ಪಾಟ್ನಾ: ಮುಂದಿನ 5 ವರ್ಷಗಳಲ್ಲಿ ಬಿಹಾರದಲ್ಲಿ 10 ಲಕ್ಷ ಸರ್ಕಾರಿ ನೌಕರಿಗಳನ್ನು ಸೃಷ್ಟಿಸುವುದಾಗಿ ಆರ್ಜೆಡಿ ಮುಖಂಡ ತೇಜಸ್ವಿ ಯಾದವ್ ಹೇಳಿದ್ದಾರೆ. ಅಲ್ಲದೇ ಇಡೀ ಬಿಹಾರವನ್ನು ಸಂಪೂರ್ಣ ಅಭಿವೃದ್ಧಿಯತ್ತ ಕೊಂಡೊಯ್ಯುವುದಾಗಿ ಅವರು ಭರವಸೆ ನೀಡಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ಬಳಿಕ ಇಂದು ಆರ್ಜೆಡಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿತು. ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ತೇಜಸ್ವಿ ಯಾದವ್ ಶೀಘ್ರದಲ್ಲಿ ಶಿಕ್ಷಕರ ನೇಮಕಾತಿ ಮಾಡುವುದಾಗಿ ಹೇಳಿದರು.
Advertisement
Bihar: Rashtriya Janata Dal (RJD) leader Tejashwi Yadav releases party's manifesto for #BiharElections2020, in Patna. pic.twitter.com/zaZl2zwDTp
— ANI (@ANI) October 24, 2020
Advertisement
ರಾಜ್ಯದಲ್ಲಿ ಕೊರೊನಾದಿಂದ ಸಾಕಷ್ಟು ಉದ್ಯೋಗ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ಕೈಗಾರಿಕಾ ನೀತಿ ಜಾರಿ ತರುವ ಮೂಲಕ ಹೆಚ್ಚಿನ ಉದ್ಯೋಗಕ್ಕೆ ಆದ್ಯತೆ ನೀಡಲಾಗುವುದು. ಮಾಸಿಕ 1,500 ರೂ. ನಿರುದ್ಯೋಗ ಭತ್ಯೆ, ಜೊತೆಗೆ ಕೃಷಿ ಸಾಲ ಮನ್ನಾ, ಸ್ಮಾರ್ಟ್ ವಿಲೇಜ್, ವೃದ್ಧಾಪ್ಯ ವೇತನ ಹೆಚ್ಚಳದ ಭರವಸೆವನ್ನೂ ತೇಜಸ್ವಿ ನೀಡಿದ್ದಾರೆ.
Advertisement
Advertisement
ಇದೇ ವೇಳೆ ಸಿಎಂ ನಿತೀಶ್ ಕುಮಾರ್ ವಿರುದ್ಧ ತೇಜಸ್ವಿ ಯಾದವ್ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ತಿಳಿಸಬೇಕು. ಈಗಾಗಲೇ ಉದ್ಯೋಗ ನೀಡುವ ಭರವಸೆ ನಿತೀಶ್ ಕುಮಾರ್ ನೀಡಿದ್ದರು. ಆದರೆ ಅವರಿಂದ ಅದು ಸಾಧ್ಯವಾಗಿಲ್ಲ. ಬಿಜೆಪಿ ಎಲ್ಲಿಂದ ಉದ್ಯೋಗ ಸೃಷ್ಟಿ ಮಾಡಲಿದೆ ಎಂದು ಹೇಳಬೇಕು ಎಂದು ಪ್ರಶ್ನಿಸಿದ್ದಾರೆ.
भाजपा वाले बताएं कि उनका मुख्यमंत्री का चेहरा कौन है, नीतीश कुमार हैं? नीतीश कुमार ने तो 10 लाख नौकरियों पर ही हाथ खड़े कर दिए थे कि कहां से देंगे। तो बीजेपी कहां से देगी, नेतृत्व तो नीतीश कुमार कर रहे हैं, तो ये बेवकूफ किसे बना रहे हैं: तेजस्वी यादव, RJD https://t.co/wS9IIkeqC3 pic.twitter.com/oGaSJIIhJo
— ANI_HindiNews (@AHindinews) October 24, 2020