ಬೆಂಗಳೂರು: ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸ್ಫೋಟವಾಗುತ್ತಿದ್ದು, ಈಗಾಗಲೇ ಒಂದು ವಾರಗಳ ಕಾಲ ಸರ್ಕಾರ ಬೆಂಗಳೂರಿನಲ್ಲಿ ಲಾಕ್ ಡೌನ್ ಹೇರಿದೆ. ಇದೀಗ ಕೆಪಿಸಿಸಿ ಅಧ್ಯಕ್ಷ ಈಶ್ವರ್ ಕಂಡ್ರೆ ಅವರು ಕನಿಷ್ಠ 15 ದಿನವಾದರೂ ಬಿಗಿಯಾದ ಲಾಕ್ಡೌನ್ ಮಾಡಿ ಎಂದು ಹೇಳಿದ್ದಾರೆ.
Advertisement
ಈ ಬಗ್ಗೆ ಟ್ವೀಟ್ ಮಾಡಿರುವ ಖಂಡ್ರೆ, ಮಾನ್ಯ ಮುಖ್ಯಮಂತ್ರಿಗಳೇ ಬೆಂಗಳೂರು ಲಾಕ್ಡೌನ್ ಮಾಡಿದ್ದಿರಿ. ಆದರೆ ಈ ನೆಪ ಮಾತ್ರದ ಲಾಕ್ಡೌನ್ ನಿಂದ ಫಲಿತಾಂಶ ನಿರೀಕ್ಷೆ ಕಷ್ಟ. ತಜ್ಞರ ಅಭಿಪ್ರಾಯ ಪಡೆದು ಕನಿಷ್ಠ 15 ದಿನವಾದ್ರೂ ಬೆಂಗಳೂರಿನಲ್ಲಿ ಬಿಗಿಯಾಗಿ ಲಾಕ್ ಡೌನ್ ಮಾಡಿ. ಇಲ್ಲವಾದರೆ ಆ “ಭಗವಂತ” ಬಂದರೂ ಬೆಂಗಳೂರನ್ನ ಕಾಪಾಡುವುದು ಕಷ್ಟವಾಗಲಿದೆ ಎಂದು ಬರೆದುಕೊಂಡು ಸಿಎಂ ಆಫ್ ಕರ್ನಾಟಕ ಹಾಗೂ ಕೆಪಿಸಿಸಿ ಪ್ರೆಸಿಡೆಂಟ್ ಗೆ ಟ್ಯಾಗ್ ಮಾಡಿದ್ದಾರೆ.
Advertisement
ಮಾನ್ಯ ಮುಖ್ಯಮಂತ್ರಿಗಳೇ ಬೆಂಗಳೂರು ಲಾಕ್ ಡೌನ್ ಮಾಡಿದ್ದಿರಿ. ಆದರೆ ಈ ನೆಪ ಮಾತ್ರದ ಲಾಕ್ ಡೌನ್ ಇಂದ ಫಲಿತಾಂಶ ನಿರೀಕ್ಷೆ ಕಷ್ಟ. ತಜ್ಙರ ಅಭಿಪ್ರಾಯ ಪಡೆದು
ಕನಿಷ್ಠ ೧೫ ದಿನವಾದ್ರೂ ಬೆಂಗಳೂರಿನಲ್ಲಿ ಬಿಗಿಯಾಗಿ ಲಾಕ್ ಡೌನ್ ಮಾಡಿ. ಇಲ್ಲವಾದರೆ ಆ "ಭಗವಂತ" ಬಂದರೂ ಬೆಂಗಳೂರನ್ನ ಕಾಪಾಡುವುದು ಕಷ್ಟವಾಗಲಿದೆ.@CMofKarnataka @KPCCPresident
— Eshwar Khandre (@eshwar_khandre) July 17, 2020
Advertisement
ಕೊರೊನಾ ವೈರಸ್ ತನ್ನ ಅಟ್ಟಹಾಸ ಮುಂದುವರಿಸಿದ್ದರಿಂದ ಸರ್ಕಾರ ಕಳೆದ ಮಂಗಳವಾರ ರಾತ್ರಿಯಿಂದ ಒಂದು ವಾರಗಳ ಕಾಲ ಲಾಕ್ಡೌನ್ ಮಾಡಿದೆ. ಈ ಮಧ್ಯೆ ಆರೋಗ್ಯ ಸಚಿವ ಶ್ರೀರಾಮುಲು ಮಾತನಾಡಿ ಎಡವಟ್ಟು ಮಾಡಿಕೊಂಡಿದ್ದಾರೆ. ಸೋಮಕು ಹರಡುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ಆದರೂ ವೈರಸ್ ಅತ್ಯಂತ ವೇಗವಾಗಿ ಹರಡುತ್ತಿದ್ದು, ರಾಜ್ಯವನ್ನು ಆ ದೇವರೇ ಕಾಪಾಡಬೇಕು ಎಂದು ಮಾರ್ಮಿಕವಾಗಿ ಹೇಳಿದ್ದರು. ಆರೋಗ್ಯ ಸಚಿವರು ಭಗವಂತನೇ ಕಾಪಾಡಬೇಕು ಎಂದು ಹೇಳಿಕೆ ನೀಡಿದ್ದ ಬೆನ್ನಲ್ಲೇ ಅದು ವ್ಯಾಪಕ ಚರ್ಚೆಗೆ ಕಾರಣವಾಯಿತು.
