– ಸಿಎಂ ತವರು ಜಿಲ್ಲೆಯಲ್ಲೇ ಬಿಜೆಪಿಗೆ ಮುಖಭಂಗ
ಶಿವಮೊಗ್ಗ: ಸಿಎಂ ಬಿ.ಎಸ್.ಯಡಿಯೂರಪ್ಪ ತವರು ಜಿಲ್ಲೆಯಲ್ಲೇ ಎಪಿಎಂಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗವಾಗಿದೆ.
ಶಿವಮೊಗ್ಗ ಎಪಿಎಂಸಿಗೆ ಕೊನೆಯ 20 ತಿಂಗಳ ಅವಧಿಗೆ ಇಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಈ ಹಿಂದೆ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಿತ್ತು. ಆದರೆ ಕೊನೆಯ ಅವಧಿಗೆ ಬಿಜೆಪಿಗೆ ಸುಲಭವಾಗಿ ಅಧಿಕಾರ ದೊರೆಯುತ್ತದೆ ಎಂಬ ಮಾತು ಕೇಳಿ ಬರುತಿತ್ತು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬೇಕಾದ ಬಹುಮತ ಸಹ ಬಿಜೆಪಿಗೆ ಇತ್ತು.
Advertisement
Advertisement
ಬಿಜೆಪಿ 6 ನಿರ್ದೇಶಕರ ಜೊತೆಗೆ 3 ಮಂದಿ ನಾಮ ನಿರ್ದೇಶಕರು ಸೇರಿ 9 ನಿರ್ದೇಶಕರನ್ನು ಹೊಂದಿತ್ತು. ಇನ್ನು ಜೆಡಿಎಸ್ 4, ಕಾಂಗ್ರೆಸ್ 3 ಹಾಗೂ ಪಕ್ಷೇತರ ನಿರ್ದೇಶಕರು 1 ಸ್ಥಾನ ಸೇರಿದರೂ 8 ಮಂದಿ ಇದ್ದರು. 9 ಸ್ಥಾನ ಹೊಂದಿದ್ದ ಬಿಜೆಪಿ ಸುಲಭವಾಗಿ ಅಧಿಕಾರದ ಗದ್ದುಗೆ ಏರಬಹುದಿತ್ತು. ಆದರೆ ಬಿಜೆಪಿಯ ಸದಸ್ಯರೊಬ್ಬರು ಕ್ರಾಸ್ ವೋಟಿಂಗ್ ಮಾಡಿದ್ದರಿಂದ ಸಿಎಂ ತವರು ಜಿಲ್ಲೆಯಲ್ಲೇ ಬಿಜೆಪಿ ಮುಖಭಂಗ ಅನುಭವಿಸಿದೆ. ಹೀಗಾಗಿ ಎಪಿಎಂಸಿ ಅಧ್ಯಕ್ಷರಾಗಿ ಜೆಡಿಎಸ್ನ ದುಗ್ಗಪ್ಪಗೌಡ ಹಾಗೂ ಉಪಾಧ್ಯಕ್ಷರಾಗಿ ಬಾಬಣ್ಣ ಆಯ್ಕೆಯಾಗಿದ್ದಾರೆ.