ಬೆಂಗಳೂರು: ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಆನ್ಲೈನ್ ಪಾಠ ಲಭ್ಯವಾಗದ ಬಗ್ಗೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಕೋವಿಡ್ ಕಾರಣದಿಂದ ಈಗ ಎಲ್ಲಾ ಕಡೆಯೂ ಆನ್ಲೈನ್ ಕ್ಲಾಸ್ ನಡೆಯುತ್ತಿದೆ. ಆದರೆ ಬಡತನ ಮತ್ತು ಆರ್ಥಿಕ ಹಿಂದುಳಿಕೆ ಮಕ್ಕಳ ಶಿಕ್ಷಣ ನಿಲ್ಲಿಸಲು ಕಾರಣ ಆಗಬಾರದು ಅಂತಾ ಹೈಕೋರ್ಟ್ ವಿಭಾಗೀಯ ಪೀಠದ ಅಭಿಪ್ರಾಯ ಪಟ್ಟಿದೆ.
Advertisement
Advertisement
ಬಡಮಕ್ಕಳಿಗೆ ಉಚಿತವಾಗಿ ನೆಟ್, ಟ್ಯಾಬ್ ಮತ್ತು ಲ್ಯಾಪ್ ಟಾಪ್ ನೀಡುವಂತೆ ಸಲ್ಲಿಸಲಾಗಿದ್ದ ಪಿಐಎಲ್ ವಿಚಾರಣೆ ನ್ಯಾ.ಬಿ ವಿ ನಾಗರತ್ನ ಮತ್ತು ನ್ಯಾ. ಹಂಚಾಟೆ ಸಂಜೀವ್ಕುಮಾರ್ ಪೀಠದಲ್ಲಿ ನಡೆಯಿತು.
Advertisement
ಶಿಕ್ಷಣ ಮುಂದುವರಿಕೆ ನಿಲ್ಲಿಸಲು ಬಡತನ ಕಾರಣವಾಗಬಾರದು. ಶಾಲೆಗಳನ್ನು ಪುನಾರಂಭಿಸುವ ನಿರ್ಧಾರವನ್ನು ಮಾತ್ರ ಲೆಕ್ಕಿಸದೆ, ರಾಜ್ಯ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸುವ ತುರ್ತು ಅವಶ್ಯಕತೆಯಿದೆ ಎಂದು ಹೇಳಿತು. ಇದನ್ನೂ ಓದಿ : ನೆಟ್ವರ್ಕ್ ಗಾಗಿ ಅಟ್ಟಣಿಗೆ ಕ್ಲಾಸ್ ರೂಂ ನಿರ್ಮಿಸಿದ ಪಬ್ಲಿಕ್ ಹೀರೋ ಶಿಕ್ಷಕ ಸತೀಶ್
Advertisement
ಟೆಕ್ನಿಕಲ್ ಸಮಸ್ಯೆ ಮತ್ತು ಸೌಲಭ್ಯ ಪಡೆಯಲಾಗದವರ ಬಗ್ಗೆ ಗಮನಿಸಬೇಕು. ಅಗತ್ಯ ಸೌಲಭ್ಯ ಕಲ್ಪಿಸುವ ಬಗ್ಗೆ ಹೊಂದಿರುವ ಕಾರ್ಯತಂತ್ರದ ಬಗ್ಗೆ ದಾಖಲೆ ಸಲ್ಲಿಸಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿತು. ಜುಲೈ 29ಕ್ಕೆ ಈ ಅರ್ಜಿಯ ವಿಚಾಣೆಯನ್ನು ಮುಂದೂಡಿಕೆ ಮಾಡಲಾಗಿದೆ.