Advertisement
ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ಜನರ ಆರೋಗ್ಯ ರಕ್ಷಣೆ ಮಾಡಲು ಸಾಧ್ಯವಾಗದಿದ್ದರೆ ಸಿಎಂ ಯಡಿಯೂರಪ್ಪ ಸೇರಿದಂತೆ ಎಲ್ಲ ಮಂತ್ರಿಗಳು ರಾಜೀನಾಮೆ ನೀಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಗ್ರಹಿಸಿದ್ದರು. ಈ ವಿಚಾರ ಭಾರೀ ಚರ್ಚೆಯಾದ ಬಳಿಕ, ನನ್ನ ಹೇಳಿಕೆಯನ್ನು ಪ್ರಸ್ತಾಪಿಸಿ ಸಿಎಂ ಸೇರಿದಂತೆ ಮಂತ್ರಿಗಳು ರಾಜೀನಾಮೆ ನೀಡಲಿ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಗ್ರಹಕ್ಕೆ ಶ್ರೀರಾಮುಲು ಸ್ಪಷ್ಟನೆ ನೀಡಿದ್ದರು. ಇದನ್ನೂ ಓದಿ: ಒಬ್ರು ದೇವರ ಮೇಲೆ ಭಾರ ಹಾಕ್ತಾರೆ, ಮತ್ತೊಬ್ರು ದೇವರ ಕಥೆ ಹೇಳ್ತಾರೆ: ಡಿಕೆಶಿ
ಟ್ವಿಟ್ಟರ್ನಲ್ಲಿ ಪ್ರತಿಕ್ರಿಯಿಸಿದ್ದ ಶ್ರೀರಾಮುಲು, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಸೋಂಕು ಹೆಚ್ಚಾಗಲು, ಸರ್ಕಾರದ ನಿರ್ಲಕ್ಷ್ಯ, ಮಂತ್ರಿಗಳ ಬೇಜವಾಬ್ದಾರಿ, ಸರ್ಕಾರದಲ್ಲಿ ಹೊಂದಾಣಿಕೆ ಇಲ್ಲ ಎಂಬ ಪ್ರತಿಪಕ್ಷಗಳ ಆರೋಪಗಳಿಗೆ ಉತ್ತರಿಸುವ ಸಂದರ್ಭದಲ್ಲಿ ಆರೋಪಗಳು ಸತ್ಯಕ್ಕೆ ದೂರವಾದದ್ದು, ಸೋಂಕು ತಡೆಯಲು ಜನರಲ್ಲಿ ಜಾಗೃತಿ ಬರಬೇಕು. ಸೋಂಕು ತಡೆಯುವಲ್ಲಿ ಇದು ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಇಲ್ಲಿ ಎಡವಿದರೆ ಪರಿಸ್ಥಿತಿ ಕ್ಲಿಷ್ಟಕರ ಎಂದು ಹೇಳುವ ಸಂರ್ಭದಲ್ಲಿ, `ಇನ್ನೂ ಎಡವಿದರೆ ದೇವರೇ ಕಾಪಾಡಬೇಕು’ ಎಂದು ಹೇಳಿದ ಎಚ್ಚರಿಕೆಯ ಮಾತುಗಳು ಎಂದು ಸ್ಪಷ್ಟನೆ ನೀಡಿದ್ದರು. ಇದನ್ನೂ ಓದಿ: ‘ದೇವರೇ ಕಾಪಾಡಬೇಕು’ – ಹೇಳಿಕೆ ನೀಡಿದ್ದು ಯಾಕೆಂದು ವಿವರಿಸಿದ ಶ್ರೀರಾಮುಲು