ಬೆಂಗಳೂರು: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪರಿಚಯಿಸಿರುವ ಹೊಸ ಫಿಟ್ನೆಸ್ ಟೆಸ್ಟ್ ಎಂಟೂವರೆ ನಿಮಿಷದಲ್ಲಿ 2 ಕಿ.ಮೀ. ಓಟದ ಪರೀಕ್ಷೆಯಲ್ಲಿ ಸಂಜು ಸ್ಯಾಮ್ಸನ್ ಸೇರಿದಂತೆ ಆರು ಸ್ಟಾರ್ ಆಟಗಾರರು ಮೊದಲ ಯತ್ನದಲ್ಲಿ ಫೇಲ್ ಆಗಿದ್ದಾರೆ.
Advertisement
ಭಾರತ ಹಾಗೂ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟಿ20 ಮತ್ತು ಏಕದಿನ ಸರಣಿಗಾಗಿ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು. ಸುಮಾರು 20 ಆಟಗಾರರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್ನೆಸ್ ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ ಸ್ಯಾಮ್ಸನ್, ಇಶಾನ್ ಕಿಶನ್, ನಿತೀಶ್ ರಾಣಾ, ರಾಹುಲ್ ತೆವಾಟಿಯಾ, ಸಿದ್ದಾರ್ಥ್ ಕೌಲ್ ಹಾಗೂ ಜಯ್ದೇವ್ ಉನಾದ್ಥತ್ ಮೊದಲ ಯತ್ನದಲ್ಲಿ ಫೇಲ್ ಆಗಿದ್ದಾರೆ.
Advertisement
Advertisement
ಬ್ಯಾಟ್ಸ್ಮ್ಯಾನ್, ವಿಕೆಟ್ ಕೀಪರ್ ಹಾಗೂ ಸ್ಪಿನ್ನರ್ ಗಳು ಎಂಟೂವರೆ ನಿಮಿಷದಲ್ಲಿ 2 ಕಿ.ಮೀ ಓಟ ಮುಗಿಸಬೇಕು. ವೇಗದ ಬೌಲರ್ ಗಳು 8.15 ಸೆಕೆಂಡ್ಗಳಲ್ಲಿ ಓಟ ಪೂರ್ಣಗೊಳಿಸಿ ಪರೀಕ್ಷೆಯಲ್ಲಿ ತೇರ್ಗಡೆಗೊಳ್ಳಬೇಕು ಎಂಬುದು ಬಿಸಿಸಿಐನ ಹೊಸ ನಿಯಮವಾಗಿದೆ.
Advertisement
ಹೊಸ ನಿಯಮದ ಪ್ರಕಾರ ಓಡಲು ಪ್ರಾರಂಭಿಸಿದ ಆಟಗಾರರಲ್ಲಿ ಕೆಲ ಆಟಗಾರರು ಕೆಲವೇ ಸೆಕೆಂಡ್ಗಳ ಅಂತರದಲ್ಲಿ ಓಟ ಮುಗಿಸಿ ಉತ್ತೀರ್ಣರಾದರೆ. 6 ಜನ ತಾರಾ ಆಟಗಾರರು ಮತ್ತೊಮ್ಮೆ ಪರೀಕ್ಷೆಗೆ ತಯಾರಾಗುವಂತಾಗಿತ್ತು. ನಂತರ ಎರಡನೇ ಹಂತದಲ್ಲಿ ಮತ್ತೆ ಪರೀಕ್ಷೆಗೆ ಒಳಗಾದ ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಸಿದ್ಧಾರ್ಥ್ ಕೌಲ್ ಹಾಗೂ ಜಯ್ದೇವ್ ಉನಾದ್ಥತ್ ತೇರ್ಗಡೆ ಗೊಂಡಿದ್ದಾರೆ. ಇನ್ನೂ ಮುಂದೆ ಈ ಪರೀಕ್ಷೆಯಲ್ಲಿ ಪಾಸ್ ಆಗದೇ ಇದ್ದರೆ ಅಂತಹ ಕ್ರಿಕೆಟಿಗರಿಗೆ ಭಾರತ ತಂಡದಲ್ಲಿ ಸ್ಥಾನವಿಲ್ಲ ಎಂಬ ಸುದ್ದಿಯು ಹರಿದಾಡುತ್ತಿದೆ.
ಯೋಯೋ ಟೆಸ್ಟ್ ಜೊತೆಗೆ ಇದೀಗ ಹೊಸದಾಗಿ ಜಾರಿಗೆ ಬಂದಿರುವ 2 ಕಿ.ಮೀ ಓಟವನ್ನು ನಾಯಕ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ ಸಲಹೆ ಮೇರೆಗೆ ಬಿಸಿಸಿಐ ಈ ನೂತನ ಫಿಟ್ನೆಸ್ ಟೆಸ್ಟ್ ಪರಿಚಯಿಸಿದೆ.