– ಇಲ್ಲಿದೆ 59 ಆ್ಯಪ್ಗಳ ಲಿಸ್ಟ್
ನವದೆಹಲಿ: ಕೇಂದ್ರ ಸರ್ಕಾರ ಟಿಕ್ಟಾಕ್, ಹೆಲೋ ಸೇರಿದಂತೆ 59 ಆ್ಯಪ್ಗಳನ್ನು ಬ್ಯಾನ್ ಮಾಡಿದೆ.
ಟಿಕ್ಟಾಕ್, ಯುಸಿ ಬ್ರೌಸರ್, ಕ್ಯಾಮ್ ಸ್ಕ್ಯಾನರ್ ಸೇರಿದಂತೆ ಹಲವು ಆ್ಯಪ್ ಗಳಿಗೆ ಭಾರತ ಸರ್ಕಾರ ನಿಷೇಧ ಹೇರಿದೆ. ಭಾರತದ ಭದ್ರತಾ ಸಂಸ್ಥೆಗಳು ಚೀನಾದ ಆ್ಯಪ್ ಗಳ ಪಟ್ಟಿಯನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ನೀಡಿತ್ತು. ಚೀನಾ ಗಡಿಯಲ್ಲಿ ಘರ್ಷಣೆ ಹೆಚ್ಚಾದ ಹಿನ್ನೆಲೆಯಲ್ಲಿ ಆ್ಯಪ್ ಗಳನ್ನು ಬ್ಯಾನ್ ಮಾಡಬೇಕೆಂಬ ಕೂಗು ಸಹ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು. ಸರ್ಕಾರ ನಿಷೇಧ ಹೇರಲಾಗಿರುವ ಆ್ಯಪ್ ಗಳನ್ನು ಸಾರ್ವಜನಿಕರು ಬಳಸುತ್ತಿದ್ರೆ, ಮೊಬೈಲ್ ನಿಂದ ಅನ್ ಇನ್ಸ್ಟಾಲ್ ಮಾಡಲು ಸಲಹೆ ನೀಡಲಾಗಿದೆ. ಚೀನಾ ತನ್ನ ಆ್ಯಪ್ ಗಳ ಭಾರತೀಯರ ಖಾಸಗಿ ಮಾಹಿತಿಗೆ ಕನ್ನ ಹಾಕುತ್ತಿದೆ ಎಂಬ ಮಾತುಗಳು ಕೇಳಿ ಬಂದಿತ್ತು.
Advertisement
ಟಿಕ್ಟಾಕ್ ಸೇರಿದಂತೆ 59 ಆ್ಯಪ್ ಭಾರತದಲ್ಲಿ ಬ್ಯಾನ್https://t.co/7B8u63dYPy#China #India #Tiktok #TiktokBan
— PublicTV (@publictvnews) June 29, 2020
Advertisement
ಬ್ಯಾನ್ ಆ್ಯಪ್ಗಳ ಪಟ್ಟಿ:
ಟಿಕ್ ಟಾಕ್, ಶೇರ್ ಇಟ್, ಕ್ವಾಯಿ, ಯುಸಿ ಬ್ರೌಸರ್, ಬೈದು ಮ್ಯಾಪ್, ಶೇನ್, ಕ್ಲ್ಯಾಶ್ ಆಪ್ ಕಿಂಗ್ಸ್, ಡಿಯು ಬ್ಯಾಟರಿ ಸೇವರ್, ಹೆಲೊ, ಲೈಕೀ, ಯೂಕ್ಯಾಮ್ ಮೇಕ್ಅಪ್, ಎಂಐ ಕಮ್ಯೂನನಿಟಿ, ಸಿಎಂ ಬ್ರೌಸರ್ಸ್, ವೈರಸ್ ಕ್ಲೀನರ್, ಅಪಸ್ ಬ್ರೌಸರ್, ರೋಮ್ವುಯ್, ಕ್ಲಬ್ ಫ್ಯಾಕ್ಟರಿ, ನ್ಯೂಸ್ಡಾಗ್, ಬ್ಯೂಟಿ ಪ್ಲಸ್, ವಿಯ್ ಚಾಟ್.
Advertisement
ಯುಸಿ ನ್ಯೂಸ್, ಕ್ಯೂಕ್ಯೂ ಮೇಲ್, ವೀಬೋ, ಕ್ಸೆಂಡರ್, ಕ್ಯೂಕ್ಯೂ ಮ್ಯೂಸಿಕ್, ಕ್ಯೂಕ್ಯೂ ನ್ಯೂಸ್ ಫೀಡ್, ಬಿಗೊ ಲೈವ್, ಸೆಲ್ಫಿ ಸಿಟಿ, ಮೇಲ್ ಮಾಸ್ಟರ್, ಪ್ಯಾರೆಲ್ಲೆಲ್ ಸ್ಪೇಸ್, ಎಂಐ ವಿಡಿಯೋ ಕಾಲ್-ಕ್ಸಿಯೋಮಿ, ವಿಯ್ ಸಿಂಕ್, ಇಎಸ್ ಫೈಲ್ ಎಕ್ಸ್ಪ್ಲೋರರ್, ವಿವಾ ವಿಡಿಯೋ-ಕ್ಯೂಯು ವಿಡಿಯೋ, ಮೀತು, ವಿಗೋ ವಿಡಿಯೋ, ನ್ಯೂ ವಿಡಿಯೋ ಸ್ಟೇಟಸ್, ಡಿಯು ರೆಕಾರ್ಡರ್, ವೀಲ್ಟ್-ಹೈಡ್, ಕ್ಯಾಚೆ ಕ್ಲೀನರ್ ಡಿಯು ಆ್ಯಪ್ ಸ್ಟುಡಿಯೋ.
Advertisement
List of 59 apps banned by Government of India “which are prejudicial to sovereignty and integrity of India, defence of India, security of state and public order”. pic.twitter.com/p6T2Tcd5rI
— ANI (@ANI) June 29, 2020
ಡಿಯು ಕ್ಲೀನರ್, ಡಿಯು ಬ್ರೌಸರ್, ಹ್ಯಾಗೋ ಪ್ಲೇ ವಿತ್ ನ್ಯೂ ಫ್ರೆಂಡ್ಸ್, ಕ್ಯಾಮ್ ಸ್ಕ್ಯಾನರ್, ಕ್ಲೀನ್ ಮಾಸ್ಟರ್- ಚೀತಾ ಮೊಬೈಲ್, ವಂಡರ್ ಕ್ಯಾಮೆರಾ, ಫೋಟೋ ವಂಡರ್, ಕ್ಯೂಕ್ಯೂ ಪ್ಲೇಯರ್, ವುಯ್ ಮೀಟ್, ಸ್ವೀಟ್ ಸೆಲ್ಫಿ, ಬೈದು ಟ್ರಾನ್ಸ್ಲೇಟ್, ವಿಮೇಟ್, ಕ್ಯೂಕ್ಯೂ ಇಂಟರ್ನ್ಯಾಷನಲ್, ಕ್ಯೂಕ್ಯೂ ಸೆಕ್ಯೂರಿಟಿ ಸೆಂಟರ್, ಕ್ಯೂಕ್ಯೂ ಲಾಂಚರ್, ಯು ವಿಡಿಯೋ, ವಿ ಫ್ಲೈ ಸ್ಟೇಟಸ್ ವಿಡಿಯೋ, ಮೊಬೈಲ್ ಲೆಜೆಂಡ್ಸ್, ಡಿಯು ಪ್ರೈವೆಸಿ.