ಬೆಂಗಳೂರು: ಬಿಬಿಎಂಪಿ ನೂತನ ಆಯುಕ್ತರಾಗಿ ಇಂದು ಮಂಜುನಾಥ್ ಪ್ರಸಾದ್ ಅಧಿಕಾರ ಸ್ವೀಕಾರ ಮಾಡಿದರು.
ಅಧಿಕಾರ ಸ್ವೀಕಾರದ ಬಳಿಕ ಸುದ್ದಿಗೋಷ್ಠಿ ಉದ್ದೇಶಿ ಮಾತನಾಡಿದ ಅವರು, ಕೋವಿಡ್ ನಿರ್ವಹಣೆ ಮಾಡುವುದು ಚಾಲೆಂಜ್ ಎಂದು ಹೇಳಿದ್ದಾರೆ. ಅಲ್ಲದೇ ಕಂದಾಯ ಇಲಾಖೆ ಹೆಚ್ಚುವರಿ ಜವಾಬ್ದಾರಿಯಿಂದ 2 ದಿನಗಳಲ್ಲಿ ಮುಕ್ತವಾಗಿ ಬಿಬಿಎಂಪಿ ಕಮಿಷನರ್ ಆಗಿ ಫುಲ್ ಟೈಮ್ ಆಗಿ ಕಾರ್ಯನಿರ್ವಹಿಸಲು ಸೂಚನೆ ಲಭಿಸಿದೆ ಎಂದು ಸ್ಪಷ್ಟಪಡಿಸಿದರು.
Advertisement
Advertisement
ಕೋವಿಡ್ ನಿಯಂತ್ರಣ ಎಂಬುವುದು ಒಬ್ಬ ಕಮಿಷನರ್ ಮಾತ್ರ ಮಾಡುವ ಕೆಲಸವಲ್ಲ. ಹಿರಿಯ ಅಧಿಕಾರಿಗಳು, ಸಚಿವರು, ಮೇಯರ್, ವಲಯವರು ಉಸ್ತುವಾರಿಗಳು ಸೇರಿದಂತೆ ಬೆಂಗಳೂರಿನ ಜನರ ಸಹಕಾರದೊಂದಿಗೆ ಸೋಂಕಿನ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗುವುದು. ನಗರದಲ್ಲಿ ಸದ್ಯ ಹೆಚ್ಚಾಗುತ್ತಿರುವ ಕೋವಿನ್ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಬೇಕಿದೆ. ಮೊದಲ ಹಂತದಲ್ಲೇ ಸೋಂಕಿತರನ್ನು ಪತ್ತೆ ಮಾಡಿ ಚಿಕಿತ್ಸೆ ನೀಡುವತ್ತ ಹೆಚ್ಚಿನ ನೀಡುತ್ತೇವೆ ಎಂದರು.
Advertisement
ಮೊದಲ ಹಂತದಲ್ಲೇ ಸೋಂಕಿತರನ್ನು ಗುರುತಿಸಿ ಅಗತ್ಯವಿರುವವರಿಗೆ ಚಿಕಿತ್ಸೆ ನೀಡಲು ಕ್ರಮಕೈಗೊಂಡರೇ ಸಾವಿನ ಸಂಖ್ಯೆ ಕಡಿಮೆ ಮಾಡಬಹುದು. ಹೋಂ ಐಶೋಲೇಶನ್, ಟೆಸ್ಟೆಡ್ ರಿಪೋರ್ಟ್, ಕೋವಿಡ್ ಕೇರ್ ಸೆಂಟರ್ ನಲ್ಲಿ ಸೌಲಭ್ಯಗಳಲ್ಲಿ ಸಮರ್ಪಕವಾಗಿ ವ್ಯವಸ್ಥೆ ಮಾಡಿಲ್ಲ ಎಂಬ ಆರೋಪವಿದ್ದು, ನಾಳೆಯಿಂದಲೇ ಈ ಬಗ್ಗೆ ಪರಿಶೀಲನೆ ಮಾಡುತ್ತೇನೆ ಎಂದು ತಿಳಿಸಿದರು.
