ದಾವಣಗೆರೆ: ಪ್ರಿಯಾಂಕ ಖರ್ಗೆ ವಾಜಪೇಯ ಹೆಸರು ಹೇಳಲು ಯೋಗ್ಯತೆ ಇಲ್ಲದ ಬಚ್ಚಾ. ವಾಜಪೇಯಿಯವರ ಬಗ್ಗೆ ಟೀಕೆ ಮಾಡಲು ನಾಚಿಕೆಯಾಗಬೇಕು ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಕಿಡಿಕಾರಿದ್ದಾರೆ.
Advertisement
ಹೊನ್ನಾಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರೇಣುಕಾಚಾರ್ಯ ಅವರು, ಪ್ರಿಯಾಂಕ್ ಖರ್ಗೆ ಈ ಬಗ್ಗೆ ಕ್ಷಮೆ ಕೇಳಬೇಕು, ಇಲ್ಲದಿದ್ರೆ, ಅಧಿವೇಶನದಲ್ಲಿ ಸರಿಯಾದ ಉತ್ತರ ಕೊಡುತ್ತೇವೆ. ವಾಜಪೇಯಿ ಅವರು ಸಾಕಷ್ಟು ಜನಪರವಾದ ಕೆಲಸ ಮಾಡಿದವರು. ಇಡೀ ದೇಶವೇ ಮೆಚ್ಚುಕೊಳ್ಳುತ್ತಿದೆ. ಆದರೆ ಅಂತವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದು ಕಾಂಗ್ರೆಸ್ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ವಾಜಪೇಯಿ ಹೆವೀ ಡ್ರಿಂಕರ್ – ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ
Advertisement
Advertisement
ಚತುಷ್ಪಥ ರಸ್ತೆಗಳಿಗೆ ಇದ್ದ ವಾಜಪೇಯಿ ಹೆಸರನ್ನು ಕಿತ್ತಿಹಾಕಿದಾಗ ನಿಮ್ಮ ಪೌರುಷ, ಪುರುಷತ್ವ ಎಲ್ಲಿ ಹೋಗಿತ್ತು, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಚತುಷ್ಪಥ ರಸ್ತೆ ನಿರ್ಮಾಣವಾದಗ ಹೈವೆಗಿದ್ದ ವಾಜಪೇಯಿ ಅವರ ಹೆಸರನ್ನು ಕಿತ್ತಿಹಾಕಿದ್ದು ಇದೆ ಕಾಂಗ್ರೆಸ್ನವರಿಗೆ ನಾಚಿಕೆ ಆಗಬೇಕು. ವಾಜಪೇಯ ಅಜಾತಶತ್ರು ಅವರ ಬಗ್ಗೆ ಮಾತನಾಡಲು ಪ್ರಿಯಾಂಕ್ಗೆ ಯೋಗ್ಯತೆ ಇಲ್ಲ. ಕೂಡಲೇ ಪ್ರಿಯಾಂಕ್ ಖರ್ಗೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
Advertisement