ಗದಗ: ಜಿಲ್ಲೆನಲ್ಲಿ ಬಸ್ ಸಂಚಾರಕ್ಕೆ ಎಲ್ಲ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಸರ್ಕಾರದ ಮಾರ್ಗಸೂಚಿಗಾಗಿ ಸಾರಿಗೆ ಅಧಿಕಾರಿಗಳು ಕಾಯುತ್ತಿದ್ದಾರೆ.
ಜಿಲ್ಲೆಯ ಒಟ್ಟು 7 ಘಟಕಗಳಿಂದ 136 ಬಸ್ ಬಿಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದಕ್ಕಾಗಿ ವಿಭಾಗಿಯ ಘಟಕದಲ್ಲಿ ಸಿಬ್ಬಂದಿಗಳ ಸ್ಕ್ರೀನಿಂಗ್, ಬಸ್ ಗಳಿಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗುತ್ತಿದೆ. ಇಲಾಖೆಯಲ್ಲಿ ಕೆಲಸ ಮಾಡುವ ಮೆಕ್ಯಾನಿಕ್, ಚಾಲಕ, ನಿರ್ವಾಹಕ ಹಾಗೂ ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮಾಡಿದ್ದಾರೆ.
Advertisement
Advertisement
ಬಸ್ ಆಸನಗಳಲ್ಲೂ ನಿಯಮಗಳ ಪಾಲನೆ ಕಡ್ಡಾಯವಾಗಿದೆ. ಅದಕ್ಕಾಗಿ ಬಸ್ನ ಆಸನಗಳಿಗೆ ಕೆಂಪು ಬಣ್ಣದಿಂದ ಮಾರ್ಕ್ ಮಾಡಲಾಗುತ್ತಿದೆ. ಮಾರ್ಕ್ ಮಾಡಿದ ಸ್ಥಳದಲ್ಲಿ ಕೂರದೆ ಅಂತರ ಕಾಯ್ದುಕೊಳ್ಳಲು ಒಂದು ಬಸ್ನಲ್ಲಿ 28 ಜನರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇನ್ನು ಬಸ್ ನಿಲ್ದಾಣದಲ್ಲೂ ಒಂದೇ ಗೇಟ್ ಮೂಲಕ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ. 3 ಗೇಟ್ ಗಳ ಪೈಕಿ, 2 ಗೇಟ್ ಗೆ ಮುಳ್ಳಿನ ಬೇಲಿ ಹಾಕಿ ಮುಚ್ಚಲಾಗಿದೆ. ಒಂದೇ ಗೇಟ್ ತೆರೆಯಲಾಗಿದೆ. ಇದರಿಂದಾಗಿ ಪ್ರಯಾಣಿಕರ ಆರೋಗ್ಯ ತಪಾಸಣೆ ಅನುಕೂಲವಾಗತ್ತದೆ. ಸರ್ಕಾರದ ಮಾರ್ಗಸೂಚಿ ನೋಡಿಕೊಂಡು ಬಸ್ ಬಿಡುವುದಾಗಿ ಗದಗ ಸಾರಿಗೆ ಅಧಿಕಾರಿಗಳು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.