ನವದೆಹಲಿ: ಪಾರ್ಟಿಯಲ್ಲಿ ಹಣ ಕೊಡುವ ವಿಚಾರಕ್ಕೆ ಸ್ನೇಹಿತರ ಮಧ್ಯೆ ವಾಗ್ವಾದ ನಡೆದಿದ್ದು, ಪರಿಣಾಮ 17 ವರ್ಷದ ಅಪ್ರಾಪ್ತ ತನ್ನ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಸೋಮವಾರ ರಾತ್ರಿ ಇಬ್ಬರು ಅಪ್ರಾಪ್ತರು ಸ್ನೇಹಿತರೊಡನೆ ಜಹಾಂಗೀರ್ಪುರಿಯಲ್ಲಿರುವ ತಮ್ಮ ಗುಡಿಸಲಲ್ಲಿ ಪಾರ್ಟಿ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಪಾರ್ಟಿಯಲ್ಲಿ ಹಣ ಪಾವತಿಸುವ ಬಗ್ಗೆ ಮೃತ ಹುಡುಗ ಮತ್ತು ಅಪ್ರಾಪ್ತನ ನಡುವೆ ಜಗಳ ನಡೆದಿದೆ. ಆಗ 17 ವರ್ಷದ ಹುಡುಗ ಸ್ನೇಹಿತನ ಎದೆಗೆ ಗುಂಡು ಹಾರಿಸಿದ್ದನು. ನಾವು ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆವು. ಆದರೆ ಅಷ್ಟರಲ್ಲಿ ಆತ ಮೃತಪಟ್ಟಿದ್ದನು ಎಂದು ವೈದ್ಯರು ತಿಳಿಸಿರುವುದಾಗಿ ಪಾರ್ಟಿಯಲ್ಲಿದ್ದ ಗೆಳೆಯ ಪೊಲೀಸರಿಗೆ ತಿಳಿಸಿದ್ದಾನೆ.
Advertisement
ಅವರಲ್ಲಿ ಯಾರೂ ಮದ್ಯಪಾನ ಮಾಡುತ್ತಿದ್ದುದ್ದು ಕಂಡುಬಂದಿಲ್ಲ. ಐಪಿಸಿ ಸೆಕ್ಷನ್ ಅಡಿಯಲ್ಲಿ ಈ ಕುರಿತು ಪ್ರಕರಣ ದಾಖಲಿಸಲಾಗಿದ್ದು, ಸದ್ಯಕ್ಕೆ ಬಾಲಾಪರಾಧಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.