– ವಿಚಾರಣೆಗೆ ಹಾಜರಾಗುತ್ತೇವೆ ಎಂದ ದಂಪತಿ
– ನಾಳೆ 11 ಗಂಟೆ ಹಾಜರಾಗುವಂತೆ ನೋಟಿಸ್
ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದ ತನಿಖೆಗೆ ವೇಗ ತುಂಬಿರುವ ಸಿಸಿಬಿ ಪೊಲೀಸರು ಸದ್ಯ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೇಗೆ ನೋಟಿಸ್ ನೀಡಿ ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ನಗರದ ಸೆಂಟ್ ಜಾನ್ಸ್ ರೋಡ್ನಲ್ಲಿರುವ ರಹೇಜ ಆರ್ಬರ್ ಅಪಾರ್ಟ್ಮೆಂಟ್ನಲ್ಲಿ ದಿಗಂತ್-ಐಂದಿತ್ರಾ ವಾಸಿಸುತ್ತಿದ್ದಾರೆ. ಸಿಸಿಬಿ ದಂಪತಿಗೆ ನೋಟಿಸ್ ನೀಡಿ ನಾಳೆ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದು, ಸದ್ಯ ದಂಪತಿ ಬೆಂಗಳೂರಿನಲ್ಲಿ ಇಲ್ಲ ಎಂಬ ಮಾಹಿತಿ ಲಭಿಸಿದೆ. ಲಾಕ್ಡೌನ್ ಸಮಯದಲ್ಲಿ ಆರ್ಬರ್ ಅಪಾರ್ಟ್ಮೆಂಟ್ನಲ್ಲಿಯೇ ದಂಪತಿ ಕಾಲ ಕಳೆದಿದ್ದರು. ಈ ಅಪಾರ್ಟ್ಮೆಂಟ್ ಮಾತ್ರವಲ್ಲದೇ ಆರ್.ಆರ್ ನಗರದಲ್ಲಿರುವ ಮತ್ತೊಂದು ಫ್ಲಾಟ್ಅನ್ನು ದಂಪತಿ ಹೊಂದಿದ್ದಾರೆ.
Advertisement
Advertisement
ಸಿಸಿಬಿ ನೋಟಿಸ್ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ಐಂದ್ರಿತಾ ಮತ್ತು ದಿಂಗತ್, ನಾಳೆ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಲು ಸಿಸಿಬಿಯಿಂದ ನೋಟಿಸ್ ಬಂದಿದೆ. ದೂರವಾಣಿ ಕರೆ ಮೂಲಕ ನೋಟಿಸ್ ನೀಡಲಾಗಿದೆ. ನಾವು ವಿಚಾರಣೆಗೆ ಹಾಜರಿರುತ್ತೇವೆ ಮತ್ತು ಸಿಸಿಬಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದಿದ್ದಾರೆ.
Advertisement
We have received a telephonic notice from the Central Crime Branch for an ongoing enquiry at 11am tomorrow. We will be present and fully cooperate with the CCB.
— Aindrita Ray (@AindritaR) September 15, 2020
Advertisement
ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಈಗಾಗಲೇ ಸಿಸಿಬಿ ಪೊಲೀಸರ ಕಸ್ಟಡಿಯಲ್ಲಿರುವ ನಟಿ ಸಂಜನಾ ಕೂಡ ಆರಂಭದಲ್ಲಿ ನಾನು ಕ್ಯಾಸಿನೋ ಈವೆಂಟ್ಗೆ ಹೋಗಿದ್ದೆ ಎಂದಿದ್ದರು. ಕ್ಯಾಸಿನೋ ಪಾರ್ಟಿ ಕುರಿತ ವೈರಲ್ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದ ಐಂದ್ರಿತಾ, ಸಿನಿಮಾ ಪ್ರಚಾರಕ್ಕಾಗಿ ಈವೆಂಟ್ಗೆ ಹೋಗಿದ್ದೆ ಎಂದಿದ್ದರು. ಸಂಜನಾ ವಿಚಾರಣೆಯ ಸಂದರ್ಭದಲ್ಲಿ ಸಿಸಿಬಿ ಪೊಲೀಸರ ಎದುರು ಐಂದ್ರಿತಾ ಅವರ ಹೆಸರನ್ನು ಬಾಯ್ಬಿಟ್ಟಿದ್ದು, ಫಾಝಿಲ್ ಜೊತೆಗೆ ನಾನು ಮಾತ್ರವಲ್ಲ ಐಂದ್ರಿತಾ ಕೂಡ ಕ್ಯಾಸಿನೋಗೆ ಬರುತ್ತಿದ್ದಳು. ಆದರೆ ಐಂದ್ರಿತಾ ಡ್ರಗ್ಸ್ ತೆಗೆದುಕೊಳ್ಳುತ್ತಾರಾ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಅಲ್ಲಿ ಬಂದವರಲ್ಲಿ ಬಹುತೇಕರು ಡ್ರಗ್ಸ್ ತಗೋತಿದ್ದರು ಎಂದು ಹೇಳಿದ್ದರು ಎಂಬ ಮಾಹಿತಿ ಲಭಿಸಿದೆ.
