– ನಿದ್ದೆ ಮಾತ್ರೆ ಹಾಕಿ ಮತ್ತೊಬ್ಬನ ಜೊತೆ ಪಲ್ಲಂಗ ಏರ್ತಿದ್ಳು
ಮಂಡ್ಯ: ಇನಿಯನ ಜೊತೆ ಸೇರಿ ಗಂಡನ ಉಸಿರು ನಿಲ್ಲಿಸಿದ್ದ ಪತ್ನಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಿಯಕರನೊಂದಿಗೆ ಸೇರಿ ಪತಿಯ ಕೊಂದು ಗಂಡ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಕಥೆ ಕಟ್ಟಿದ್ದ ಪತ್ನಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾಳೆ.
Advertisement
ಮಂಡ್ಯ ತಾಲೂಕಿನ ಹನಕೆರೆ ಗ್ರಾಮದ ಶಿಲ್ಪ ತನ್ನ ಗಂಡ ಪ್ರದೀಪ್ ಅಲಿಯಾಸ್ ದೀಪು ಎಂಬಾತನನ್ನು ಕೊಲೆಗೈದ ಪಾತಕಿ. ಪ್ರದೀಪ್ 15 ವರ್ಷದ ಹಿಂದೆ ಪಕ್ಕದ ಮನೆಯ ಶಿಲ್ಪಳನ್ನು ಪ್ರೀತಿಸಿ ಮದುವೆಯಾಗಿದ್ದ. ಆರಂಭದಲ್ಲಿ ಇಬ್ಬರು ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದರು. ಕೆಲವು ವರ್ಷಗಳಿಂದ ಶಿಲ್ಪಳಿಗೆ ಕೆ.ಆರ್.ನಗರ ಮೂಲದ ಮಧುನಾಯಕ್ ಎಂಬವನ ಪರಿಚಯವಾಗಿತ್ತು. ಬಳಿಕ ಇವರ ನಡುವೆ ಅನೈತಿಕ ಸಂಬಂಧ ಬೆಳೆದಿತ್ತು. ಈ ವಿಚಾರ ಶಿಲ್ಪಳ ಗಂಡ ಪ್ರದೀಪ್ ಗೆ ಇಬ್ಬರ ಮಧ್ಯೆ ಹಲವು ಬಾರಿ ಜಗಳವಾಗಿತ್ತು.
Advertisement
Advertisement
ಮನೆಯಲ್ಲಿಯೇ ಸರಸ ಸಲ್ಲಾಪ: ಗಂಡನನ್ನು ಯಾಮಾರಿಸಲು ಶಿಲ್ಪ ನಿದ್ರೆ ಮಾತ್ರೆ ಮೊರೆ ಹೋಗಿದ್ದಳು. ಕಳೆದ ಆರೇಳು ತಿಂಗಳಿನಿಂದ ರಾತ್ರಿ ವೇಳೆ ಊಟದಲ್ಲಿ ನಿದ್ರೆ ಮಾತ್ರೆ ಸೇರಿಸಿ ಗಂಡನಿಗೆ ಶಿಲ್ಪ ನೀಡುತ್ತಿದ್ಲಂತೆ. ಗಂಡ ನಿದ್ರೆಗೆ ಜಾರುತ್ತಿದ್ದಂತೆ ಮನೆಗೆ ಪ್ರಿಯಕರ ಮಧುನಾಯಕನ್ನು ಕರೆಸಿಕೊಂಡು ಸರಸ ಸಲ್ಲಾಪದಲ್ಲಿ ತೊಡಗುತ್ತಿದ್ದಳು. ತನ್ನ ಅನೈತಿಕ ಸಂಬಂಧಕ್ಕೆ ಯಾವತ್ತಿದ್ರೂ ಗಂಡ ಅಡ್ಡಿಯಾಗುತ್ತಲೇ ಇರ್ತಾನೆ. ಹಾಗಾಗಿ ಆತನನ್ನು ಮುಗಿಸೇ ಬಿಡಬೇಕೆಂದು ಪ್ರಿಯಕರನೊಂದಿಗೆ ಸೇರಿ ತೀರ್ಮಾನಿಸಿದ್ದಳು.
Advertisement
ಪ್ಲಾನ್ ಮಾಡಿಕೊಂಡಂತೆ ನವೆಂಬರ್ 17ರ ರಾತ್ರಿ ಮನೆಗೆ ಬಂದ ಗಂಡ ಪ್ರದೀಪ್ ಗೆ ಕಾಫಿಯಲ್ಲಿ 4 ನಿದ್ರೆ ಮಾತ್ರೆ ಹಾಕಿ ಕುಡಿಸಿದ್ದಾಳೆ. ಗಂಡ ಗಾಢ ನಿದ್ರೆಗೆ ಜಾರುತ್ತಿದ್ದಂತೆ ಮನೆಗೆ ಎಂಟ್ರಿಕೊಟ್ಟ ಪ್ರಿಯಕನೊಂದಿಗೆ ಸೇರಿ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆಗೈದಿದ್ದಾಳೆ. ಬಳಿಕ ಪ್ರದೀಪ್ ಸೋದರ ಮಾವನಿಗೆ ಫೋನ್ ಮಾಡಿ ತನ್ನ ಗಂಡನಿಗೆ ಹೃದಯಾಘಾತವಾಗಿದೆ ಎಂದು ಕಥೆ ಕಟ್ಟಿದ್ದಳು.
ಶವದ ಮೇಲಿದ್ದ ಗಾಯಗಳಿಂದ ಅನುಮಾನಗೊಂಡರೂ ಆಗಿದ್ದು ಆಗೋಯ್ತು ಎಂದು ಅಂತ್ಯಸಂಸ್ಕಾರ ಮಾಡಿದ್ದರು. ಆದ್ರೆ ಸತ್ಯಾಂಶ ಆತನೊಂದಿಗೆ ಮಣ್ಣಾಗೋದು ಬೇಡ. ಸಾವಿನ ಅಸಲಿ ಕಾರಣ ತಿಳಿಯಲೇಬೇಕೆಂದು ಪೊಲೀಸರಿಗೆ ಕುಟುಂಬಸ್ಥರು ದೂರು ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಶಿಲ್ಪಳನ್ನು ವಶಕ್ಕೆ ಪಡೆದು ತಮ್ಮ ಸ್ಟೈಲ್ ನಲ್ಲಿ ವಿಚಾರಣೆ ನಡೆಸಿದಾಗ ಸತ್ಯ ಬಾಯ್ ಬಿಟ್ಟಿದ್ದಾಳೆ.
ಇನ್ನು ಶಿಲ್ಪ ಮತ್ತು ಆಕೆಯ ಪ್ರಿಯಕರ ಮಧುನಾಯಕ್ ನನ್ನೂ ಬಂಧಿಸಿರುವ ಪೊಲೀಸರು ಮತ್ತಷ್ಟು ತನಿಖೆ ನಡೆಸಿ ಸಾಕ್ಷಿ ಸಂಗ್ರಹಿಸುವ ಕೆಲಸದಲ್ಲಿ ತೊಡಗಿದ್ದಾರೆ.