– ಪಬ್ಲಿಕ್ ಟಿವಿಗೆ ಲಕ್ಷ್ಮಣ್ ಸವದಿ ಅಭಿನಂದನೆ
ಬೆಂಗಳೂರು: ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರು ಪಬ್ಲಿಕ್ ಟಿವಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಖಾಸಗಿ ಅಂಬುಲೆನ್ಸ್ ಗಳ ವಸೂಲಿ ಸ್ಟಿಂಗ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪಬ್ಲಿಕ್ ಟಿವಿಗೆ ಅಭಿನಂದನೆಗೆ ಸಲ್ಲಿಸುತ್ತೇನೆ. ಇಂತಹ ಕಷ್ಟದ ಕಾಲದಲ್ಲಿ ಲೋಪದೋಷಗಳನ್ನು ಪಬ್ಲಿಕ್ ಟಿವಿ ಎತ್ತಿ ಹಿಡಿಯುತ್ತಿದೆ ಎಂದು ಬಣ್ಣಿಸಿದರು.
Advertisement
Advertisement
ಖಾಸಗಿ ಅಂಬುಲೆನ್ಸ್ ಗಳ ವಸೂಲಿ ಸ್ಟಿಂಗ್ ವಿಚಾರವಾಗಿ ಹಿರಿಯ ಅಧಿಕಾರಿಗಳ ಜೊತೆಗೆ ಸಭೆ ಕರೆಯಲಾಗಿದೆ. ಸರ್ಕಾರ ನಿಗದಿ ಮಾಡಿದ ದರಕ್ಕಿಂತ ಹೆಚ್ಚಿನ ದರವನ್ನು ಅಂಬುಲೆನ್ಸ್ ನವರು ತೆಗೆದುಕೊಂಡರೆ ಕಠಿಣ ಕ್ರಮ ಕೈಗೊಳ್ಳತ್ತೇವೆ. ಅಂತಹ ಅಂಬುಲೆನ್ಸ್ ಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳತ್ತೇವೆ ಎಂದು ಎಚ್ಚರಿಕೆ ನೀಡಿದರು.
Advertisement
Advertisement
ಸಾರ್ವಜನಿಕರಿಗೆ ವಿನಂತಿ ಮಾಡುತ್ತೇವೆ. ಒಂದು ವೇಳೆ ಖಾಸಗಿ ಅಂಬುಲೆನ್ಸ್ ಗಳು ಹೆಚ್ಚಿನ ಹಣ ಕೇಳಿದರೆ ಸಾರಿಗೆ ಅಧಿಕಾರಿಗಳಿಗೆ ಹೇಳಿ, ಅವರ ವಿರುದ್ಧ ದೂರು ನೀಡಿ. ಸಾರ್ವಜನಿಕರು ದೂರು ನೀಡಲು ಟೋಲ್ ಫ್ರೀ ನಂಬರ್ ಮಾಡ್ತೇವೆ. ಕಷ್ಟದಲ್ಲಿರೋ ಸಂದರ್ಭದಲ್ಲಿ ವ್ಯಕ್ತಿ ಸತ್ತಿರುವಾಗ ಹಣ ವಸೂಲಿ ಮಾಡುವುದು ಗೌರವ ತರೋದು ಅಲ್ಲ. ಸತ್ತ ಹೆಣದ ಮೇಲೆ ಹಣ ಗಳಿಸೋದು ಯಾರಿಗೂ ಒಳ್ಳೆಯದು ಆಗಲ್ಲ. ಅವರ ಶಾಪ ಸಹ ನಿಮಗೆ ತಟ್ಟುತ್ತೆ. ದಯಮಾಡಿ ಖಾಸಗಿ ಅಂಬುಲೆನ್ಸ್ ಗಳು ವಸೂಲಿ ದಂಧೆ ಬಿಡಬೇಕು. ಸರ್ಕಾರ ನಿಗದಿ ಮಾಡಿದ ದರವನ್ನು ಮಾತ್ರ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಇದೇ ವೇಳೆ ಸಾರಿಗೆ ನೌಕರರಿಗೆ ಶೇ.63 ವೇತನ ಬಿಡುಗಡೆ ವಿಚಾರ ಸಂಬಂಧ ಮಾತನಾಡಿ, ಕಳೆದ ತಿಂಗಳು ಸಾರಿಗೆ ಪ್ರತಿಭಟನೆ ನಡೆಸಿದರು. ಹೀಗಾಗಿ ಬಹಳಷ್ಟು ಜನ ಡ್ಯೂಟಿ ಗೆ ಹಾಜರಾಗಿರಲಿಲ್ಲ. ಸರ್ಕಾರದಲ್ಲಿ ಹಣಕಾಸಿನ ಸಮಸ್ಯೆ ಇರುವುದರಿಂದ ಹಣ ಬಿಡುಗಡೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸರಿ ಮಾಡುತ್ತೇವೆ. ಈಗ ತಾತ್ಕಾಲಿಕವಾಗಿ ಈಗ ಕೊಟ್ಟಿರುತ್ತೇವೆ. ಮುಂದಿನ ದಿನಗಳಲ್ಲಿ ಬಾಕಿ ಇರುವ ಸಾರಿಗೆ ನೌಕರರ ವೇತನವನ್ನು ಕೊಡುವುದಾಗಿ ಭರವಸೆ ನೀಡಿದರು.
ಸಹಾಯವಾಣಿ ಆರಂಭ:
ಸಾರಿಗೆ ಇಲಾಖೆಯಿಂದ ಸಹಾಯವಾಣಿ ಆರಂಭ ಮಾಡಲಾಗುತ್ತಿದೆ. ಸಾರಿಗೆ ಸೇವೆ, ಅಂಬುಲೆನ್ಸ್ ಸೇವೆ ಮತ್ತು ಚಾಲಕರಿಗೆ ಸರ್ಕಾರ ಘೋಷಿಸಿರೋ ಪರಿಹಾರಗಳಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ರೂ ಸಹಾಯವಾಣಿ ಸಂಖ್ಯೆ -9449863214ಕ್ಕೆ ಕರೆ ಮಾಡಬಹುದು.
ಅಂಬುಲೆನ್ಸ್ ಸೇವೆಗೂ ಸರ್ಕಾರ ದರ ನಿಗದಿ ಮಾಡಿದ್ದು, ನಿಗದಿತ ದರಕ್ಕಿಂತ ಅಧಿಕ ಶುಲ್ಕ ವಸೂಲಿ ಮಾಡಿದರೆ ಕರೆ ಮಾಡಿ ದೂರು ಕೊಡಬಹುದು. ಅಂತಹ ಖಾಸಗಿ ಅಂಬುಲೆನ್ಸ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಾರಿಗೆ ಸಚಿವರು ಪ್ರಕಟಣೆ ಹೊರಡಿಸಿದ್ದಾರೆ.