ಬೆಂಗಳೂರು: ನಾವು ಆ ರೀತಿಯ ಕುಟುಂಬದಿಂದ ಬಂದಿಲ್ಲ, ಫಾಝಿಲ್ ಯಾರೆಂಬುದು ನನಗೆ ಗೊತ್ತಿಲ್ಲ ಎಂದು ಕಿರುತೆರೆ ನಟ ರಕ್ಷ್ ಸ್ಪಷ್ಟಪಡಿಸಿದ್ದಾರೆ.
ಫಾಝಿಲ್ ಜೊತೆ ರಕ್ಷ್ ಇರುವ ಫೋಟೋ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಖಾಸಗಿ ಸಮಾರಂಭಕ್ಕೆ ಹೋದಾಗ ಸುನಿಲ್ ಗವಾಸ್ಕರ್ ಬಂದಿರುವುದು ತಿಳಿಯಿತು. ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಹೋಗಿದ್ದೆವು. ಫಾಝಿಲ್ ಯಾರು ಅಂತ ಗೊತ್ತಿಲ್ಲ. ಅದು ಯಾರ ಮನೆ ಎಂದೂ ಸಹ ಗೊತ್ತಿಲ್ಲ. ಸುನಿಲ್ ಗವಾಸ್ಕರ್ ಅವರೊಂದಿಗೆ ತೆಗೆಸಿದ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲೂ ಹಾಕಿಕೊಂಡಿದ್ದೇನೆ. ಫಾಝಿಲ್ ಯಾರು ಅಂತ ನನಗೆ ಗೊತ್ತಿಲ್ಲ. ನಾವು ಆ ರೀತಿಯ ಕುಟುಂಬದಿಂದ ಬಂದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ನನಗೂ ಅಪ್ರೋಚ್ ಮಾಡಿದ್ರು, ಆದ್ರೆ ನಾನು ಅದನ್ನ ಮುಟ್ಟಿಲ್ಲ – ‘ಗಟ್ಟಿಮೇಳ’ ಖ್ಯಾತಿಯ ನಟ ರಕ್ಷ್
Advertisement
Advertisement
ಯಾರ ಪರಿಚಯ ನನಗಿಲ್ಲ: ಫಾಝಿಲ್, ವೈಭವ್ ಯಾರ ಪರಿಚಯವೂ ಇಲ್ಲ. ಅವರ ಫೋನ್ ನಂಬರ್ ಸಹ ನನ್ನ ಬಳಿ ಇಲ್ಲ. ಏನು ಬೇಕಾದರೂ ಚೆಕ್ ಮಾಡಿ, ಯಾರು ಕರೆದರೂ ನಾನು ಹೋಗಿ ಸ್ಪಷ್ಟನೆ ನೀಡುತ್ತೇನೆ. ನನ್ನ ಕಾಲ್ ಲಿಸ್ಟ್ ಚೆಕ್ ಮಾಡಿ, ಮೆಸೇಜ್ ಚೆಕ್ ಮಾಡಿ. ಫಾಝಿಲ್ ಯಾರೆಂಬುದು ನನಗೆ ಗೊತ್ತಿಲ್ಲ. ನಾವು ಕೇವಲ ಫೋಟೋ ತೆಗೆಸಿಕೊಳ್ಳಲು ಹೋಗಿದ್ದೆವು. ಕೇವಲ ಫೋಟೋ ತೆಗೆಸಿಕೊಂಡು ಬಂದಿದ್ದೇವೆ. ಅದು ಯಾರ ಮನೆ ಎಂಬುದು ಸಹ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Advertisement
ಎಲ್ಲ ಕಾರ್ಯಕ್ರಮಗಳಿಗೂ ನಾವು ಹೋಗಲ್ಲ. ಪ್ರಮುಖ ಕಾರ್ಯಕ್ರಮಗಳಿಗೆ ಮಾತ್ರ ಹೋಗುತ್ತೇನೆ. ಗಣೇಶ ಹಬ್ಬಗಳಿಗೂ ಹೋಗಲು ಹಲವು ಬಾರಿ ಯೋಚಿಸುತ್ತೇನೆ. ಇದಕ್ಕೂ ನನಗೂ ಎಳ್ಳಷ್ಟೂ ಸಂಬಂಧವಿಲ್ಲ. ನಾವು ಆ ರೀತಿಯ ಕುಟುಂಬದಿಂದಲೂ ಬಂದಿಲ್ಲ.
Advertisement
ನಾವು ಧಾರಾವಾಹಿಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಸಿನಿಮಾ ಮಾಡಿಕೊಂಡು ಒಂದು ಮಟ್ಟಕ್ಕೆ ಬೆಳೆಯಬೇಕು ಎಂಬ ಕನಸು ಹೊತ್ತಿರುತ್ತೇವೆ. ಇದಕ್ಕಾಗಿ ಹಲವು ನಿರ್ಮಾಪಕರನ್ನು ಸಹ ಭೇಟಿಯಾಗುತ್ತಿರುತ್ತೇವೆ. ಸಿನಿಮಾ ಮಾಡುವುದರಲ್ಲೇ ಕಾಲ ಕಳೆಯುತ್ತಿರುತೇವೆ. ಈ ರೀತಿ ಮಾಡಿ ಜೀವನ, ಹೆಸರು ಹಾಳು ಮಾಡಿಕೊಂಡರೆ ತಂದೆ, ತಾಯಿ ತುಂಬಾ ಚಿಂತೆಗೀಡಾಗುತ್ತಾರೆ. ಮೂಲವಾಗಿ ನಾವು ಈ ರೀತಿ ಬೆಳೆದವರೇ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.