ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೊರೊನಾ ಆತಂಕದ ಮಧ್ಯೆ ಕೆಲ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣ ಪಂಚಾಯ್ತಿ ಚುನಾವಣೆ ನಡೆಯುತ್ತಿದೆ.
ಬೆಳಗ್ಗೆ 07 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಮತದಾರರು ಆಗಮಿಸಿ ಮತ ಚಲಾಯಿಸ್ತಿದ್ದಾರೆ. ಆದರೆ ಕೋವಿಡ್ ಆತಂಕ ಇರುವ ಕಾರಣ ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರಬೇಕು. ಹಾಗೂ ಮತದಾರರ ಕೈಗಳಿಗೆ ಸ್ಯಾನಿಟೈಸರ್ ಹಾಕಿ ಥರ್ಮಲ್ ಸ್ಕ್ಯಾನರ್ ಮೂಲಕ ಟೆಂಪರೇಚರ್ ಚೆಕ್ ಮಾಡಿ ಬಿಡಲಾಗುತ್ತಿದೆ.
Advertisement
Advertisement
11 ವಾರ್ಡುಗಳಿಗೆ ನಡೆಯುತ್ತಿರುವ ಚುನಾವಣೆಗೆ ಅಂತಿಮವಾಗಿ 50 ಅಭ್ಯರ್ಥಿಗಳು ಕಣದಲ್ಲಿ ಇದ್ದು 8847 ಮಂದಿ ಮತದಾರರಿದ್ದಾರೆ. ಈ ಚುನಾವಣೆ ಹಿನ್ನೆಲೆ ಕೊರೊನಾ ಸೋಂಕಿತರಿಗೂ ಮತದಾನಕ್ಕೆ ಅವಕಾಶ ನೀಡಲಾಗಿದ್ದು, ಕೊರೊನಾ ಸೋಂಕಿತರಿಗೆ 1 ಗಂಟೆ ಪ್ರತ್ಯೇಕ ಅವಕಾಶ ನೀಡಲಾಗಿದೆ. ಸಂಜೆ 05 ಗಂಟೆಯಿಂದ 06 ಗಂಟೆಯವರೆಗೆ ಕೊರೊನಾ ಸೋಂಕಿತರಿಗೆ ಮತದಾನಕ್ಕೆ ಅವಕಾಶ ನೀಡಲಾಗಿದ್ದು, ಪಿಪಿಐ ಕಿಟ್ ಮಾಸ್ಕ್ ಧರಿಸಿ ಬಂದು ಮತದಾನ ಮಾಡಲು ಅವಕಾಶವಿದೆ.
Advertisement
29 ಕೊರೊನಾ ಸೋಂಕಿತ ಮತದಾರರು ಮತದಾನ ಮಾಡುವ ಮಾಹಿತಿ ಇದ್ದು, ಸೋಂಕಿತರ ಕರೆತರಲು ವಾಹನ ವ್ಯವಸ್ಥೆ ಮಾಡಲಾಗಿದೆ. 5 ಗಂಟೆ ನಂತರ ಕೊರೊನಾ ಸೋಂಕಿತ ಮತದಾರರನ್ನ ಕರೆತಂದು ಮತದಾನ ಮಾಡಿಸಲಾಗುವುದು ಅಂತ ಚುನಾವಣಾಧಿಕಾರಿ ವೆಂಕಟೇಶ್ ಪಬ್ಲಿಕ್ ಟಿವಿ ಗೆ ತಿಳಿಸಿದರು.
Advertisement
ಚುನಾವಣಾಧಿಕಾರಿಗಳು ಸಹ ಕಡ್ಡಾಯವಾಗಿ ಫೇಸ್ ಶೀಲ್ಡ್ ಹಾಕಿಕೊಂಡಿರಬೇಕು. ಸದ್ಯ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಜರುಗಿದ್ದು ಗುಡಿಬಂಡೆ ಪೊಲೀಸ್ ಠಾಣೆ ಪಿಐ ಲಿಂಗರಾಜು ಬಂದೋಬಸ್ತ್ ವ್ಯವಸ್ಥೆ ಮಾಡಿಕೊಂಡಿದ್ದಾರೆ.