We will be appearing to a telephonic notice sent by the CCB tomorrow at 11 am. We will fully cooperate with the ongoing investigation.
— diganthmanchale (@diganthmanchale) September 15, 2020
ಆರೋಪಿ ಫಾಝಿಲ್ ಸ್ಟಾರ್ ಆಟ್ರಾಕ್ಷನ್ ಮೂಲಕ ಕೊಲಂಬೋದಲ್ಲಿದ್ದ ತನ್ನ ಕ್ಯಾಸಿನೋಗೆ ಹೆಚ್ಚಿನ ಪ್ರಮೋಷನ್ ಪಡೆದುಕೊಳ್ಳುತ್ತಿದ್ದ. ಈ ಪ್ರಮೋಷನ್ಗಾಗಿಯೇ ಐಂದ್ರಿತಾ ಪಾರ್ಟಿಯಲ್ಲಿ ಹೆಜ್ಜೆ ಹಾಕಿದ್ರು. ನಟಿ ಸಂಜನಾ ರೀತಿಯೇ ಐಂದ್ರಿತಾ ಕೂಡ ಶೇಕ್ ಫಾಝಿಲ್ ಕ್ಯಾಸಿನೋದ ಸ್ಟಾರ್ ಆಟ್ರಾಕ್ಷನ್ ಆಗಿದ್ದರು ಎನ್ನಲಾಗಿದೆ. ಸದ್ಯ ಪಾರ್ಟಿಯಲ್ಲಿ ಡಾನ್ಸ್ ಮಾಡಿದ್ದೇ ಐಂದ್ರಿತಾಗೆ ಮುಳುವಾಗುತ್ತಾ ಎಂಬುವುದನ್ನು ಕಾದುನೋಡಬೇಕಿದೆ.
ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ನಟಿ ಐಂದ್ರಿತಾ, ‘ಮೇ ಝರೂರ್ ಅವುಂಗಾ’ ಸಿನಿಮಾ ಪ್ರಚಾರಕ್ಕೆ ಮಾತ್ರವಲ್ಲದೇ ಅದಕ್ಕೂ ಮುನ್ನ ಹಲವು ಬಾರಿ ಕ್ಯಾಸಿನೋಗೆ ದಂಪತಿ ಭೇಟಿ ನೀಡಿದ್ದರು ಬಗ್ಗೆಯೂ ಸಾಕ್ಷಿಗಳನ್ನು ಕಲೆಹಾಕಲಾಗುತ್ತಿದೆ. ಈ ಹಿಂದೆಯೂ ಹಲವು ಬಾರಿ ದಿಗಂತ್ ಅವರ ಹೆಸರು ಲೇಟ್ ನೈಟ್ ಪಾರ್ಟಿಗಳಲ್ಲಿ ಕೇಳಿಬಂದಿರುವ ಕುರಿತು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈಗಾಲೇ ಸಮನ್ಸ್ ನೀಡಿರುವ ಸಿಸಿಬಿ, ದಂಪತಿಯನ್ನು ವಿಚಾರಣೆಗೆ ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡಿದೆ ಎನ್ನಲಾಗಿದೆ. ಇತ್ತ ಐಂದ್ರಿತಾ, ದಿಗಂತ್ ಮಾತ್ರವಲ್ಲದೇ ಇನ್ನು ಹಲವು ತಾರೆಯರಿಗೆ ಸಿಸಿಬಿ ನೋಟಿಸ್ ನೀಡುವ ಸಾಧ್ಯತೆ ಇದೆ.