ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪರ್ಸನಲ್ ವೆಬ್ಸೈಟ್ ನ (@narendramodi_in) ಟ್ವಿಟ್ಟರ್ ಖಾತೆ ಹ್ಯಾಕ್ ಮಾಡಲಾಗಿದೆ. ಬುಧವಾರ ರಾತ್ರಿ ಹ್ಯಾಕರ್ಸ್ ಈ ಟ್ವಿಟ್ಟರ್ ಖಾತೆಯನ್ನ ಮಾಡಿದ್ದಾರೆ. ಬರಾಕ್ ಒಬಮಾ, ಎಲೆನ್ ಮಸ್ಕ್ ಅವರ ಖಾತೆಗಳ ರೀತಿಯಲ್ಲಿ ಮೋದಿಯವರ ವೆಬ್ಸೈಟ್ ಹ್ಯಾಕ್ ಮಾಡಲಾಗಿದೆ.
narendramodi.in ಟ್ವಿಟ್ಟರ್ ಅಕೌಂಟ್ನಲ್ಲಿ ವೆಬ್ಸೈಟ್ ಗೆ ಸಂಬಂಧಿಸಿದ ಮಾಹಿತಿ ಮತ್ತು ನಮೋ ಆ್ಯಪ್ ಗೆ ಕುರಿತ ಅಪಡೇಟ್ ನೀಡಲಾಗುತ್ತಿತ್ತು. ಅಕೌಂಟ್ ಹ್ಯಾಕ್ ಕುರಿತು ಪ್ರತಿಕ್ರಿಯಿಸಿರುವ ಟ್ವಟ್ಟರ್, ನರೇಂದ್ರ ಮೋದಿಯವರ ವೆಬ್ಸೈಟ್ ಖಾತೆಯಲ್ಲಿ ಉಂಟಾದ ಸಮಸ್ಯೆ ಗಮನಕ್ಕೆ ಬಂದಿದೆ. ಸಮಸ್ಯೆ ಬಗೆಹರಿಸುವ ಕಾರ್ಯ ನಡೆಯುತ್ತಿದೆ. ಈ ಸಂಬಂಧ ತನಿಖೆ ನಡೆಸಲಾಗುವುದು ಎಂದು ಹೇಳಿದೆ.
Advertisement
Advertisement
ಬುಧವಾರ ರಾತ್ರಿ ಸುಮಾರು ಮೂರು ಗಂಟೆಗೆ ನರೇಂದ್ರ ಮೋದಿಯವರ ಖಾತೆಯಿಂದ ಒಂದು ಟ್ವೀಟ್ ಮಾಡಲಾಗಿತ್ತು. ಈ ಖಾತೆಯನ್ನ ಜಾನ್ ವಿಕ್ ([email protected]) ಮೂಲಕ ಹ್ಯಾಕ್ ಮಾಡಲಾಗಿದೆ. ನಾವು ಪೇಟಿಎಂ ಮಾಲ್ ಹ್ಯಾಕ್ ಮಾಡಿಲ್ಲ. ಮಗದೊಂದು ಟ್ವೀಟ್ ನಲ್ಲಿ ಕ್ರಿಪ್ಟೋ ಕರೆನ್ಸಿಯಲ್ಲಿ ನ್ಯಾಶನಲ್ ರಿಲೀಫ್ ಫಂಡ್ಗೆ ಹಣ ಹಾಕುವಂತೆ ಹೇಳಲಾಗಿದೆ. ಆದ್ರೆ ಈ ಟ್ವೀಟ್ ಕೆಲವೇ ಕ್ಷಣಗಳಲ್ಲಿ ಡಿಲೀಟ್ ಮಾಡಲಾಗಿದೆ. ಹ್ಯಾಕ್ ಬಳಿಕ ಅರ್ಧಗಂಟೆಯಲ್ಲಿ ಸಮಸ್ಯೆ ಪರಿಹರಿಸಲಾಗಿದೆ.