– ಧರ್ಮಗುರುಗಳನ್ನ ಭೇಟಿಯಾದ ಓವೈಸಿ
ಕೋಲ್ಕತ್ತಾ: ಎಐಎಂಐಎಂ ಪಕ್ಷದ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದು, ಸ್ಥಳೀಯ ಧಾರ್ಮಿಕ ಗುರುಗಳನ್ನ ಭೇಟಿಯಾಗಿ ಬೆಂಬಲ ಕೋರಿದ್ದಾರೆ.
ಹೂಗ್ಲಿ ಜಿಲ್ಲೆಯ ಧಾರ್ಮಿಕ ಸ್ಥಳವಾದ ಫುರಫುರಾದ ಧರ್ಮಗುರು ಅಬ್ಬಾಸ್ ಸಿದ್ದಿಕಿ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದರು. ಚುನಾವಣೆ ಪ್ರಚಾರದಲ್ಲಿ ಎಐಎಂಐಎಂ ಪಾರ್ಟಿಯ ಪ್ರಮುಖರಾಗಿ ಮುಂದಾಳತ್ವವನ್ನ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಮಾತುಕತೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಓವೈಸಿ, ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸೋದನ್ನ ಖಚಿತಪಡಿಸಿದರು.
Advertisement
Advertisement
ಅಬ್ಬಾಸ್ ಸಿದ್ದಿಕಿ ನಮ್ಮ ಪಕ್ಷದ ಜೊತೆಯಲ್ಲಿರಲಿದ್ದಾರೆ. ನಾವೆಲ್ಲರೂ ಸಿದ್ದಿಕಿ ಅವರ ಮುಂದಾಳತ್ವದಲ್ಲಿ ಹೋಗಲಿದ್ದೇವೆ. ಎಷ್ಟು ಕ್ಷೇತ್ರ ಮತ್ತು ರಾಜ್ಯದ ಯಾವ ಭಾಗದಲ್ಲಿ ಎಐಎಂಐಎಂ ಸ್ಪರ್ಧೆ ಮಾಡಲಿದೆ ಎಂಬುದನ್ನ ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ ಎಂದು ಹೇಳಿದ್ದಾರೆ.
Advertisement
I met Abbas Siddiqui today and our party will definitely take part in the upcoming Vidhan Sabha elections. Our party will stand with decisions that will be taken by Abbas Siddiqui: AIMIM Chief Asaduddin Owaisi in Kolkata. pic.twitter.com/DHCEl5uzWT
— ANI (@ANI) January 3, 2021
Advertisement
ಅಬ್ಬಾಸ್ ಸಿದ್ದಿಕಿ ಸಿಎಂ ಮಮತಾ ಬ್ಯಾನರ್ಜಿ ಅವರ ರಾಜಕೀಯ ವಿರೋಧಿಗಳಾಗಿದ್ದು, ಟಿಎಂಸಿ ಮುಸ್ಲಿಂ ಮತಗಳನ್ನ ಕೇವಲ ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತೆ ಎಂದು ಆರೋಪಿಸಿದ್ದಾರೆ. ಅಬ್ಬಾಸ್ ಸಿದ್ದಿಕಿ ಫುರಫುರಾದ ಕ್ಷೇತ್ರದ ಪ್ರಮುಖ ಧರ್ಮಗುರು ಆಗಿರುವ ತೋಹಾ ಸಿದ್ದಿಕಿಯವರ ಸೋದರಳಿಯ. ಆದ್ರೆ ತೋಹಾ ಸಿದ್ದಿಕಿ ಟಿಎಂಸಿಯ ಸಮರ್ಥಕರಾಗಿದ್ದು, ಹಾಗಾಗಿ ತಮ್ಮ ಪ್ರವಾಸದಲ್ಲಿ ಅಬ್ಬಾಸ್ ಅವರನ್ನ ಮಾತ್ರ ಓವೈಸಿ ಭೇಟಿಯಾಗಿದ್ದಾರೆ. ಅಬ್ಬಾಸ್ ಮುಂದಾಳತ್ವದಲ್ಲಿ ಹೂಗ್ಲಿ, ಮಾಲ್ದಾ, ಮುರ್ಶೀದಾಬಾದ್ ಮತ್ತು ದಿನಾಜಪುರ ಜಿಲ್ಲೆಗಳಲ್ಲಿ ಚುನಾವಣೆ ಎದುರಿಸಲು ಓವೈಸಿ ಪ್ಲಾನ್ ಮಾಡಿಕೊಂಡಿದ್ದಾರೆ.
At Furfura Sharif, West Bengal in a meeting with Pirzada Abbas Siddiqui sb, Pirzada Naushad Siddiqui sb, Pirzada Baizid Amin sb & Janab Sabir Ghaffar sb pic.twitter.com/lptUX24JnJ
— Asaduddin Owaisi (@asadowaisi) January 3, 2021