ಬಿಗ್ಬಾಸ್ ಮನೆಯ ವಾರದ ಕಥೆ ಕಿಚ್ಚನ ಜೊತೆಯಲ್ಲಿ ಶುಭಾ ಪದೇ ಪದೇ ಕೇಳುವ ಆ ಒಂದು ಮಾತಿನ ಕುರಿತಾಗಿ ಸುದೀಪ್ ಚರ್ಚಿಸಿದ್ದಾರೆ. ಶುಭಾ ಅವರಿಗೆ ಬಿಗ್ ಬಾಸ್ ಟಾಸ್ಕ್ ನೀಡಿದಾಗ ಪ್ರತಿಸಲ ಅವರಿಗೆ ಒಂದು ಪ್ರಶ್ನೆ ಮೂಡುತ್ತದೆ ಎಂದಿದ್ದಾರೆ.
Advertisement
ಬಿಗ್ಬಾಸ್ ಮನೆಯಲ್ಲಿ ಟಾಸ್ಕ್ ಅಂತಾ ಹೇಳಿದಾಗ ಶುಭಾ ಯಾವ ಟಾಸ್ಕ್ ಏನು ರೂಲ್ಸ್ ಎಂದು ಕೇಳದೆ ಅವರು ಪದೇ ಪದೇ ಕೇಳುವುದು ಒಂದೇ, ಅದು ಒಟ್ಟೆ ಬದಲಾಯಿಸಬೇಕಾ ಏನು ಶುಭಾ ಅವರೇ ಎಂದು ಹೇಳಿದ್ದಾರೆ. ಈ ವೇಳೆ ಶುಭಾ ಹೇಳಿರುವ ಕಾರಣವನ್ನು ಕೇಳಿ ಸುದೀಪ್ ಬಿದ್ದಿ ಬಿದ್ದು ನಕ್ಕಿದ್ದಾರೆ.
Advertisement
Advertisement
ಹೌದು ಸರ್ ನಾವು ಮನೆಯಿಂದ ಎಷ್ಟೊಂದು ಬಟ್ಟೆಯನ್ನು ತಂದಿರುತ್ತೇವೆ. ಆದರೆ ಬಿಗ್ಬಾಸ್ ಕೊಡುವ ಬಟ್ಟೆ ಒಂದೇ ಬಣ್ಣದ್ದಾಗಿರುತ್ತದೆ. ನನಗೆ ಪ್ರತಿಸಲ ಒಂದೇ ಬಣ್ಣದ ಬಟ್ಟೆ ಸಿಗುತ್ತದೆ ಎಂದು ಕ್ಯೂಟ್ ಆಗಿ ಶುಭಾ ಹೇಳುತ್ತಿರುವಾಗ ಸುದೀಪ್ ಅವರು ನುಗುತ್ತಿದ್ದರು.
Advertisement
ಬಿಗ್ಬಾಸ್ ಕೊಡುವ ಟೀ ಶರ್ಟ್ ಬೋರಿಂಗ್ ಆಗಿರುತ್ತದೆ. ಒಂದೇ ಶರ್ಟ್ನಲ್ಲಿ ಮೂರುದಿನಗಳು ಕಳೆಯಬೇಕು. ನನಗೆ 2 ಬಾರಿ ಹಸಿರು ಬಣ್ಣದ ಬಟ್ಟೆಯೇ ಬಂದಿದೆ. ನಾವು ನಮ್ಮ ಬಟ್ಟೆಯನ್ನೇ ಹಾಕಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಆಗ ಸುದೀಪ್ ಓ… ಆಗ ನೀವು ಇದು ನನ್ನ ಅಕ್ಕಾ ಕೊಡಿಸಿದ್ದು, ಅಣ್ಣಾ ಕೊಡಸಿದ್ದು, ಹರಿದು ಬಿಟ್ಟೆ ಅಂತಾ ಜಗಳ ಮಾಡೋಕಾ ಎಂದು ಹೇಳಿದ್ದಾರೆ.
ಪ್ಲವರಿ ಪ್ಲವರಿ ಬಟ್ಟೆ ಕೊಡಿ ಸರ್ ಎಂದು ಶುಭಾ ಮುದ್ದ ಮುದ್ದಾ ಸುದೀಪ್ ಬಳಿ ಬೇಡಿಕೆ ಇಟ್ಟಿದ್ದಾರೆ. ಈ ವೇಳೆ ಸುದೀಪ್ ನಿಮಗೆ ಅಂತಹ ಬಟ್ಟೆಗಳು ಬೇಕಾದಲ್ಲಿ ಶಮಂತ್ ಮತ್ತು ರಘು ಅವರ ಬಳಿ ಹೋಗಿ ಅವರ ಹತ್ತಿರುವ ಬಟ್ಟೆಗಳು ಹಾಗೇ ಇವೆ ಎಂದು ಹೇಳಿ ನಗೆ ಚಟಾಕೆ ಹಾರಿಸಿದ್ದಾರೆ.