ಬೆಂಗಳೂರು: ಬಹುನಿರೀಕ್ಷಿತ ಯುವರತ್ನ ಸಿನಿಮಾ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿರುವಾಗಲೇ ಲಾಕ್ಡೌನ್ ಘೋಷಣೆಯಾಯಿತು. ಬಳಿಕ ಚಿತ್ರ ತಂಡ ಹೆಚ್ಚು ಅಪ್ಡೇಟ್ ನೀಡುತ್ತಿದ್ದು, ಇತ್ತೀಚೆಗಷ್ಟೇ ಚಿತ್ರದ ಎರಡನೇ ಹಂತದ ಡಬ್ಬಿಂಗ್ ಕಾರ್ಯ ಆರಂಭಿಸಿರುವುದಾಗಿ ತಿಳಿಸಿತ್ತು. ಇದೀಗ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
Advertisement
ಹೌದು ಸಿನಿಮಾ ಚಟುವಟಿಕೆಗಳು ನಿಂತರೂ ಚಿತ್ರ ತಂಡ ಸಾಮಾಜಿಕ ಜಾಲತಾಣಗಳ ಮೂಲಕ ಆಗಾಗ ಅಪ್ಡೇಟ್ಗಳನ್ನು ನೀಡುತ್ತಿದೆ. ಇತ್ತೀಚೆಗಷ್ಟೇ ಚಿತ್ರದ ಎರಡನೇ ಹಂತದ ಡಬ್ಬಿಂಗ್ ಕಾರ್ಯ ಪ್ರಾರಂಭವಾಗಿರುವುದಾಗಿ ತಿಳಿಸಿತ್ತು. ಚಿತ್ರದ ನಿರ್ದೇಶಕ ಸಂತೋಷ್ ಆನಂದರಾಮ್ ಟ್ವೀಟ್ ಮಾಡಿ ಎರಡನೇ ಹಂತದ ಡಬ್ಬಿಂಗ್ ಪ್ರಾರಂಭವಾಗಿರುವ ಕುರಿತು ಮಾಹಿತಿ ನೀಡಿದ್ದರು.
Advertisement
Back on Track ! #Yuvarathnaa 2half dubbing started …. #PowerofYouth @PuneethRajkumar @hombalefilms @VKiragandur pic.twitter.com/mQMOIL4KF7
— Santhosh Ananddram (@SanthoshAnand15) May 25, 2020
Advertisement
ಇದೀಗ ಚಿತ್ರ ತಂಡ ಮತ್ತೊಂದು ಸುದ್ದಿಯನ್ನು ಹೊರ ಬಿಟ್ಟಿದ್ದು, ಹೊಸ ಸ್ಟಿಲ್ ಬಿಡುಗಡೆ ಮಾಡಿದೆ. ಹೌದು ಯುವರತ್ನ ಸಿನಿಮಾದ ‘ಪವರ್ ಆಫ್ ಯೂತ್’ ಹಾಡಿನ ಸ್ಟಿಲ್ ಒಂದನ್ನು ಬಿಡುಗಡೆ ಮಾಡಿದ್ದು, ಸಂತೋಷ್ ಆನಂದರಾಮ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಕಮೆಂಟ್ಗಳ ಮೂಲಕ ಅಭಿಪ್ರಾಯ ತಿಳಿಸುತ್ತಿದ್ದಾರೆ.
Advertisement
A Still from #PowerofYouth Song !#YuvaRathnaa #KingofEntertainment #PowerStar @PuneethRajkumar @hombalefilms @VKiragandur @MusicThaman @Karthik1423 pic.twitter.com/MjHt9JZnUB
— Santhosh Ananddram (@SanthoshAnand15) May 27, 2020
ಈ ಸ್ಟಿಲ್ ತುಂಬಾ ವಿಶೇಷವಾಗಿದ್ದು, ಅಪ್ಪು ಬಾಕ್ಸಿಂಗ್ ರಿಂಗ್ನಲ್ಲಿ ಸ್ಟೈಲಿಶ್ ಆಗಿ ನಿಂತಿದ್ದಾರೆ. ಹಿಂದೆ ಹಸಿರು ಬಣ್ಣದ ಲೈಟ್ಗಳಿದ್ದು, ಸಂಭ್ರಮಿಸುತ್ತಿರುವ ಭಂಗಿಯಲ್ಲಿ ಅಪ್ಪು ಪೋಸ್ ನೀಡಿದ್ದಾರೆ. ಅಲ್ಲದೆ ಅಪ್ಪು ಇತ್ತೀಚೆಗೆ ಫುಲ್ ವರ್ಕೌಟ್ ಮಾಡುವುದರಲ್ಲಿ ನಿರತರಾಗಿದ್ದು, ಈ ಸ್ಟಿಲ್ನಲ್ಲಿ ಸಹ ಸಣ್ಣಗಾದಂತೆ ಕಾಣುತ್ತಿದ್ದಾರೆ. ಹಾಡಿನ ಚಿತ್ರೀಕರಣದ ಸಮಯದಲ್ಲಿ ಈ ಫೋಟೋ ತೆಗೆದಿದ್ದು, ಹಿಂದೆ ನೃತ್ಯ ಕಲಾವಿದರೂ ಇದ್ದಾರೆ.
ಇದೀಗ ಅಪ್ಪು ಸ್ಟಿಲ್ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಈ ಹಿಂದೆ ಸಹ ಪುನೀತ್ ಅವರ ಸಿನಿಮಾದಲ್ಲಿನ ಲುಕ್, ಟ್ವಿಟ್ಟರ್ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿತ್ತು. ಈಗಾಗಲೇ ಚಿತ್ರದ ಡೈಲಾಗ್ ಟೀಸರ್ ಬಿಡುಗಡೆಯಾಗಿದ್ದು, ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.