ಮೈಸೂರು: ಇತ್ತೀಚೆಗೆ ನವಜೋಡಿಯೊಂದು ಪ್ರಿ ವೆಡ್ಡಿಂಗ್ ಫೋಟೋಶೂಟ್ ವೇಳೆ ನೀರಿಗೆ ಬಿದ್ದು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರತ್ಯಕ್ಷದರ್ಶಿಗಳು ಅದರ ಕಾರಣ ಬಿಚ್ಚಿಟ್ಟಿದ್ದಾರೆ.
Advertisement
ಹೌದು. ಪೊಲೀಸರ ಮುಂದೆ ಪ್ರತ್ಯಕ್ಷದರ್ಶಿಗಳು ತಮ್ಮ ಹೇಳಿಕೆ ದಾಖಲಿಸಿದ್ದು, ಹೀಲ್ಡ್ ಚಪ್ಪಲಿ ಹಾಗೂ ಭಾರವಾದ ಡ್ರೆಸ್ ಧರಿಸಿದ್ದರಿಂದ ಈ ಅವಘಡ ಸಂಭವಿಸಿದೆ. ಜೋಡಿ ಫೋಟೋಶೂಟ್ ವೇಳೆ ಏಕಾಏಕಿ ತೆಪ್ಪ ಮಗುಚಿ ಬಿದ್ದಿದೆ. ತೆಪ್ಪ ಮಗುಚಲು ಹೀಲ್ಡ್ ಚಪ್ಪಲಿ, ಭಾರದ ಡ್ರೆಸ್ ಕೂಡ ಕಾರಣ ಎಂದು ಅವರು ಪೊಲೀಸರ ಮುಂದೆ ವಿವರಿಸಿದ್ದಾರೆ.
Advertisement
Advertisement
ಮೈಸೂರಿನಿಂದ ಫೋಟೋಶೂಟ್ಗಾಗಿ ಮುಡುಕುತೊರೆಗೆ ಆಗಮಿಸಿದ್ದ ಜೋಡಿ, ನದಿ ನೋಡಿದ ಮೇಲೆ ನೀರಿನಲ್ಲಿ ಫೋಟೋ ತೆಗೆಸಿಕೊಳ್ಳಲು ನಿರ್ಧಾರ ಮಾಡಿದರು. ಹೀಗಾಗಿ ಹೈಹೀಲ್ಡ್ ಚಪ್ಪಲಿ ಹಾಕಿಕೊಂಡು ತೆಪ್ಪ ಹತ್ತಿದ ಶಶಿಕಲಾ, ಕೆಲಕಾಲ ನಿಂತುಕೊಂಡೇ ಇದ್ದರು. ನಂತರ ಕುಳಿತುಕೊಳ್ಳಲು ಹೋದಾಗ ಹೀಲ್ಡ್ ಚಪ್ಪಲಿ ಸ್ಲಿಪ್ ಆಗಿದ್ದು, ತೆಪ್ಪ ಏಕಾಏಕಿ ಮಗುಚಿದೆ. ಪರಿಣಾಮ ಈಜುಬಾರದೆ ಚಂದ್ರು ಹಾಗೂ ಶಶಿಕಲಾ ಇಬ್ಬರೂ ಮೃತಪಟ್ಟಿದ್ದಾರೆ.
Advertisement
ಘಟನೆ ಸಂಬಂಧ ಫೋಟೋಗ್ರಾಫರ್ ಕೀರ್ತಿ, ನಾವಿಕ ಮೂಗಪ್ಪ ಮೇಲೂ ಪ್ರಕರಣ ದಾಖಲು ಮಾಡಲಾಗಿದೆ. ತಲಕಾಡು ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ತಲಕಾಡಿನಲ್ಲಿ ಪ್ರಿ ವೆಡ್ಡಿಂಗ್ ಫೋಟೋಶೂಟ್ – ತೆಪ್ಪ ಮುಳುಗಿ ನವಜೋಡಿ ಸಾವು