ಹುಬ್ಬಳ್ಳಿ: ವ್ಯಕ್ತಿಯೊಬ್ಬ ಕೊರೊನಾ ವೈರಸ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅಂಬುಲೆನ್ಸ್ಗಾಗಿ ಪರದಾಡುತ್ತಿದ್ದ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಸಾರ ಮಾಡಲಾಗಿತ್ತು. ಪಬ್ಲಿಕ್ ಟಿವಿ ವರದಿ ನೋಡಿದ ಸಿಎಂ ಯಡಿಯೂರಪ್ಪ ಸೋಂಕಿತರಿಗೆ ಕೂಡಲೇ ಅಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ಅಧಿಕಾರಿಗೆ ಸೂಚಿಸಿದ್ದಾರೆ.
ಹಳೇ ಬಸ್ ನಿಲ್ದಾಣದ ಲಾಡ್ಜ್ವೊಂದರಲ್ಲಿ ವಾಸವಾಗಿದ್ದ ವ್ಯಕ್ತಿಗೆ ಶನಿವಾರ ರಾತ್ರಿ 11 ಗಂಟೆಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಆದರೂ ಇದುವರೆಗೂ ಅಂಬುಲೆನ್ಸ್ ಬಾರದೇ ಇರುವುದರಿಂದ ಸೋಂಕಿತ ವ್ಯಕ್ತಿಯು ಪರದಾಟ ನಡೆಸುತ್ತಿದ್ದ. ಹೀಗಾಗಿ ಸೋಂಕಿತ ಚೆನ್ನಮ್ಮ ವೃತ್ತದಲ್ಲಿ ಅಂಬುಲೆನ್ಸ್ಗಾಗಿ ಕಾಯುತ್ತಾ ಕುಳಿತಿದ್ದರು. ಈ ಸುದ್ದಿಯನ್ನು ಪಬ್ಲಿಕ್ ಟಿವಿ ವರದಿ ಮಾಡಿತ್ತು.
Advertisement
Advertisement
ಪಬ್ಲಿಕ್ ಟಿವಿ ವರದಿ ನೋಡಿದ ಸಿಎಂ ಯಡಿಯೂರಪ್ಪ ತಕ್ಷಣ ಧಾರವಾಡ ಜಿಲ್ಲಾಧಿಕಾರಿ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಈ ಬಗ್ಗೆ ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಕೂಡಲೇ ಅಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಕೊರೊನಾ ಸೋಂಕಿತರಿಗೆ ಅಂಬುಲೆನ್ಸ್ ಪರದಾಟ ಇರಬಾರದು ಎಂದು ಎಚ್ಚರಿಸಿದ್ದಾರೆ.
Advertisement
ಸಿಎಂ ಸೂಚನೆಯಾಗುತ್ತಿದ್ದಂತೆ ಸೋಂಕಿತನನ್ನ ಕರೆದುಕೊಂಡು ಹೋಗಲು ಮೂರು ಅಂಬುಲೆನ್ಸ್ ಬಂದಿದ್ದವು. ಬಳಿಕ ಆರೋಗ್ಯ ಇಲಾಖೆ ಸಿಬ್ಬಂದಿ ಸೋಂಕಿತನನ್ನು ಸಂಜೀವಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
Advertisement