Advertisement
ಮುಂದಿನ ದಿನಗಳಲ್ಲಿ ಕೋವಿಡ್ ಕೇರ್ ಸೆಂಟರ್ ಪ್ರತಿಯೊಂದು ಝೋನ್ನಲ್ಲೂ ಮಾಡುತ್ತೇವೆ. ಕೋವಿಡ್ ಗೆಲ್ಲಲು ಜನ ಪ್ರತಿನಿಧಿಗಳ ಸಹಕಾರ ಜೊತೆಗೆ ಜನರ ಸಹಕಾರವೂ ಅಗತ್ಯವಿದೆ. ನಗರದದಲ್ಲಿ ಸೋಂಕಿತರಿಗೆ ಅಗತ್ಯ ಬೆಡ್ ನೀಡುವುದು ನಮ್ಮ ಮುಂದಿರುವ ಬಹುದೊಡ್ಡ ಸವಾಲು. ಈ ಕುರಿತು ಹೆಚ್ಚಿನ ಗಮನ ನೀಡಲಾಗುವುದು. ಸದ್ಯ ಕರ್ತವ್ಯಕ್ಕೆ ಹಾಜರಾಜದ ಬಿಬಿಎಂಪಿ ಸಿಬ್ಬಂದಿಗೆ ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಲಾಗುವುದು. ಇಲ್ಲವಾದಲ್ಲಿ ಕಾನೂನು ಕ್ರಮಕೈಗೊಳ್ಳುತ್ತೇವೆ. ಆದರೆ ಇದು ನಮಗೆ ಕೊನೆ ಆಯ್ಕೆ ಆಗಿರುತ್ತದೆ. ನಮ್ಮ ಸಿಬ್ಬಂದಿ ಮೇಲೆ ನಾವೇ ಕ್ರಮಕೈಗೊಳ್ಳುವ ಬದಲು ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಲಾಗುವುದು ಎಂದರು.
ನಗರದಲ್ಲಿ ಅಗತ್ಯವಿರುವ ಆಂಬುಲೆನ್ಸ್ ತೆಗೆದುಕೊಳ್ಳಲಾಗಿದೆ. 24 ಗಂಟೆ ಆಂಬುಲೆನ್ಸ್ ಸಿಗುವಂತೆ ನೋಡಿಕೊಳ್ಳಲು ಬಿಎಂಟಿಸಿ ಚಾಲಕರನ್ನು ಆಂಬುಲೆನ್ಸ್ ಚಾಲಕರನ್ನಾಗಿ ಬಳಿಸಿಕೊಳ್ಳಲು ಚಿಂತನೆ ಮಾಡಲಾಗಿದೆ. ಅಲ್ಲದೇ ಹೋಂ ಐಸೋಲೇಷನ್ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚು ಒತ್ತು ನೀಡಲಾಗುವುದು. ಈಗಾಗಲೇ ಸೋಂಕಿನಿಂದ ಐಸೋಲೇಷನ್ ಆಗಿರುವ ಸಿಬ್ಬಂದಿಗೆ ಬೆಂಬಲ ನೀಡುತ್ತೇನೆ. ಸಿಬ್ಬಂದಿ ಕೊರತೆಯನ್ನು ನೀಗಿಸಲು ಸ್ವಯಂಸೇವಕರನ್ನು ತೆಗೆದುಕೊಳ್ಳುತ್ತೇವೆ. ಅಲ್ಲದೇ ಪಾಲಿಕೆ ಕೋವಿಡ್-19 ಸಂಬಂಧಿಸಿದಂತೆ ಏನೇ ಖರೀದಿ ಮಾಡಿದ್ದರೂ ಪ್ರತಿ ಪೈಸೆ ಲೆಕ್ಕವನ್ನು ಪಾಲಿಕೆ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ. ತೆರಿಗೆ ಹಣದಲ್ಲಿ ಮಾಡುವ ಕೆಲಸ ಎಲ್ಲವನ್ನು ಜನರ ಮುಂದಿಡುವ ಕೆಲಸ ಮಾಡಲಾಗುತ್ತೆ ಎಂದರು.