ನವದೆಹಲಿ: ಇಂಧನ ಬೆಲೆ ಏರಿಕೆ ವಿರುದ್ಧ ಎನ್ಡಿಎ ಸರ್ಕಾರದ ವಿರುದ್ಧ ಗುಡುಗಿರುವ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ, ನಿಮ್ಮ ಜೇಬನ್ನ ಖಾಲಿಗೊಳಿಸಿ, ಮಿತ್ರರಿಗೆ ನೀಡುವ ಮಹಾನ್ ಕೆಲಸವನ್ನ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಟ್ವೀಟ್: ಪೆಟ್ರೋಲ್ ಪಂಪ್ ನಲ್ಲಿ ಇಂಧನ ಹಾಕಿಸಿಕೊಳ್ಳುವಾಗ ನಿಮ್ಮ ದೃಷ್ಟಿ ಏರುತ್ತಿರುವ ಮೀಟರ್ ಮೇಲೆ ಬಿದ್ದಾಗ ಕಚ್ಚಾ ತೈಲದ ಬೆಲೆ ಇಳಿಕೆ ಆಗುತ್ತಿರೋದನ್ನ ನೆನಪಿನಲ್ಲಿಟ್ಟಿಕೊಳ್ಳಿ. ಲೀಟರ್ ಪೆಟ್ರೋಲ್ ನೂರು ರೂಪಾಯಿಗೆ ತಲುಪಿದೆ. ಜನ ಸಾಮಾನ್ಯರ ಜೇಬನ್ನು ಖಾಲಿಗೊಳಿಸಿ, ತಮ್ಮ ಮಿತ್ರರಿಗೆ ನೀಡುವ ಮಹತ್ವದ ಕೆಲಸವನ್ನು ಸರ್ಕಾರ ಉಚಿತವಾಗಿ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
Advertisement
पेट्रोल पम्प पर गाड़ी में तेल डालते समय जब आपकी नज़र तेज़ी से बढ़ते मीटर पर पड़े, तब ये ज़रूर याद रखिएगा कि कच्चे तेल का दाम बढ़ा नहीं, बल्कि कम हुआ है।
पेट्रोल 100 रुपय/लीटर है।
आपकी जेब ख़ाली करके ‘मित्रों’ को देने का महान काम मोदी सरकार मुफ़्त में कर रही है!#FuelLootByBJP
— Rahul Gandhi (@RahulGandhi) February 22, 2021
Advertisement
ಇತ್ತ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಸೈಕಲ್ ಸವಾರಿ ಮಾಡುವ ಮೂಲಕ ಇಂಧನ ಬೆಲೆ ಏರಿಕೆಯನ್ನ ವಿರೋಧಿಸಿದ್ದಾರೆ. ಪ್ರಧಾನಿಗಳು ಹೊರ ಬಂದು ಸಾಮಾನ್ಯ ಜನರ ಸಮಸ್ಯೆಯನ್ನ ಆಲಿಸಬೇಕಿದೆ. ಕೇವಲ ಹಿಂದಿನ ಸರ್ಕಾರಗಳ ಆರೋಪ ಮಾಡೋದನ್ನ ಸದ್ಯದ ಸರ್ಕಾರ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿಕೆಗೆ ರಾಬರ್ಟ್ ವಾದ್ರಾ ತಿರುಗೇಟು ನೀಡಿದರು. ಇದನ್ನೂ ಓದಿ: ನಾವಿಬ್ಬರು, ನಮಗಿಬ್ಬರು- ನಾಲ್ವರಿಂದ ದೇಶದ ಆಡಳಿತ: ಕೇಂದ್ರದ ವಿರುದ್ಧ ರಾಹುಲ್ ಕಟು ಟೀಕೆ
Advertisement
Delhi: Robert Vadra rides bicycle from Khan Market to his office in protest against the rising fuel prices pic.twitter.com/kNtbDrRKQq
— ANI (@ANI) February 22, 2021
Advertisement
ಪ್ರಧಾನಿ ಹೇಳಿದ್ದೇನು?: ಒಂದು ವೇಳೆ ಹಿಂದಿನ ಸರ್ಕಾರಗಳು ತೈಲ ಆಮದು ಅವಲಂಬನೆಗೆ ಕಡಿವಾಣ ಹಾಕಿದ್ದರೆ ಇಂದು ಮಧ್ಯಮ ವರ್ಗಕ್ಕೆ ಸಮಸ್ಯೆ ಆಗುತ್ತಿರಲಿಲ್ಲ. ನಮ್ಮ ಸರ್ಕಾರ ತೈಲ ಆಮದು ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಈಗಿನ ತೈಲ ದರ ಏರಿಕೆಗೆ ಹಿಂದಿನ ಸರ್ಕಾರದ ನೀತಿಯೇ ಕಾರಣ ಎಂದು ಮೋದಿ ಅವರು ಪರೋಕ್ಷವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದರು. ಇದನ್ನೂ ಓದಿ: ಬೆಲೆ ಏರಿಕೆ ನಿಯಂತ್ರಣ ಸರ್ಕಾರದಿಂದ ಸಾಧ್ಯವಿಲ್ಲ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
2019-20ನೇ ಆರ್ಥಿಕ ವರ್ಷದಲ್ಲಿ ಶೇ. 85ರಷ್ಟು ಇಂಧನವನ್ನು ವಿದೇಶಗಳಿಂದಲೇ ಆಮದು ಮಾಡಲಾಗಿದೆ. ಶೇ.53ರಷ್ಟು ಎಲ್ಪಿಜಿಯನ್ನು ಆಮದು ಮಾಡಿಕೊಳ್ಳಲಾಗಿದೆ. ಅಗತ್ಯ ಇಂಧನಗಳ ಬೆಲೆ ಹೆಚ್ಚಳ ನಿಜಕ್ಕೂ ತೀವ್ರ ಕಳವಳಕಾರಿಯಾಗಿದೆ. ಒಂದು ವೇಳೆ ಹಿಂದಿನ ಸರ್ಕಾರಗಳು ಈ ವಿಚಾರದ ಬಗ್ಗೆ ಆಗಲೇ ಗಮನ ಹರಿಸಿದ್ದರೆ ಜನ ಸಾಮಾನ್ಯರಿಗೆ ಇಂದು ಸಮಸ್ಯೆ ಆಗುತ್ತಿರಲಿಲ್ಲ ಎಂದು ಮೋದಿ ಹೇಳಿದ್ದರು.