– ಸೌಥ್ ಝೋನ್ ವಾರ್ ರೂಂ ಕರ್ಮಕಾಂಡ ಬಯಲು ಮಾಡಿದ ಸಂಸದ ತೇಜಸ್ವಿ ಸೂರ್ಯ
– ಬೆಂಗಳೂರಿನಲ್ಲಿ ಬೆಡ್ಗಾಗಿ ರಾತ್ರೋ ರಾತ್ರಿ ಡೀಲ್
ಬೆಂಗಳೂರು: ಹೋಂ ಐಸೋಲೇಟ್ ಆಗುವ ವ್ಯಕ್ತಿಗಳಿಗೆ ತಿಳಿಯದಂತೆ ಅವರ ಹೆಸರಿನಲ್ಲಿ ಬೆಡ್ ಮೀಸಲಿರಿಸುವ ಮಹಾದಂಧೆ ಬಯಲಾಗಿದೆ. ಸಂಸದ ತೇಜಸ್ವಿ ಸೂರ್ಯ ಬಿಬಿಎಂಪಿಯ ಕಳ್ಳಾಟವನ್ನ ಬಯಲು ಮಾಡಿದ್ದು, ಸೋಂಕಿತರ ಜೊತೆ ಮಾತನಾಡಿ ಸೀಟ್ ಸಿಕ್ಕಿದೆಯಾ ಅಥವಾ ಇಲ್ಲವಾ ಅನ್ನೋದನ್ನ ಖಚಿತಪಡಿಸಿಕೊಂಡಿದ್ದಾರೆ. ಸೋಂಕಿತರ ಕುಟುಂಬಸ್ಥರ ಜೊತೆ ತೇಜಸ್ವಿ ಸೂರ್ಯ ಮಾತನಾಡಿರುವ ಆಡಿಯೋಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
ಬೆಂಗಳೂರು ದಕ್ಷಿಣ ಭಾಗದಲ್ಲಿ ಬಿಬಿಎಂಪಿಯ ವಾರ್ ರೂಂ ಅಧಿಕಾರಿಗಳೇ ಕೃತಕ ಬೆಡ್ ಅಭಾವ ಸೃಷ್ಟಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಹೋಂ ಐಸೋಲೇಟ್ ನಲ್ಲಿರುವ ಸೋಂಕಿತನ ಹೆಸರಲ್ಲಿ ಬೆಡ್ ಬುಕ್ ಆದ್ರೆ, ಅದು ಯಾರಿಗೆ ನೀಡಲಾಗುತ್ತೆ ಎಂಬುದರ ಬಗ್ಗೆ ತಿಳಿದು ಬರಬೇಕಿದೆ. ಮಹಾನಗರ ಬೆಂಗಳೂರಿನಲ್ಲಿ ಕೃತಕ ಬೆಡ್ ಅಭಾವದಿಂದಲೇ ಈ ಹೆಲ್ತ್ ಎಮೆರ್ಜೆನ್ಸಿ ಉಂಟಾಗಿದೆಯಾ ಅನ್ನೋ ಅನುಮಾನಗಳು ದಟ್ಟವಾಗಿವೆ.
Advertisement
Advertisement
ಹೇಗೆ ಡೀಲ್ ಆಗುತ್ತೆ ಬೆಡ್?: ಜನರು ತಮಗೆ ಕೊರೊನಾ ಸೋಂಕು ತಗಲುತ್ತಿದ್ದಂತೆ ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿ ಬೆಡ್ ಕೇಳುತ್ತಾರೆ. ಈ ವೇಳೆ ಅಧಿಕಾರಿಗಳು ಎ ಸಿಂಥೆಮೆಟಿಕ್ ಆಗಿದ್ರೆ ಮನೆಯಲ್ಲಿಯೇ ಐಸೋಲೇಟ್ ಆಗುವಂತೆ ತಿಳಿಸಿ, ಅವರಿಂದ ಹೆಸರು, ಬಿಯು ನಂಬರ್ ಪಡೆದುಕೊಂಡು ಆಸ್ಪತ್ರೆಯಲ್ಲಿ ಬೆಡ್ ಬ್ಲಾಕ್ ಮಾಡಿಕೊಳ್ಳಲಾಗುತ್ತದೆ. ಹಾಗಾದ್ರೆ ಬುಕ್ ಮಾಡೋ ದಂಧೆಯಲ್ಲಿ ಕೇವಲ ಅಧಿಕಾರಿಗಳೇ ಭಾಗಿಯಾಗಿದ್ರಾ? ಇದರಲ್ಲಿ ಜನಪ್ರತಿನಿಧಿಗಳು ಶಾಮೀಲಾಗಿದ್ದಾರಾ ಅನ್ನೋದು ತನಿಖೆಯಲ್ಲಿ ತಿಳಿದು ಬರಬೇಕಿದೆ.
