ಬೆಂಗಳೂರು: ಇತ್ತೀಚೆಗಷ್ಟೆ ಸ್ಯಾಂಡಲ್ವುಡ್ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದ್ದರು. ಇದೀಗ ಶಿವಣ್ಣ ಕುಟುಂಬಸ್ಥರು ಮತ್ತು ಸ್ನೇಹಿತರ ಜೊತೆ ರೆಸಾರ್ಟಿನಲ್ಲಿ ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ. ಇದನ್ನೂ ಓದಿ: ಮೈಸೂರು ಮೃಗಾಲಯಕ್ಕೆ ಹ್ಯಾಟ್ರಿಕ್ ಹೀರೋ ಭೇಟಿ
Advertisement
ಕನಕಪುರ ರಸ್ತೆಯ ಬೇವು ರೆಸಾರ್ಟಿನಲ್ಲಿ ಸೆಂಚುರಿ ಸ್ಟಾರ್ ಸ್ನೇಹಿತರು, ಕುಟುಂಬ ಸದಸ್ಯರ ಜೊತೆ ಭೇಟಿ ನೀಡಿದ್ದಾರೆ. ಅಲ್ಲದೇ ಪ್ರಕೃತಿ ಮಡಿಲಲ್ಲಿ ಶಿವಣ್ಣ ವಾರಂತ್ಯ ಕಳೆಯುತ್ತಿದ್ದಾರೆ. ಜೊತೆಗೆ ಸ್ನೇಹಿತರ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇದೀಗ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
Advertisement
Advertisement
ಕೆಲ ದಿನಗಳ ಹಿಂದೆಯಷ್ಟೆ ಪತ್ನಿ, ಇಬ್ಬರು ಮಕ್ಕಳು ಹಾಗೂ ಅಳಿಯನ ಜೊತೆ ಶಿವಣ್ಣ ಮೈಸೂರಿನ ಮೃಗಾಲಯಕ್ಕೆ ಭೇಟಿ ನೀಡಿದ್ದರು. ಇದೇ ವೇಳೆ ತಾವು ದತ್ತು ಪಡೆದ ಪಾರ್ವತಿ ಆನೆಗೆ ಆಹಾರ ತಿನ್ನಿಸಿ ಖುಷಿಪಟ್ಟಿದ್ದರು. ಅಲ್ಲದೇ ಶಿವರಾಜ್ ಕುಮಾರ್ ಅವರು ಮೃಗಾಲಯದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು, ಇಡೀ ಮೃಗಾಲಯ ಸುತ್ತಾಡಿ ಪ್ರಾಣಿಗಳನ್ನು ಕಂಡು ಸಂತಸಪಟ್ಟಿದ್ದರು.
Advertisement
ಕಳೆದ ಆಗಸ್ಟ್ ತಿಂಗಳಲ್ಲಿ ಶಿವಣ್ಣ ಅವರು ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ‘ಪಾರ್ವತಿ’ ಎಂಬ ಹೆಸರಿನ ಆನೆಯನ್ನು 75 ಸಾವಿರ ನೀಡಿ ದತ್ತು ಪಡೆದುಕೊಂಡಿದ್ದರು. ಒಂದು ವರ್ಷದ ಅವಧಿಗೆ ಅಂದರೆ 2020 ಆಗಸ್ಟ್ 19 ರಿಂದ 2021 ಆಗಸ್ಟ್ 19 ರವರೆಗೆ ಈ ಆನೆಯನ್ನು ನಟ ದತ್ತು ಸ್ವೀಕರಿಸಿದ್ದಾರೆ.