ಉಡುಪಿ: ನಿಮ್ಮ ಮನೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಮಕ್ಕಳಿದ್ದರೆ ದಯವಿಟ್ಟು ಹೊರ ರಾಜ್ಯದಿಂದ ಬರಬೇಡಿ. ಹೊರ ರಾಜ್ಯದಿಂದ ಬರುವವರು ಸ್ವಲ್ಪ ತಡೀರಿ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಹೊರ ರಾಜ್ಯದಿಂದ ಬಂದರೆ ಇಡೀ ಮನೆ ಸೀಲ್ ಆಗುತ್ತದೆ. ಮಕ್ಕಳಿಗೆ ಪರೀಕ್ಷೆ ಬರೆಯೋಕೆ ಆಗಲ್ಲ. ಮಕ್ಕಳು ಪರೀಕ್ಷೆ ಮುಗಿಸಿದ ಮೇಲೆ ಊರಿಗೆ ಬನ್ನಿ ಎಂದು ಸಲಹೆ ನೀಡಿದರು. ಜಿಲ್ಲಾಧಿಕಾರಿಗೆ ಕ್ವಾರಂಟೈನ್ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇದೆ. ಹೊರರಾಜ್ಯದಿಂದ ಬಂದವರನ್ನು ಹೋಮ್, ಸಾಂಸ್ಥಿಕ ಕ್ವಾರಂಟೈನ್ಗೆ ಕಳುಹಿಸುವ ಅಧಿಕಾರವೂ ಇದೆ ಎಂದರು.
Advertisement
Advertisement
ಮಹಾರಾಷ್ಟ್ರದಿಂದ ಬರುವರಿಗೆ 14 ದಿನ ಹೋಂ ಕ್ವಾರಂಟೈನ್ ಕಡ್ಡಾಯ. ಹೋಂ ಕ್ವಾರಂಟೈನ್ ಉಲ್ಲಂಘಿಸಿದರೆ ಶಿಕ್ಷಿಸಲಾಗುವುದು. ಕ್ವಾರಂಟೈನ್ ಇರುವ ವ್ಯಕ್ತಿಯ ಬಗ್ಗೆ ನೆರಮನೆಯವರು ಮಾಹಿತಿ ನೀಡಬೇಕು. ಎಪಿಡಮಿಕ್ ಕಾಯ್ದೆಯಲ್ಲಿ ಆ ಮಾಹಿತಿಯಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.