– ಒಂದು ಗ್ರಾಂ ಗಾಂಜಾಗೆ 5 ಸಾವಿರ ರೂ.
– ವಿದೇಶದಿಂದ ಗಾಂಜಾ ಆಮದು
ಬೆಂಗಳೂರು: ಭಾರೀ ಚರ್ಚೆಗೆ ಕಾರಣವಾಗಿರುವ ಡ್ರಗ್ಸ್ ಪ್ರಕರಣದ ತನಿಖೆ ಪೊಲೀಸರು ಚುರುಕುಗೊಳಿಸಿದ್ದು, ಹಲವು ಸ್ಟಾರ್ ಕಲಾವಿದರು ಭಾಗಿಯಾಗಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಡ್ರಗ್ ಸಪ್ಲೈಯರ್ ನನ್ನು ಬಂಧಿಸಿದ್ದಾರೆ.
Advertisement
ಈ ಕುರಿತು ದೆಹಲಿಯ ಎನ್ಸಿಬಿ ಮುಖ್ಯ ಕಚೇರಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಬೆಂಗಳೂರಿನ ಪೇಜ್ ತ್ರೀ ಸೆಲಬ್ರೆಟಿಗಳಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದೆ. ಎಫ್.ಆಹ್ಮದ್ ಬಂಧಿತ ಆರೋಪಿ, ಈ ಮೂಲಕ ಸ್ಯಾಂಡಲ್ವುಡ್ ಗೆ ಡ್ರಗ್ಸ್ ಬರುತ್ತಿರುವುದು ಮತ್ತೊಮ್ಮೆ ರುಜುವಾಗಿದೆ. ಮೂರೂವರೆ ಕೆ.ಜಿ. ಗಾಂಜಾ ದೆಹಲಿಯಲ್ಲಿ ಸೀಜ್ ಮಾಡಲಾಗಿದ್ದು, ಫಾರೀನ್ ಪೋಸ್ಟ್ ಅಫೀಸ್ನಲ್ಲಿ ಈ ಗಾಂಜಾ ಸೀಜ್ ಮಾಡಲಾಗಿದೆ. ಇದು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಸಿಬಿ ಅಧಿಕಾರಿಗಳ ಮತ್ತೊಂದು ಮೇಜರ್ ಅಪರೇಷನ್ ಆಗಿದೆ.
Advertisement
ಈ ಡ್ರಗ್ಸ್ ದೆಹಲಿಯಿಂದ ಮುಂಬೈಗೆ ತಲುಪಬೇಕಿತ್ತು. ಇದೇ ಮಾಹಿತಿ ಮೇಲೆ ಮುಂಬೈನಲ್ಲಿ ಕಾರ್ಯಾಚರಣೆ ಮಾಡಿ ಆಹ್ಮದ್ನನ್ನು ಬಂಧಿಸಲಾಗಿದೆ. ಈ ಮೂಲಕ ಬೆಂಗಳೂರಿನ ಪೇಜ್ ತ್ರೀ ಸೆಲೆಬ್ರೆಟಿಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿರುವುದು ಬೆಳಕಿಗೆ ಬಂದಿದೆ.
Advertisement
Advertisement
ಎನ್ಸಿಬಿ ಅಧಿಕಾರಿಗಳು ದೆಹಲಿ ಹಾಗೂ ಮುಂಬೈನಲ್ಲಿ ಏಕಕಾಲದಲ್ಲಿ ಕಾರ್ಯಾಚರಣೆ ನಡೆದಿದೆ. ಬೆಂಗಳೂರಿಗೆ ಮಾರಿಜುನಾ ಸರಬರಾಜು ಮಾಡುತ್ತಿದ್ದ ಗೋವಾ ಮೂಲದ ಕಿಂಗ್ ಪಿನ್ ಎಫ್.ಅಹ್ಮದ್ ವಶಕ್ಕೆ ಪಡೆಯಲಾಗಿದೆ. ಆಹ್ಮದ್ ಬೆಂಗಳೂರಿನ ಕೆಲ ಪ್ರಮುಖ ವ್ಯಕ್ತಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಈತ ಖಾಸಗಿ ರೆಸಾರ್ಟ್ ನಲ್ಲಿ ಕಾರು ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಬೆಂಗಳೂರಿಗೆ ಪ್ರಮುಖ ಮೆರಿಜುವಾನ ಸರಬರಾಜುಗಾರನಾಗಿ ಗುರುತಿಸಿಕೊಂಡಿದ್ದ ಎನ್ನಲಾಗಿದೆ.
