ಬೆಂಗಳೂರು: ಸಿಲಿಕಾನ್ ಸಿಟಿಯ ಅತ್ಯಂತ ಹಿರಿಯ ವ್ಯಕ್ತಿಗೆ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ.
105 ವರ್ಷದ ಶತಾಯುಷಿ ಅಜ್ಜನಿಗೆ ಕೊರೊನಾ ಸೋಂಕು ತಗುಲಿದೆ. ಅಜ್ಜನನ್ನು ಕೇರ್ ಟೇಕರ್ ಒಬ್ಬರು ನೋಡಿಕೊಳ್ಳುತ್ತಿದ್ದರು. ಈ ಕೇರ್ ಟೇಕರ್ ನಿಂದ ಅಜ್ಜನಿಗೂ ಕೊರೊನಾ ಬಂದಿದೆ. ಇದೀಗ ಶತಾಯುಷಿ ಅಜ್ಜ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
Advertisement
105 ವರ್ಷ ವಯಸ್ಸಾದರೂ ಅಜ್ಜ ಫಿಟ್ ಅಂಡ್ ಫೈನ್ ಆಗಿ ಇದ್ದಾರೆ. ಶತಾಯುಷಿ ಅಜ್ಜನಿಗೆ ಡಯಾಬಿಟಿಸ್ ಇಲ್ಲ. ಜೊತೆಗೆ ಕೊರೊನಾ ಗುಣಲಕ್ಷಣದ ತೀವ್ರತೆಯೂ ಇರಲಿಲ್ಲ. ಕೇವಲ ಜ್ವರ ಮಾತ್ರ ಬಂದಿತ್ತು. ಕೋವಿಡ್ ಟೆಸ್ಟ್ ಮಾಡಿಸಿದಾಗ ಮಂಗಳವಾರ ಪಾಸಿಟಿವ್ ಅಂತ ಗೊತ್ತಾಗಿದೆ.
Advertisement
Advertisement
ಅಜ್ಜ ದಿನ ಬೆಳಗ್ಗೆ ಖರ್ಜೂರ, ಉಪ್ಪಿಟ್ಟು ಮಿತ ಆಹಾರ ಸೇವನೆ ಮಾಡುತ್ತಿದ್ದರು. ಆದ್ದರಿಂದ ಈ ಅಜ್ಜನ ಆರೋಗ್ಯದಲ್ಲಿ ಏನು ತೊಂದರೆ ಇಲ್ಲ. ಆಕ್ಸಿಜನ್ ಲೆವೆಲ್ ಕಡಿಮೆಯಾಗಬಹುದು ಎನ್ನುವ ಕಾರಣಕ್ಕೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.