ಬೀದರ್: ಗಡಿ ಜಿಲ್ಲೆ ಬೀದರ್ನಲ್ಲಿ ಕೊರೊನಾ ಇಂದು ಸಾವಿನ ರಣಕೇಕೆ ಹಾಕಿದೆ. ಒಂದೇ ದಿನ 6 ಜನರನ್ನು ಬಲಿ ಪಡೆದಿದ್ದು, ಜಿಲ್ಲೆಯ ಜನರನ್ನು ಭಯಭೀತರನ್ನಾಗಿಸಿದೆ.
ಬೀದರ್ ನ ಹಳೆ ನಗರದ 55 ವರ್ಷದ ವ್ಯಕ್ತಿ ಹಾಗೂ 70 ವರ್ಷದ ವೃದ್ಧೆ ಕೊರೊನಾಗೆ ಬಲಿಯಾಗಿದ್ದಾರೆ. ಭಾಲ್ಕಿ ಪಟ್ಟಣದ 50 ಹಾಗೂ 31 ವರ್ಷದ ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಬಸವಕಲ್ಯಾಣ ಪಟ್ಟಣದ 24 ವರ್ಷದ ಯುವತಿ ಹಾಗೂ ಹುಮ್ನಬಾದ್ ಪಟ್ಟಣದ 70 ವರ್ಷದ ವೃದ್ಧೆ ಕೊರೊನಾ ಗೆ ಬಲಿಯಾಗಿದ್ದಾರೆ. ಎಲ್ಲರೂ ಬಿಪಿ, ಶುಗರ್, ಉಸಿರಾಟದ ತೊಂದರೆ ಹಾಗೂ ಜ್ವರದಿಂದ ಬಳಲುತ್ತಿದ್ದರು.
Advertisement
Advertisement
ಇಂದು ಎಲ್ಲರ ವರದಿಗಳು ಬಂದಿದ್ದು, ಆರೂ ಜನಕ್ಕೆ ಕೊರೊನಾ ಪಾಸಿಟಿವ್ ಧೃಡವಾಗಿದೆ. ಜೊತೆಗೆ ಇಂದು ಜಿಲ್ಲೆಯಲ್ಲಿ 51ಜನಕ್ಕೆ ಮಹಾಮಾರಿ ವಕ್ಕರಿಸಿದೆ. ಮುಂಬೈ, ತೆಲಂಗಾಣ ಕಂಟಕ ಹಾಗೂ ಪ್ರಾಥಮಿಕ ಸಂಪರ್ಕದಿಂದಾಗಿ ಕೊರೊನಾ ಸೋಂಕು ತಗುಲಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 726ಕ್ಕೆ ಏರಿಕೆಯಾದ್ದು, ಇದರಲ್ಲಿ 512 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾದ್ದಾರೆ. ಇನ್ನು 187 ಜನಕ್ಕೆ ಸೋಂಕು ಸಕ್ರಿಯವಾಗಿದ್ದು, ಇಂದು 6 ಜನರನ್ನು ಬಲಿ ಪಡೆಯುವ ಮೂಲಕ ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ 28ಕ್ಕೆ ಏರಿಕೆಯಾಗಿದೆ.