದರ್ ನ 18 ವರ್ಷದ ಯುವಕ. ರೋಗಿ-959ರ ಸಂಪರ್ಕ.
27. ರೋಗಿ 986- ಬೀದರ್ ನ 16 ವರ್ಷದ ಬಾಲಕ. ರೋಗಿ-959ರ ಸಂಪರ್ಕ.
28. ರೋಗಿ 987- ಬೀದರ್ ನ 36 ವರ್ಷದ ಪುರುಷ. ರೋಗಿ-959ರ ಸಂಪರ್ಕ.
Advertisement
ಇನ್ನು ಇಂದು ಬೆಳಗ್ಗೆ ಬಿಡುಗಡೆಯಾಗಿದ್ದ ಬುಲೆಟಿನ್ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಡ್ಲಿ ಕೊರೊನಾ ವೈರಸ್ಗೆ ಇಂದು 80 ವರ್ಷದ ವೃದ್ಧೆಯೊಬ್ಬರು ಬಲಿಯಾಗಿದ್ದರು. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರು ಸಂಖ್ಯೆ 5ಕ್ಕೆ ಏರಿತ್ತು. ಮಂಗಳೂರಿನ ಶಕ್ತಿನಗರ ಮೂಲದ 80 ವರ್ಷದ ರೋಗಿ-507 ಕೊರೊನಾಗೆ ಬಲಿಯಾಗಿದ್ದರು. ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆ ಅಧಿಕ ರಕ್ತದೊತ್ತಡ, ಪಾರ್ಶ್ವವಾಯು ರೋಗದಿಂದ ಬಳಲುತ್ತಿದ್ದರು. ಫಸ್ಟ್ ನ್ಯೂರೋ ಆಸ್ಪತ್ರೆಯಿಂದ ವೃದ್ಧೆಗೆ ಸೋಂಕು ತಗುಲಿತ್ತು. ಆಂಧ್ರ ಪ್ರದೇಶದಿಂದ ಬೆಂಗಳೂರಿಗೆ ಬಂದಿದ್ದ ರೋಗಿ-796 (60 ವರ್ಷದ ವೃದ್ಧ) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ವೃದ್ಧನಿಂದ ಪತ್ನಿ ಮತ್ತು ಖಾಸಗಿ ಆಸ್ಪತ್ರೆಯ ವಾರ್ಡ್ ಬಾಯ್ಗೆ ಸೋಂಕು ತಗುಲಿತ್ತು. ಮೃತ ವೃದ್ಧ ಅನಂತಪುರ ಜಿಲ್ಲೆಯ ನಿವಾಸಿ ಎಂದು ತಿಳಿದುಬಂದಿದೆ.
ಸೋಂಕಿತರ ವಿವರ: ಬೆಳಗಿನ ಬುಲೆಟಿನ್
1.ರೋಗಿ-960: ದಾವಣಗೆರೆಯ 40 ವರ್ಷದ ಪುರುಷ. ರೋಗಿ-852ರ ಸಂಪರ್ಕದಲ್ಲಿದ್ದರು.
2.ರೋಗಿ-961: ಮಂಡ್ಯದ 48 ವರ್ಷದ ಮಹಿಳೆ. ಮುಂಬೈ ಪ್ರಯಾಣದ ಹಿನ್ನಲೆ.
3.ರೋಗಿ-962: ಮಂಡ್ಯದ 38 ವರ್ಷದ ಪುರುಷ. ಮುಂಬೈ ಪ್ರಯಾಣದ ಹಿನ್ನಲೆ.
4.ರೋಗಿ-963: ಮಂಡ್ಯಗ 6 ವರ್ಷದ ಬಾಲಕ. ಮುಂಬೈ ಪ್ರಯಾಣದ ಹಿನ್ನಲೆ.
5.ರೋಗಿ-964: ಮಂಡ್ಯದ 26 ವರ್ಷದ ಪುರುಷ. ಮುಂಬೈ ಪ್ರಯಾಣದ ಹಿನ್ನಲೆ.
6.ರೋಗಿ-965: ಬೆಂಗಳೂರಿನ 8 ವರ್ಷದ ಬಾಲಕ. ರೋಗಿ-554ರ ಸಂಪರ್ಕದಲ್ಲಿದ್ದ.
