– 30 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ವೋಟಿಂಗ್
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಇಂದು ಮೊದಲ ಹಂತದ ಮತದಾನ ಆರಂಭಗೊಂಡಿದೆ. ಪಶ್ಚಿಮ ಬಂಗಾಳದ 30 ವಿಧಾನಸಭಾ ಕ್ಷೇತ್ರಗಳಲ್ಲಿ ವೋಟಿಂಗ್ ನಡೆಯುತ್ತಿದೆ. ಇತ್ತ ಅಸ್ಸಾಂನ 47 ಕ್ಷೇತ್ರಗಳಿಗೂ ಚುನಾವಣೆ ನಡೆಯುತ್ತಿದೆ. ಇಂದು 191 ಅಭ್ಯರ್ಥಿಗಳ ಅದರಲ್ಲಿ 21 ಮಹಿಳೆಯರ ಭವಿಷ್ಯ ನಿರ್ಧಾರವಾಗಲಿದೆ.
West Bengal: First phase of polling begins in Jhargram #WestBengalElections2021 pic.twitter.com/fHP1oKNQ2x
— ANI (@ANI) March 27, 2021
Advertisement
ಪಶ್ಚಿಮ ಬಂಗಾಳದ 294 ಕ್ಷೇತ್ರಗಳಿಗೆ ಎಂಟು ಹಂತದಲ್ಲಿ ಚುನಾವಣೆ ನಡೆಯಲಿದೆ. ಇಂದು ಮೊದಲ ಹಂತದ ಮತದಾನ ನಡೆಯಲಿದೆ. ತದನಂತರ ಏಪ್ರಿಲ್ 1, 6, 10, 17, 22, 26, 29 ಮತದಾನ ನಡೆಯಲಿದೆ. ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ. ದೇಶದಲ್ಲಿ ಒಟ್ಟು ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ತಿಂಗಳು ಮತ್ತು ಮುಂದಿನ ತಿಂಗಳು ಚುನಾವಣೆ ನಡೆಯುತ್ತಿದೆ.
Advertisement
#WestBengalElections2021: Voting underway at a polling centre in West Midnapore pic.twitter.com/h93aLK9UjD
— ANI (@ANI) March 27, 2021
Advertisement
ಟೈಮ್ಸ್ ನೌ-ಸಿ ವೋಟರ್ ಚುನಾವಣಾ ಪೂರ್ವ ಸಮೀಕ್ಷೆ: ಬಿಜೆಪಿಯ ತೀವ್ರ ಸ್ಪರ್ಧೆಯ ನಡುವೆಯೂ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಕೇರಳದಲ್ಲಿ ಎಲ್ಡಿಎಫ್ ಬಳಿಯಲ್ಲಿಯೇ ಉಳಿಯಲಿದೆ. ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ ವಾಪಸ್ ಬರಲಿದೆ. ಸದ್ಯ ಬಿಜೆಪಿ ಸರ್ಕಾರ ಇರೋ ಅಸ್ಸಾಂನಲ್ಲಿ ನೇರ ಹಣಾಹಣಿ ನಡೆಯಲಿದ್ದು, ಪುದುಚೇರಿಯಲ್ಲಿ ಎನ್ಡಿಎಗೆ ಗೆಲುವು ಸಿಗಲಿದೆ ಎಂದು ಸಮೀಕ್ಷೆ ಹೇಳಿದೆ.
Advertisement
Assam: Voters waiting in a queue at a polling station in JP Nagar, Dibrugarh, as polling gets underway for the first phase of Assembly elections pic.twitter.com/VFHIGvoOJB
— ANI (@ANI) March 27, 2021
ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ಏಪ್ರಿಲ್ 6 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಅಸ್ಸಾಂನಲ್ಲಿ ಮಾರ್ಚ್ 27ರಿಂದ ಏಪ್ರಿಲ್ 6ರವರಗೆ ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ಪಶ್ಚಿಮ ಬಂಗಾಳದ 294 ಕ್ಷೇತ್ರಗಳಿಗೆ ಎಂಟು ಹಂತದಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 27 ಮೊದಲ ಹಂತದ ಮತದಾನ ನಡೆಯಲಿದೆ. ತದನಂತರ ಏಪ್ರಿಲ್ 1, 6, 10, 17, 22, 26, 29 ಮತದಾನ ನಡೆಯಲಿದೆ. ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.
#AssamAssemblyPolls: A long queue of voters at a polling centre in Rupahi, Nagaon District pic.twitter.com/1elWsnnKZt
— ANI (@ANI) March 27, 2021