Advertisement
ಇನ್ನು ಪಬ್ಲಿಕ್ ಟಿವಿ ವರದಿ ಬಿತ್ತರಿಸುತ್ತಿದ್ದಂತೆ ವಾರ್ ರೂಂ ಸ್ಥಳಕ್ಕೆ ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿ ಸುಬ್ರಹ್ಮಣ್ಯ ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಭೇಟಿ ನೀಡಿದ್ದಾರೆ. ಸುಮಾರು 4 ಸಾವಿರಕ್ಕೂ ಅಧಿಕ ಬೆಡ್ ಗಳನ್ನು ಅಧಿಕಾರಿಗಳೇ ಬ್ಲಾಕ್ ಮಾಡಿಕೊಂಡಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಬೆಡ್ ಆಡಿಟ್ ಸಿಬ್ಬಂದಿ:– ಹೇಗಿದ್ದಾರೆ ವೆಂಕಟ್ಲಕ್ಷ್ಮಮ್ಮ ಅವರು ಈಗ..
ಸೋಂಕಿತರ ಸಂಬಂಧಿ :- ಅವರನ್ನ ಹಾಸ್ಪಿಟಲ್ಗೆ ಅಡ್ಮಿಟ್ ಮಾಡಿದ್ದೇನೆ, ಪ್ರೈವೇಟ್ ಹಾಸ್ಪಿಟಲ್ ಸ್ಪರ್ಶ್ನಲ್ಲಿ ಆಡ್ಮಿಟ್ ಮಾಡಿದ್ದೇವೆ
ಬೆಡ್ ಆಡಿಟ್ ಸಿಬ್ಬಂದಿ :- ನಾನು ಬಿಬಿಎಂಪಿ ಕಡೆಯಿಂದ ಫೋನ್ ಮಾಡ್ತಿರೋದು.. ನಿಮಗೆ ಬಿಬಿಎಂಪಿ ಕಡೆಯಿಂದ ಕಿಮ್ಸ್ ಹಾಸ್ಪಿಟಲ್ ಕಡೆಗೆ ಕಾಂಟ್ಯಾಕ್ಟ್ ಬಂದಿತ್ತಾ..? ಬಿಬಿಎಂಪಿ ಕಡೆಯಿಂದ ಫೋನ್ ಬಂದಿತ್ತಾ..?
ಸೋಂಕಿತರ ಸಂಬಂಧಿ :- ಬಿಬಿಎಂಪಿ ಕಡೆಯಿಂದ ಫೋನ್ ಬರಲಿಲ್ಲ..
ಬೆಡ್ ಆಡಿಟ್ ಸಿಬ್ಬಂದಿ – ಬರಲಿಲ್ವಾ, ಈಗ ನಿಮ್ಮಷ್ಟಕ್ಕೆ ನೀವೇ ಅಡ್ಮಿಟ್ ಆಗಿರೋದಾ ಸ್ಪರ್ಶ್ ಹಾಸ್ಪಿಟಲ್ನಲ್ಲಿ
ಸೋಂಕಿತರ ಸಂಬಂಧಿ :- ನಿನ್ನೆ ನಾವು ಸುಮಾರು ಹೊತ್ತು ಪ್ರಯತ್ನ ಮಾಡಿದ್ವಿ ಆಮೇಲೆ ಅಡ್ಮಿಟ್ ಮಾಡಿದ್ವಿ.