7.ರೋಗಿ-966: ಬೆಂಗಳೂರಿನ 10 ವರ್ಷದ ಬಾಲಕ. ರೋಗಿ-554ರ ಸಂಪರ್ಕದಲ್ಲಿದ್ದ.
8.ರೋಗಿ-967: ಬೆಂಗಳೂರಿನ 45 ವರ್ಷದ ಪುರುಷ. ರೋಗಿ-554ರ ಸಂಪರ್ಕದಲ್ಲಿದ್ದರು.
9.ರೋಗಿ-968: ಬೆಂಗಳೂರಿನ 40 ವರ್ಷದ ಮಹಿಳೆ. ರೋಗಿ-554ರ ಸಂಪರ್ಕದಲ್ಲಿದ್ದರು.
10.ರೋಗಿ-969: ಬೆಂಗಳೂರಿನ 10 ವರ್ಷದ ಬಾಲಕ. ರೋಗಿ-554ರ ಸಂಪರ್ಕದಲ್ಲಿದ್ದ.
11.ರೋಗಿ-970: ಗದಗದ 62 ವರ್ಷದ ವೃದ್ಧ. ಅಹಮದಾಬಾದ್, ಗುಜರಾತ್ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
12.ರೋಗಿ- 971: ಗದಗದ 47 ವರ್ಷದ ವ್ಯಕ್ತಿ. ಅಹಮದಾಬಾದ್, ಗುಜರಾತ್ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
13.ರೋಗಿ- 972: ಗದಗದ 44 ವರ್ಷದ ವ್ಯಕ್ತಿ. ಅಹಮದಾಬಾದ್, ಗುಜರಾತ್ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
14.ರೋಗಿ- 973: ಗದಗದ 28 ವರ್ಷದ ಯುವಕ. ಅಹಮದಾಬಾದ್, ಗುಜರಾತ್ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
15.ರೋಗಿ- 974: ಬೆಳಗಾವಿಯ 27 ವರ್ಷದ ಯುವತಿ. ಬೆಳಗಾವಿ ಮುಂಬೈ, ಮಹಾರಾಷ್ಟ್ರಗೆ ಪ್ರಯಾಣ ಮಾಡಿರುವ ಹಿನ್ನೆಲೆ.
16.ರೋಗಿ- 975: ದಾವಣಗೆರೆಯ 34 ವರ್ಷದ ಯುವಕ. ದಾವಣಗೆರೆ ಜಿಲ್ಲೆಯ ಕಂಟೈನ್ಮೆಂಟ್ ಝೋನ್ನ ಸಂಪರ್ಕ.
17.ರೋಗಿ- 976: ದಾವಣಗೆರೆಯ 32 ವರ್ಷದ ಯುವಕ. ಕೊರೊನಾ ಲಕ್ಷಣ.
18.ರೋಗಿ- 977: ಬಾಗಲಕೋಟೆಯ 23 ವರ್ಷದ ಯುವಕ. ದೇಶಿಯ ಪ್ರಯಾಣದ ಹಿನ್ನೆಲೆ.
19.ರೋಗಿ-978: ಬೀದರ್ ನ 45 ವರ್ಷದ ಮಹಿಳೆ. ಬೀದರ್ ಮುಂಬೈ, ಮಹಾರಾಷ್ಟ್ರಾಗೆ ಪ್ರಯಾಣ ಮಾಡಿರುವ ಹಿನ್ನೆಲೆ.
20.ರೋಗಿ- 979: ಬೀದರ್ ನ 32 ವರ್ಷದ ಯುವಕ. ಜಿಲ್ಲೆಯ ಕಂಟೈನ್ಮೆಂಟ್ ಝೋನ್ನ ಸಂಪರ್ಕ.
21.ರೋಗಿ- 980: ಬೀದರ್ ನ 29 ವರ್ಷದ ಯುವಕ. ಜಿಲ್ಲೆಯ ಕಂಟೈನ್ಮೆಂಟ್ ಝೋನ್ನ ಸಂಪರ್ಕ.
22.ರೋಗಿ- 981: ಬೀದರ್ ನ 25 ವರ್ಷದ ಯುವಕ. ಜಿಲ್ಲೆಯ ಕಂಟೈನ್ಮೆಂಟ್ ಝೋನ್ನ ಸಂಪರ್ಕ.