– ಮನೆ ಸಾಮಗ್ರಿಗಳು ಬೆಂಕಿಗಾಹುತಿ
ಬೆಂಗಳೂರು: ಶಾರ್ಟ್ ಸರ್ಕ್ಯೂಟ್ ಹಿನ್ನೆಲೆ ವಾಹನ ಹೊತ್ತಿ ಉರಿದಿರುವ ಘಟನೆ ಸಿಲಿಕಾನ್ ಸಿಟಿಯ ಜಿಗಣಿ ಬಳಿಯ ಲಿಂಕ್ ರಸ್ತೆಯಲ್ಲಿ ನಡೆದಿದೆ.
Advertisement
ಅತ್ತಿಬೆಲೆಯಿಂದ ಜಿಗಣಿಗೆ ಆಗಮಿಸುತ್ತಿದ್ದಾಗ ಟೆಂಪೊದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ಚಾಲಕ ಇಳಿದಿದ್ದಾನೆ. ಇದ್ದಕ್ಕಿದ್ದಂತೆಯ ತೀವ್ರತೆ ಹೆಚ್ಚಾಗಿದ್ದು, ಬಾಡಿಗೆ ಮನೆಯ ವಸ್ತುಗಳೆಲ್ಲ ಸುಟ್ಟು ಕರಕಲಾಗಿವೆ.
Advertisement
Advertisement
ಟೆಂಪೊದಲ್ಲಿದ್ದ ವಸ್ತುಗಗಳಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಆತಂಕ ಸೃಷ್ಟಿಯಾಗಿತ್ತು. ಅಥಳೀಯರು ತಕ್ಷಣವೇ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಿದ್ದು, ಟ್ಯಾಂಕರ್ ನೀರಿನಿಂದ ಬೆಂಕಿ ನಂದಿಸುವಲ್ಲಿ ಸ್ಥಳೀಯರು ಯಶಸ್ವಿಯಾಗಿದ್ದಾರೆ. ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.