– ಪರಮೇಶ್ವರ ಇತ್ತೀಚೆಗೆ ಕಾಣೆಯಾಗಿದ್ದಾರೆ
ಗದಗ: ಬಿಜೆಪಿ ಮನೆಯೊಂದು 3 ಬಾಗಿಲು ಅಲ್ಲ, 3 ಮನೆ ಸೇರಿ ಒಂದು ಬಾಗಿಲು ಆಗಿದೆ. ಸಿದ್ದರಾಮಯ್ಯಗೆ ಸಹಿಸಿಕೊಳ್ಳಲಾಗ್ತಿಲ್ಲ. ಮೀಸಲಾತಿ ವಿಷಯದಲ್ಲಿ ಮಾಜಿ ಸಿ.ಎಂ ಸಿದ್ದರಾಮಯ್ಯ ವಿರುದ್ಧ ಸಣ್ಣ ಕೈಗಾರಿಕೆ, ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವ ಸಿ.ಸಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
Advertisement
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಮನೆಯೊಂದು 3 ಬಾಗಿಲು ಇಲ್ಲ. 3 ಮನೆ ಸೇರಿ ಒಂದು ದೊಡ್ಡಮನೆ ಮಾಡುತ್ತಿದ್ದೇವೆ. ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಪಕ್ಷದ ಅನುಭವವನ್ನು ನಮ್ಮ ಪಕ್ಷದ ಮೇಲೆ ಹಾಕುತ್ತಿದ್ದಾರೆ. ಅವರ ಪಕ್ಷದ ಡಿ.ಕೆ ಶಿವಕುಮಾರ್ ಯಾವ ಕಡೆ ಇದ್ದಾರೆ ಮತ್ತು ಉಳಿದವರು ಯಾವ ಕಡೆ ಇದ್ದಾರೆ ಎನ್ನುವುದು ಸಿದ್ದರಾಮಯ್ಯನವರಿಗೆ ಗೊತ್ತಿಲ್ಲ. ಪರಮೇಶ್ವರ ಇತ್ತೀಚೆಗೆ ಎಲ್ಲೂ ಕಾಳಿಸುತ್ತಿಲ್ಲ. ಕಾಣೆಯಾಗಿದ್ದಾರೆ ಅದನ್ನು ಸ್ಪಷ್ಟಪಡಿಸಲಿ ಎಂದು ಟಾಂಗ್ ಕೊಟ್ಟಿದ್ದಾರೆ.
Advertisement
Advertisement
ಮೀಸಲಾತಿ ವಿಷಯದಲ್ಲಿ ಸಿದ್ದರಾಮಯ್ಯನವರ ಹಾಗೆ ಸಮಾಜ ಒಡೆಯಲು ಬಿಜೆಪಿ ಹೊರಟಿಲ್ಲ. ಪಂಚಮಸಾಲಿ 2ಂ ಮೀಸಲಾತಿ ಹೋರಾಟಕ್ಕೆ ಸ್ವಾಮಿಜಿಗಳು ಡೆಡ್ ಲೈನ್ ಕೊಡೋದು ಬೇಡ. ಕ್ಲಿಷ್ಟಕರ ಸಮಸ್ಯೆಯನ್ನು ಬಗೆ ಹರಿಸಲು ಕಾಲಾವಕಾಶ ಬೇಕಾಗುತ್ತದೆ. ಈ ಬಗ್ಗೆ ಸಿಎಂ ಯಡಿಯೂರಪ್ಪನವರು ಪೂರಕವಾಗಿ ಸ್ಪಂದನೆ ಮಾಡಿದ್ದು, ನನಗೆ ಹಾಗೂ ಸಚಿವ ಮುರಗೇಶ್ ನಿರಾಣಿಯವರಿಗೆ ಸ್ವಾಮೀಜಿ ಅವರೊಂದಿಗೆ ಮಾತುಕತೆ ಮಾಡುವಂತೆ ಹೇಳಿದ್ದರು. ಈಗಾಗಲೇ ಮಾತುಕತೆ ನಡೆಸಿದ್ದೆವೆ. ಸ್ವಾಮೀಜಿಗಳಿಗೆ ಮನವರಿಕೆ ಮಾಡಿಕೊಂಡಿದ್ದೆವೆ. ಕಾನೂನಾತ್ಮಕ ಪ್ರಕ್ರಿಯೆ ನಡೆಯುತ್ತಿದೆ ಸ್ವಾಮೀಜಿಗಳು ತಾಳ್ಮೆಯಿಂದ ಇರಬೇಕು. ಸ್ವಾಮೀಜಿಗಳು ಹಾಗೂ ನಮ್ಮ ಸಮಾಜದ ಹಿರಿಯರು ಹೋರಾಟ ಮಾಡುವವರು ಅರ್ಥೈಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
Advertisement
ಈ ವೇಳೆ ವಿಜಯಾನಂದ ಕಾಶಪ್ಪನವರ ವಿರುದ್ಧ ಸಹ ಹರಿಹಾಯ್ದರು. ವಿಜಯಾನಂದ ಕಾಶಪ್ಪನವರಿಗಿಂತ ವಿಜಯೇಂದ್ರ ನಮಗೆ ತುಂಬಾ ಹತ್ತವಾಗಿದ್ದವರು. ವಿಜಯೇಂದ್ರ ನಡೆ ಏನು ಎಂಬುದು ನಮಗೆ ಗೊತ್ತಿದೆ. ಅವರು ಸಮಾಜದ ಹೋರಾಟ ಹತ್ತಿಕ್ಕುತ್ತಿಲ್ಲ. ವಿಜಯಾನಂದ ಕಾಶಪ್ಪನವರು ಸುಖಾಸುಮ್ಮನೆ ಆರೋಪ ಸರಿಯಲ್ಲ ಅಂತ ವಿಜಯಾನಂದಗೆ ಸಿ.ಸಿ ಪಾಟೀಲ್ ಟಕ್ಕರ್ ಕೊಟ್ಟಿದ್ದಾರೆ.