ಇಸ್ಲಾಮಾಬಾದ್: ಚಲಿಸುತ್ತಿದ್ದ ಬಸ್ಸಿಗೆ ರೈಲೊಂದು ಡಿಕ್ಕಿ ಹೊಡೆದಿದ್ದು, 19 ಜನ ಸಿಖ್ ಯಾತ್ರಿಕರು ಮೃತಪಟ್ಟಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಪಾಕಿಸ್ತಾನದ ಪಂಜಾಬ್ನ ಶೇಖುಪುರ ಜಿಲ್ಲೆಯಲ್ಲಿ ಶುಕ್ರವಾರ ಸಿಖ್ ಯಾಂತ್ರಿಕರು ಪ್ರಯಾಣಿಸುತ್ತಿದ್ದ ಬಸ್ಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 19 ಸಿಖ್ ಯಾತ್ರಿಕರು ಸಾವನ್ನಪ್ಪಿದ್ದಾರೆ ಮತ್ತು ಎಂಟು ಮಂದಿ ಯಾಂತ್ರಿಕರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
Advertisement
A bus carrying Sikh pilgrims was hit by a train in Sheikhupura district in Pakistan's Punjab, 19 passengers killed, 8 injured: Local media pic.twitter.com/udx1E5Aqv7
— ANI (@ANI) July 3, 2020
Advertisement
ಫಾರೂಕಾಬಾದ್ ರೈಲ್ವೆ ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿದೆ. ರೈಲು ಕರಾಚಿಯಿಂದ ಲಾಹೋರ್ಗೆ ಹೋಗುತ್ತಿತ್ತು. ಈ ವೇಳೆ ರಸ್ತೆ ಕ್ರಾಸಿಂಗ್ ಮಾಡುವಾಗ ತಡೆಗೋಡೆ ಇಲ್ಲದ ಕಾರಣ ಬಸ್ಸು ರೈಲಿಗೆ ಅಡ್ಡ ಬಂದಿದೆ. ಈ ವೇಳೆ ರೈಲು ಬಸ್ಸಿಗೆ ಡಿಕ್ಕಿ ಹೊಡೆದು ಬಸ್ಸು ಜಖಂ ಆಗಿದೆ. ವರದಿಯ ಪ್ರಕಾರ ಸಿಖ್ ಯಾತ್ರಿಕರು ನಂಕನಾ ಪ್ರದೇಶದಿಂದ ಸಾಹಿಬ್ಗೆ ಹಿಂದಿರುಗುತ್ತಿದ್ದರು ಎಂದು ಹೇಳಲಾಗಿದೆ.
Advertisement
Advertisement
ಅಪಘಾತದಲ್ಲಿ ಸಾವನ್ನಪ್ಪಿದವ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಗಾಯಗೊಂಡ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಂಜಾಬ್ ಪ್ರಾಂತ್ಯದ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.