ವಿದೇಶಿ ಪೋಸ್ಟ್ ಆಫೀಸ್ ಗಳಲ್ಲಿದ್ದ 3.5 ಕೆ.ಜಿ. ಗಾಂಜಾ ವಶಕ್ಕೆ ಪಡೆಯಲಾಗಿದೆ. ಮುಂಬೈ, ದೆಹಲಿ ಮಾರುಕಟ್ಟೆಯಲ್ಲಿ ಗಾಂಜಾ ಹೆಚ್ಚು ಮಾರಾಟವಾಗುತ್ತಿದೆ. 1 ಗ್ರಾಂ.ಗೆ ಬರೋಬ್ಬರಿ 5 ಸಾವಿರ ರೂ. ಡಿಮ್ಯಾಂಡ್ ಹೊಂದಿದೆ. ಮುಂಬೈನಲ್ಲಿ ವಶಪಡಿಸಿಕೊಂಡ ಗಾಂಜಾ ಕೆನಾಡಾದಿಂದ ಆಮದು ಮಾಡಿಕೊಳ್ಳಲಾಗಿತ್ತು. ಗೋವಾಗೆ ಸರಬರಾಜು ಮಾಡುವ ಉದ್ದೇಶ ಹೊಂದಲಾಗಿತ್ತು. ಡಾರ್ಕ್ ನೆಟ್ ಮೂಲಕ ಭಾರೀ ಗಾಂಜಾ ಖರೀದಿಯಾಗುತ್ತಿದೆ. ಕ್ರಿಪ್ಟೋ ಕರೆನ್ಸಿ ಮೂಲಕ ಖರೀದಿ ವ್ಯವಹಾರ ನಡೆಯುತ್ತಿದೆ ಎನ್ನಲಾಗಿದೆ. ಎನ್ಸಿಬಿ ಕಾರ್ಯಾಚರಣೆ ಮುಂದುವರಿಸಿದೆ.
ಏನಿದು ಡಾರ್ಕ್ನೆಟ್?: ಅಪರಾಧದ ವಿಶ್ವದ ದೊಡ್ಡ ವೇದಿಕೆ ಎಂದು ಡಾರ್ಕ್ ನೆಟ್ನ್ನು ಕರೆಯಲಾಗುತ್ತದೆ. ಇಲ್ಲಿ ಡ್ರಗ್ಸ್ ಸಂಬಂಧಿಸಿದ ಔಷಧಿಗಳು, ಅಪರಾಧ ಪ್ರಕರಣಗಳಿಗೆ ಬೇಕಾದ ವಸ್ತುಗಳು ಇಲ್ಲಿ ಡಾರ್ಕ್ನೆಟ್ ನಲ್ಲಿ ಲಭ್ಯವಾಗುತ್ತವೆ. ವಿಶ್ವದ ಶೇ.4ರಷ್ಟು ಜನರು ಇಂಟರ್ ನೆಟ್ ಮೂಲಕ ಈ ವೆಬ್ಸೈಟ್ ಸಂಪರ್ಕಿಸುತ್ತಾರೆ. ಶೇ.94 ಜನರು ಸ್ಪೇಸ್ ಇಂಟರ್ ನೆಟ್ ಮೂಲಕ ಡೀಪ್ ಡಾರ್ಕ್ನೆಟ್ ಬಳಕೆ ಮಾಡುತ್ತಾರೆ. ನಕಲಿ ಐಡಿ ತಯಾರಿಸುವ ಮೂಲಕ ಇಲ್ಲಿ ವ್ಯವಹರಿಸಲಾಗುತ್ತದೆ. ಹೀಗಾಗಿ ಆರೋಪಿಗಳನ್ನು ಪತ್ತೆ ಹಚ್ಚೋದು ಕಷ್ಟದ ಕೆಲಸ.