ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳಲ್ಲಿ ಏರಿಳಿಕೆಯಾಗುತ್ತಿದ್ದು, ಇಂದು 1,769 ಪ್ರಕರಣಗಳು ಪತ್ತೆಯಾಗಿದ್ದು, 30ಜನರನ್ನು ಮಹಾಮಾರಿ ಬಲಿ ಪಡೆದಿದೆ.
Advertisement
ಕೊರೊನಾ ಪ್ರಕರಣಗಳ ಏರಿಳಿಕೆಯಿಂದ ಮತ್ತೆ ಕೇಸ್ ಹೆಚ್ಚಾಗುವ ಆತಂಕ ಎದುರಾಗಿದೆ. ಮಹಾರಾಷ್ಟ್ರ, ಕೇರಳದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚು ಪತ್ತೆಯಾಗುತ್ತಿವೆ. ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ.1.04ಕ್ಕೆ ಇಳಿಕೆಯಾಗಿದೆ. ಸಾವಿನ ಪ್ರಮಾಣ ಶೇ.1.69ರಷ್ಟಿದೆ. ರಾಜ್ಯದಲ್ಲಿ ಇಂದು 1,714 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 24,305 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಇಂದು 1,69,411 ಕೊರೊನಾ ಟೆಸ್ಟ್ ಮಾಡಲಾಗಿದೆ.
Advertisement
Advertisement
ಬೆಂಗಳೂರಿನಲ್ಲಿ ಇಂದು 411 ಕೇಸ್ ದಾಖಲಾಗಿದ್ದು, ನಾಲ್ವರು ಕೊರೊನಾಗೆ ಬಲಿಯಾಗಿದ್ದಾರೆ. 688 ಜನ ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 8,705 ಸಕ್ರಿಯ ಪ್ರಕರಣಗಳಿವೆ.
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 6, ಬಳ್ಳಾರಿ 9, ಬೆಳಗಾವಿ 31, ಬೆಂಗಳೂರು ಗ್ರಾಮಾಂತರ 22, ಬೆಂಗಳೂರು ನಗರ 411, ಬೀದರ್ 2, ಚಾಮರಾಜನಗರ 33, ಚಿಕ್ಕಬಳ್ಳಾಪುರ 7, ಚಿಕ್ಕಮಗಳೂರು 67, ಚಿತ್ರದುರ್ಗ 25, ದಕ್ಷಿಣ ಕನ್ನಡ 350, ದಾವಣಗೆರೆ 10, ಧಾರವಾಡ 8, ಗದಗ 1, ಹಾಸನ 112, ಹಾವೇರಿ 0, ಕಲಬುರಗಿ 2, ಕೊಡಗು 99, ಕೋಲಾರ 49, ಕೊಪ್ಪಳ 3, ಮಂಡ್ಯ 43, ಮೈಸೂರು 143, ರಾಯಚೂರು 1, ರಾಮನಗರ 10, ಶಿವಮೊಗ್ಗ 38, ತುಮಕೂರು 53, ಉಡುಪಿ 140, ಉತ್ತರ ಕನ್ನಡ 86, ವಿಜಯಪುರ 8 ಮತ್ತು ಯಾದಗಿರಿಯಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ.