ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ, ಪಾಲುದಾರ ಅನೂಪ್ ಶೆಟ್ಟಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದು, ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಯನ್ನು ಆಗಸ್ಟ್ 9ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
Advertisement
ಗೆಳೆಯ ಅಜೇಂದ್ರನನ್ನು ಕೊಲೆಗೈದು ಆತನ ಕಾರಿನಲ್ಲೇ ಅನೂಪ್ ಗೋವಾಕ್ಕೆ ತೆರಳಿ ತಲೆಮರೆಸಿಕೊಂಡಿದ್ದ. ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ಆರೋಪಿನ್ನು ವಶಕ್ಕೆ ಪಡೆಯಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳು ಮತ್ತು ಪೊಲೀಸರ ಕಾರ್ಯಾಚರಣೆಯಿಂದ ಆರೋಪಿಯ ಬಂಧನವಾಗಿದೆ. ಇದನ್ನೂ ಓದಿ: ಸತ್ತವನ ಕಾರಿನಲ್ಲೇ ಕೊಲೆಗಾರ ಎಸ್ಕೇಪ್- ಆರೋಪಿ ಅನೂಪ್ ಶೆಟ್ಟಿ ಗೋವಾದಲ್ಲಿ ಅಂದರ್
Advertisement
Advertisement
ಅಜೇಂದ್ರ ಶೆಟ್ಟಿಯ ಚಿನ್ನದ ಚೈನ್, ಆಭರಣಗಳು, ಕೃತ್ಯಕ್ಕೆ ಬಳಸಿದ ಆಯುಧಗಳನ್ನು ಇನ್ನಷ್ಟೇ ವಶಕ್ಕೆ ಪಡೆಯಬೇಕಿದೆ. ಪ್ರಕರಣದಲ್ಲಿ ಬೇರೆ ಯಾರಾದ್ರೂ ಶಾಮೀಲಾಗಿದ್ದಾರೆ ಎಂಬ ಬಗ್ಗೆ ಇನ್ನಷ್ಟು ಕೂಲಂಕುಶ ತನಿಖೆ ಆಗಬೇಕಾಗಿದೆ. ಆರೋಪಿಯ ವಿಚಾರಣೆ ಕೂಡ ಮಾಡಬೇಕಾಗಿದೆ ಎಂದು ಎಸ್ ಪಿ ವಿಷ್ಣುವರ್ಧನ್ ಮಾಹಿತಿ ನೀಡಿದರು. ಇದನ್ನೂ ಓದಿ: ಉಡುಪಿಯಲ್ಲಿ ಸರಣಿ ಕಳ್ಳತನ – ಮೂರು ಮನೆಗೆ ಕನ್ನ ಹಾಕಿದ ಖದೀಮರು