ವಾಷಿಂಗ್ಟನ್: ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡನ್ ಇಂದು ಫೈಜರ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಫೈಜರ್ ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡಿರುವ ಬೈಡನ್, ಇದು ಸಂಪೂರ್ಣ ಸುರಕ್ಷಿತವಾಗಿದೆ ಎಂದು ಹೇಳಿದ್ದಾರೆ.
Advertisement
ಬೈಡನ್ ಅವರಗಿಂತ ಕೆಲ ಗಂಟೆಗಳ ಮೊದಲು ಅವರ ಪತ್ನಿ ಜಿಲ್ ಫೈಜರ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಇಬ್ಬರಿಗೂ ನೇವಾರ್ಕ್ ಡೆಲವೇರ್ನ್ ಕ್ರಿಸ್ಟಿನಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ವ್ಯಾಕ್ಸಿನೇಷನ್ ನೀಡಲಾಗಿದ್ದು, ಎಲ್ಲ ದೃಶ್ಯಗಳನ್ನ ಚಿತ್ರೀಕರಿಸಲಾಗಿದೆ. ಡೆಮೊಕ್ರೆಟಿಕ್ ಪಕ್ಷದ ಅತಿದೊಡ್ಡ ನಾಯಕ ಫೈಜರ್ ಲಸಿಕೆ ಹಾಕಿಸಿಕೊಂಡಂತಾಗಿದೆ. ಸದ್ಯ ಮೊದಲ ಡೋಸ್ ನೀಡಲಾಗಿದ್ದು, ತದನಂತರ ಎರಡನೇ ಡೋಸ್ ನೀಡಲಾಗುವುದು. ಎರಡನೇ ಡೋಸ್ ನೀಡುವ ದಿನಾಂಕವನ್ನ ಅಧ್ಯಕ್ಷರ ವೈದ್ಯಕೀಯ ತಂಡ ನಿಗದಿ ಮಾಡಲಿದೆ.
Advertisement
Advertisement
ಆಸ್ಪತ್ರೆಗೆ ತೆರಳಿದ ವೇಳೆ ಜೋ ಬೈಡನ್, ನಾನು ವ್ಯಾಕ್ಸಿನ್ ತೆಗೆದುಕೊಳ್ಳಲು ಸಂಪೂರ್ಣ ಸಿದ್ಧನಿದ್ದೇನೆ ಎಂದು ಹೇಳಿದ್ದರು. ಲಸಿಕೆ ತೆಗೆದುಕೊಂಡ ನಂತ್ರ ವೈದ್ಯಕೀಯ ತಂಡಕ್ಕೆ ಧನ್ಯವಾದ ಸಲ್ಲಿಸಿದ್ದು, ನೀವು ನಮ್ಮ ಹೆಮ್ಮೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಲಸಿಕೆ ಪಡೆದ ಬಳಿಕ ಮಾಧ್ಯಮಗಳನ್ನ ಉದ್ದೇಶಿಸಿ ಮಾತನಾಡಿದ ಬೈಡನ್, ವ್ಯಾಕ್ಸಿನ್ ಬಗ್ಗೆ ಹೆದರುವ ಅವಶ್ಯಕತೆ ಇಲ್ಲ. ನನ್ನ ಜೊತೆ ಪತ್ನಿ ಜಿಲ್ ಸಹ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ. ಜನತೆ ವೈಜ್ಞಾನಿಕ ಮತ್ತು ತಜ್ಞರ ಮೇಲೆ ನಂಬಿಕೆ ಇಡಬೇಕು ಎಂದು ಹೇಳಿದ್ದಾರೆ.
Advertisement
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದುವರೆಗೂ ವ್ಯಾಕ್ಸಿನ್ ಹಾಕಿಸಿಕೊಂಡಿಲ್ಲ. ವೈಸ್ ಪ್ರೆಸಿಡೆಂಟ್ ಮೈಕ್ ಫೆಂಸ್ ಶುಕ್ರವಾರ ತಮ್ಮ ಪತ್ನಿ ಜೊತೆ ಆಸ್ಪತ್ರೆಗೆ ತೆರಳಿ ಫೈಜರ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ. ವ್ಯಾಕ್ಸಿನ್ ಬಗೆಗಿನ ಗೊಂದಲ, ಭಯವನ್ನ ದೂರ ಮಾಡುವ ಉದ್ದೇಶದಿಂದ ಬಿಲ್ ಕ್ಲಿಂಟನ್, ಜಾರ್ಜ್ ಬುಶ್ ಜೂನಿಯರ್ ಮತ್ತು ಬರಾಕ್ ಓಬಾಮಾ ಮಾಧ್ಯಮಗಳ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಲಸಿಕೆ ಪಡೆಯಲಿದ್ದಾರೆ.
Today, I received the COVID-19 vaccine.
To the scientists and researchers who worked tirelessly to make this possible — thank you. We owe you an awful lot.
And to the American people — know there is nothing to worry about. When the vaccine is available, I urge you to take it. pic.twitter.com/QBtB620i2V
— Joe Biden (@JoeBiden) December 22, 2020