– ಕಾರಿಗೆ ಡಿಕ್ಕಿಯಾಗಿ ಆಸ್ಪತ್ರೆಗೆ ಗೇಟ್ಗೆ ಗುದ್ದಿದ ಪೋರ್ಶೆ ಕಾರ್
ಬೆಂಗಳೂರು: ದೊಡ್ಡವರ ಮಕ್ಕಳು ಇತ್ತೀಚೆಗೆ ನಡೆದಿದ್ದ ಸರಣಿ ಅಪಘಾತದ ಬಳಿಕವು ಎಚ್ಚೆತ್ತುಕೊಂಡಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಮತ್ತೊಂದು ಐಷಾರಾಮಿ ಕಾರು ಅಪಘಾತ ನಡೆದಿದೆ.
Advertisement
ಈ ಘಟನೆ ದೊಮ್ಮಲೂರು ರಸ್ತೆಯ ಮಿಲಿಟರಿ ಆಸ್ಪತ್ರೆ ಬಳಿ ನಡೆದಿದೆ. ಜಾವೆರ್ ಮೆವಾನಿ ಎಂಬಾತ ಕಾರು ಚಲಾಯಿಸುತ್ತಿದ್ದು, ಈತ ಟೆಕ್ಸ್ ಟೈಲ್ ಮಾಲೀಕ ಕರೀಂ ಮೆವಾನಿ ಪುತ್ರ. ಇಟಿಯೊಸ್ (Etios Car) ಕಾರಲ್ಲಿ ಕೇಶವಮೂರ್ತಿ, ಇಬ್ಬರು ಪ್ರಯಾಣಿಕರು ಪ್ರಯಾಣಿಸ್ತಿದ್ದರು. ಇದನ್ನೂ ಓದಿ: ಕೋರಮಂಗಲದಲ್ಲಿ ಭೀಕರ ಅಪಘಾತ – ಹೊಸೂರು ಶಾಸಕನ ಪುತ್ರ ಸಾವು
Advertisement
Advertisement
ಇಂದಿರಾನಗರದಲ್ಲಿ ಮೋಜು ಮಸ್ತಿ ಮುಗಿಸಿ ಬರ್ತಿದ್ದ ಪೋರ್ಶೆ ಕಾರು (Porsche Car) ಅಪಘಾತಕ್ಕೀಡಾಗಿದೆ. ರೆಡ್ ಇಟಿಯೊಸ್ ಕಾರಿಗೆ ಹಿಂಬದಿಯಿಂದ ಪೋರ್ಶೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಎರಡೂ ಕಾರುಗಳು ಜಖಂಗೊಂಡಿವೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಯಾವುದೇ ಸ್ಥಾನಮಾನ ಇಲ್ಲದಿದ್ರೂ ಕೊನೇ ಉಸಿರಿರುವವರೆಗೆ ಪಕ್ಷ ಸಂಘಟನೆ ಮಾಡ್ತೇನೆ: ಬಿಎಸ್ವೈ
Advertisement
ಬಿಳಿ ಪೋರ್ಶೆ ಕಾರು 100 ಕಿ.ಮೀ.ಗಿಂತಲೂ ಹೆಚ್ಚಿನ ವೇಗದಲ್ಲಿತ್ತು. ಜಾವೆರ್ ಮೆವಾನಿ ನಿರ್ಲಕ್ಷ್ಯದಿಂದ ಐಷಾರಾಮಿ ಕಾರು ಅಪಘಾತಕ್ಕೀಡಾಗಿದೆ ಎಂದು ಹೇಳಲಾಗುತ್ತಿದ್ದು, ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.