ಬೆಂಗಳೂರು: ಸುಬ್ರಮಣ್ಯ ನಗರದಲ್ಲಿ ಎಟಿಎಂಗೆ ಹಣ ತುಂಬುವ ವಾಹನದ ಚಾಲಕ ಹಣವಿರುವ ಬ್ಯಾಗ್ಗಳನ್ನು ಹೊತ್ತು ಎಸ್ಕೇಪ್ ಆಗಿರುವ ಪ್ರಕರಣಕ್ಕೆ ಇದೀಗ ಟಿಸ್ಟ್ ಸಿಕ್ಕಿದೆ.
ಆರೋಪಿಯನ್ನು ಯೋಗೇಶ್ ಎಂದು ಗುರುತಿಸಲಾಗಿದ್ದು, ಈತ ಸೆಕ್ಯೂರ್ ವಾಲಿಯ ಚಾಲಕನಾಗಿದ್ದ. ಎಟಿಎಂ ಹಣ ಕದ್ದು ಮದುವೆಯಾಗಿ ಪತಿ ಬಿಟ್ಟಿದ್ದ ಅತ್ತೆ ಮಗಳ ಜೊತೆ ಪರಾರಿಯಾಗಿದ್ದಾನೆ.
Advertisement
Advertisement
ಯೊಗೇಶ್ಗೆ ಕೂಡ ಈಗಾಗಲೇ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಆದರೂ ಯೋಗೇಶ್ ಅತ್ತೆ ಮಗಳನ್ನ ಪ್ರೀತಿಸುತ್ತಿದ್ದ. ಪ್ರೇಯಸಿ ಜೊತೆ ಬದುಕು ನಡೆಸಲು 65 ಲಕ್ಷ ಹಣ ದೋಚಿ ಆಟೋದಲ್ಲಿ ಪರಾರಿಯಾಗಿದ್ದ. ನಂತರ ಪ್ರೇಯಸಿ ಅತ್ತೆ ಮಗಳನ್ನ ಪಿಕಪ್ ಮಾಡಿ ಎಸ್ಕೇಪ್ ಆಗಿದ್ದ.
Advertisement
ಯೋಗೇಶ್ ಮತ್ತು ಆತನ ಪ್ರೇಯಸಿಯ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ. ಘಟನೆಯ ಬಗ್ಗೆ ತನಿಖೆ ನಡೆಸಿದಾಗ ಯೊಗೇಶ್ ಅತ್ತೆ ಮಗಳೂ ಕೂಡ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಸದ್ಯ ಉತ್ತರ ಭಾರತದ ಕಡೆ ಪರಾರಿಯಾಗಿರವ ಬಗ್ಗೆ ಪೊಲೀಸರಿಗೆ ಮಾಹಿತಿ ಇದ್ದು, ವಿಶೇಷ ತಂಡ ರಚಿಸಿ ಸುಬ್ರಹ್ಮಣ್ಯ ನಗರ ಪೊಲೀಸರು ಯೊಗೇಶ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
Advertisement
ಏನಿದು ಘಟನೆ..?
ಆರು ದಿನಗಳ ಹಿಂದೆ ನವರಂಗ್ ಬಳಿಯ ಅಕ್ಸಿಸ್ ಬ್ಯಾಂಕ್ ಬಳಿ ಅಧಿಕಾರಿಗಳು ಎಟಿಎಂಗೆ ಹಣ ತುಂಬಲು ಹೋಗಿದ್ದರು. ಇದೇ ಸಮಯದಲ್ಲಿ ವಾಹನದ ಚಾಲಕನಾಗಿದ್ದ ಯೋಗೇಶ್ ಹಣದೊಂದಿಗೆ ಪರಾರಿಯಾಗಿದ್ದನು. ಗನ್ ಮ್ಯಾನ್ ಮತ್ತು ಮ್ಯಾನೇಜರ್ ಎಟಿಎಂಗೆ ದುಡ್ಡು ಹಾಕಲು ಒಳಗೆ ಹೋಗಿದ್ದರು. ಈ ವೇಳೆ ಯೋಗೇಶ್ ವಾಹನದಲ್ಲಿದ್ದ 65 ಲಕ್ಷ ಹಣ ತೆಗೆದುಕೊಂಡು ಎಸ್ಕೇಪ್ ಆಗಿದ್ದನು. ಅದಿಕಾರಿಗಳು ವಾಪಸ್ ಬಂದು ನೋಡುವಷ್ಟರಲ್ಲಿ ಬ್ಯಾಗ್ಗಳಲ್ಲಿದ್ದ ಹಣದ ಸಮೇತ ಪರಾರಿಯಗಿರುವುದು ತಿಳಿದು ಬಂದಿತ್ತು. ಎಟಿಎಂ ವಾಹನವನ್ನು ಸ್ಥಳದಲ್ಲೇ ಬಿಟ್ಟು ಹಣವಿರುವ ಬ್ಯಾಗ್ಗಳೊಂದಿಗೆ ಪರಾರಿಯಾಗಿದ್ದನು.