ಬೆಂಗಳೂರು: ಸಂಸದ ಪ್ರತಾಪ್ ಸಿಂಹಗೆ ಯಾವುದೇ ನಿಲುವಿನಲ್ಲಿ ಬದ್ಧತೆ ಇಲ್ಲ, ಪ್ರತಿ ಬಾರಿಯೂ ನಿಲುವು ಬದಲಿಸೋ ಅಪ್ರಬುದ್ಧ ರಾಜಕಾರಣಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಪ್ರತಾಪ ಸಿಂಹ ನನ್ನನ್ನು ಸಿದ್ದರಾಮಯ್ಯ ಗಾರು ಎಂದು ಸಂಬೋಧಿಸಿದ್ದಾರೆ. ಪ್ರತಾಪ್ ಸಿಂಹ ತಮಗೂ ತೆಲಗು ಬರುತ್ತೆ ಅಂತಾ ತೋರಿಸಲು ಯತ್ನಿಸಿದ್ದಾರೆ. ಇದು ವ್ಯಂಗ್ಯ ಇರಬಹುದಾ ಅಂತ ನನಗೆ ಗೊತ್ತಿಲ್ಲ. ಗಾರು ಎಂಬುದನ್ನ ಸೂಕ್ತ ರೀತಿಯಲ್ಲಿ ಸ್ವೀಕರಿಸುತ್ತೇನೆ. ಆದರೆ ಪಾಪಾ ಬಹುವಚನದಲ್ಲಿ ಮಾತಾನಾಡಿದ್ದಾರೆ ಎಂದರು.
Advertisement
Advertisement
ಚಾಮರಾಜನಗರ ಪ್ರಕರಣದಲ್ಲಿ ರೋಹಿಣಿ ಸಿಂಧೂರಿ ಪರ ಮಾತನಾಡಿದ್ದರು. ಈ ಹಿಂದೆ ರೋಹಿಣಿ ಸಿಂಧೂರಿಗೆ ಬೆಂಬಲಿಸಿದ್ದು ಯಾರು? ಈಗ ಸ್ವಾರ್ಥಕ್ಕಾಗಿ ವಿರೋಧಿಸುತ್ತಿದ್ದಾರೆ. ಭೂ ಮಾಫಿಯಾದಿಂದ ವರ್ಗಾವಣೆಯಾಗಿದೆ ಮತ್ತು ಶಾಸಕ ಸಾ.ರಾ.ಮಹೇಶ್ ಹೆಸರನ್ನ ರೋಹಿಣಿ ಸಿಂಧೂರಿ ಹೇಳಿದ್ದಾರೆ. ರಾಜಕಾಲುವೆ ಮೇಲೆ ಕಟ್ಟಡ ಕಟ್ಟಿದ್ರೆ ಈ ಬಗ್ಗೆ ತನಿಖೆ ನಡೆಯಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಜಗಳ ನಡೆಯದೇ ಇರಲು ಅಂದು ಸಿಂಧೂರಿಯನ್ನು ಸಮರ್ಥಿಸಿಕೊಂಡಿದ್ದೆ – ಪ್ರತಾಪ್ ಸಿಂಹ
Advertisement
Advertisement
ಸರ್ಕಾರ ಯೂನಿಟ್ ಗೆ 30% ರಷ್ಟು ಹೆಚ್ಚಳ ಮಾಡಿದೆ. ಕೊರೊನಾ ಸಂಕಷ್ಟದಲ್ಲಿ ವಿದ್ಯುತ್ ದರ ಹೆಚ್ಚಳ ಮಾಡಿದ್ದು ಸರಿಯಲ್ಲ. ಇತ್ತ ಪೆಟ್ರೋಲ್, ಗ್ಯಾಸ್ ಬೆಲೆ ಸಹ ಏರಿಕೆಯಾಗಿದೆ. ಅಚ್ಚೇದಿನ ಆಯೇಗಾ ಅಂತಾರೆ. ಇದೆನಾ ಅಚ್ಚೇದಿನ್ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿಯೇ ವಿದ್ಯುತ್ ಉತ್ಪಾದನೆ ಆಗುತ್ತಿದ್ದರೂ, ಅದಾನಿ ಕಂಪನಿಯಿಂದ ಏಕೆ ಖರೀದಿಸಬೇಕು ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ರಾಜಕಾಲುವೆ ಮೇಲೆ ಕಲ್ಯಾಣ ಮಂಟಪವಿದ್ದರೆ ರಾಜಕೀಯ ನಿವೃತ್ತಿ: ಸಾರಾ ಮಹೇಶ್
ಐದು ದಿನ ಪ್ರತಿಭಟನೆ: ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ಮಾಡುವಂತೆ ಎಐಸಿಸಿ ಸೂಚಿಸಿದೆ. ನಾಳೆಯಿಂದ ಐದು ದಿನಗಳ ಕಾಲ ಪೆಟ್ರೋಲ್ ಬಂಕ್ ಗಳ ಮುಂದೆ ಧರಣಿ ಮಾಡುತ್ತೇನೆ. ಇಡೀ ದೇಶದಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ಮಾಹಿತಿ ನೀಡಿದರು.
ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಸೂಚಿಸಿ: ಸ್ಪೀಕರ್ಗೆ ಸಿದ್ದರಾಮಯ್ಯ ಪತ್ರ https://t.co/Ek2xvGQKvG#VishweshwarHegdeKageri #Siddaramaiah #BJP #Congress #KannadaNews @siddaramaiah @CMofKarnataka
— PublicTV (@publictvnews) June 10, 2021