ದುಬೈ: ಸ್ಪಿನ್ನರ್ ಸುನಿಲ್ ನರೈನ್ ಬೌಲಿಂಗ್ ಶೈಲಿಯ ಬಗ್ಗೆ ಎದ್ದ ಪ್ರಶ್ನೆಗಳಿಗೆ ಈಗ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಈಗ ಸ್ಪಷ್ಟನೆ ನೀಡಿದೆ.
ಅ.10 ರಂದು ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಅಧಿಕಾರಿಗಳು ಬೌಲಿಂಗ್ ಶೈಲಿಯನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಈಗ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
Advertisement
Advertisement
ಹೇಳಿಕೆಯಲ್ಲಿ ಏನಿದೆ?
2012ರಿಂದ 115 ಐಪಿಎಲ್ ಪಂದ್ಯ 2015ರಿಂದ 68 ಪಂದ್ಯ ಆಡಿರುವ ನರೈನ್ ಅವರ ಬೌಲಿಂಗ್ ಶೈಲಿಯ ಬಗ್ಗೆ ಅನುಮಾನ ಮೂಡಿರುವುದು ಅಚ್ಚರಿ ತಂದಿದೆ. ಈ ಹಿಂದೆ ಬೌಲಿಂಗ್ ಶೈಲಿಯ ಬಗ್ಗೆ ಅನುಮಾನ ಬಂದಾಗ ಐಸಿಸಿಯ ಎಸ್ಆರ್ಎಎಸ್ಎಸ್ಸಿನಲ್ಲಿ ತೇರ್ಗಡೆಯಾಗಿದ್ದಾರೆ.
Advertisement
ಈ ವಿಚಾರ ಸಂಬಂಧ ಐಪಿಎಲ್ ನಡೆಸುವ ಎಲ್ಲ ಪ್ರಕ್ರಿಯೆಗಳಿಗೆ ನಾವು ಸಹಕಾರ ನೀಡುತ್ತೇವೆ. ಈ ವಿಚಾರ ಶೀಘ್ರವೇ ಇತ್ಯರ್ಥವಾಗಬಹುದು ಎಂಬ ನಿರೀಕ್ಷೆಯನ್ನು ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದೆ. ಇದನ್ನೂ ಓದಿ: ಐಪಿಎಲ್ನಲ್ಲಿ ಫಿಕ್ಸಿಂಗ್? – ಭಾರೀ ಚರ್ಚೆಗೆ ಗ್ರಾಸವಾಗಿದೆ ಮುಂಬೈ ಇಂಡಿಯನ್ಸ್ ಟ್ವೀಟ್
Advertisement
ಯಾಕೆ ಅನುಮಾನ?
ಕ್ರಿಕೆಟ್ನಲ್ಲಿ ಬೌಲರ್ ಬಾಲ್ ಎಸೆಯುವುದಕ್ಕೆ ನಿಷೇಧವಿದೆ. ಈಗ ನರೈನ್ ಬಾಲ್ ಎಸೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಆರೋಪ ಬರಲು ಕಾರಣವಾಗಿದ್ದು ಶನಿವಾರ ನಡೆದ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ನಡೆದ ಪಂದ್ಯ.
165 ರನ್ಗಳ ಸುಲಭ ಸವಾಲು ಪಡೆದ ಪಂಜಾಬ್ ಪಂದ್ಯವನ್ನು ಗೆಲ್ಲಬಹುದು ಎಂದೇ ಭಾವಿಸಲಾಗಿತ್ತು. ಕೊನೆಯ 18 ಎಸೆತಗಳಲ್ಲಿ ಪಂಜಾಬ್ ತಂಡಕ್ಕೆ ಗೆಲ್ಲಲು 22 ರನ್ಗಳ ಅಗತ್ಯವಿತ್ತು.
18ನೇ ಓವರ್ ಮಾಡಿದ್ದ ನರೈನ್ ಅವರು ನಿಕೂಲಸ್ ಪೂರನ್ ಅವರನ್ನು ಬೌಲ್ಡ್ ಮಾಡಿದ್ದರು. ಈ ಮೂಲಕ ಪಂದ್ಯಕ್ಕೆ ರೋಚಕ ತಿರುವು ನೀಡಿದ್ದರೂ ಈ ಬೌಲಿಂಗ್ ಶೈಲಿಯೇ ಈಗ ನರೈನ್ ಅವರಿಗೆ ಸಂಕಷ್ಟ ತಂದಿಟ್ಟಿದೆ. ಈ ಓವರ್ನಲ್ಲಿ 2 ರನ್ ನೀಡಿ 1 ವಿಕೆಟ್ ಪಡೆಯುವ ಮೂಲಕ ನರೈನ್ ಪಂದ್ಯವನ್ನು ಕೋಲ್ಕತ್ತಾ ಪರ ವಾಲುವಂತ ಮಾಡಿದರು. ಅಂತಿಮವಾಗಿ ಕೋಲ್ಕತ್ತಾ 2 ರನ್ನಿಂದ ರೋಚಕವಾಗಿ ಪಂದ್ಯವನ್ನು ಗೆದ್ದುಕೊಂಡಿತ್ತು.
ಪಂದ್ಯದ ನಂತರ ನರೈನ್ ಅವರ ಅನುಮಾನಾಸ್ಪದ ಬೌಲಿಂಗ್ ಕ್ರಮದ ಬಗ್ಗೆ ಆನ್-ಫೀಲ್ಡ್ ಅಂಪೈರ್ಗಳು ದೂರು ನೀಡಿದ್ದರು. ನರೈನ್ ಒಂದು ವೇಳೆ ಮತ್ತೆ ಅದೇ ರೀತಿಯಲ್ಲಿ ಥ್ರೋ ಮಾಡಿದ್ದಲ್ಲಿ ಬೌಲಿಂಗ್ನಿಂದ ಅಮಾನತಾಗಲಿದ್ದಾರೆ. ಮತ್ತೆ ನರೈನ್ ಬೌಲಿಂಗ್ ಮಾಡಬೇಕಾದರೆ ಬಿಸಿಸಿಐ ಅನುಮತಿ ನೀಡಬೇಕಾಗುತ್ತದೆ.