ಬೆಡ್ ಆಡಿಟ್ ಸಿಬ್ಬಂದಿ :- ಹೇಗಿದ್ದಾರೆ ಅವರು..? ಏನಾಗಬೇಕು ಅವರು ನಿಮಗೆ..?
ಸೋಂಕಿತರ ಸಂಬಂಧಿ :- ಅವರು ನಮ್ಮ ತಾಯಿಯಾಗಬೇಕು
ಬೆಡ್ ಆಡಿಟ್ ಸಿಬ್ಬಂದಿ :- ಎಷ್ಟು ವರ್ಷದವರು ಅವರು
ಸೋಂಕಿತರ ಸಂಬಂಧಿ :- 76 ವರ್ಷದವರು ಅವರು
ಬೆಡ್ ಆಡಿಟ್ ಸಿಬ್ಬಂದಿ :– ಹಾಗಾದ್ರೆ ಎಷ್ಟು ದಿನ ನೀವು ಬಿಬಿಎಂಪಿಗೆ ಪ್ರಯತ್ನ ಪಟ್ರಿ
ಸೋಂಕಿತರ ಸಂಬಂಧಿ :– ನನಗೂ ಕೂಡ ಪಾಸಿಟಿವ್ ಇದೆ ನಾನು ಮನೆಯಲ್ಲಿಯೇ ಹೋಂ ಕ್ವಾರಂಟೈನ್ ಆಗಿದ್ದೇನೆ, ನಮ್ಮ ಅಕ್ಕ ನಿನ್ನೆ ಮತ್ತೆ ಮೊನ್ನೆ ಟ್ರೈ ಮಾಡಿದ್ದಾರೆ.
ಬೆಡ್ ಆಡಿಟ್ ಸಿಬ್ಬಂದಿ :- ಹೌದಾ.. ಬಿಬಿಎಂಪಿ ಕಡೆಯಿಂದ ಯಾವುದೇ ಬೆಡ್ ಆಗಿಲ್ಲಾ ಅಲ್ವಾ ಹಾಗಾದ್ರೆ…
ಸೋಂಕಿತರ ಸಂಬಂಧಿ :- ಇಲ್ಲಾ ಆಗಿಲ್ಲ, ನಮಗೆ ಯಾವುದೇ ಕಾಲ್ ಬರಲಿಲ್ಲ
ಬೆಡ್ ಆಡಿಟ್ ಸಿಬ್ಬಂದಿ :- ಸರ್.. ನಾನು ಬಿಬಿಎಂಪಿ ಕಡೆಯಿಂದಾನೇ ಮಾಡ್ತಾ ಇರೋದು.. ಈ ಬೆಡ್ ಬುಕ್ಕಿಂಗ್ನಲ್ಲಿ ಸ್ವಲ್ಪ ಸಮಸ್ಯೆಯಾಗಿದೆ. ಅದಕ್ಕೆ ಈಗ ಆಡಿಟಿಂಗ್ ಮಾಡ್ತಾ ಇದ್ದೇನೆ, ನಿಮಗೆ ಮತ್ತೆ ನಾನು ಫೋನ್ ಮಾಡ್ತೇನೆ ತಪ್ಪು ತಿಳಿದುಕೊಳ್ಳಬೇಡಿ ಬೇರೆಯವರಿಗೂ ಕೂಡ ಹೆಲ್ಪ್ ಮಾಡೋದಕ್ಕೆ ಟ್ರೈ ಮಾಡ್ತಾ ಇದಿವಿ.
ಸೋಂಕಿತರ ಸಂಬಂಧಿ :- ಓಕೆ
ಬೆಡ್ ಆಡಿಟ್ ಸಿಬ್ಬಂದಿ:– ಬೇಗ ಅವರು ಹುಷಾರಾಗೋಕೆ ನಾವು ಆಶಿಸುತ್ತೇವೆ.