ಬೆಂಗಳೂರು: ಸಿಲಿಕಾನ್ ಸಿಟಿ ಮಂದಿ ನಾಳೆ ರೋಡ್ಗಿಳಿಯುವ ಮುನ್ನ ಎಚ್ಚರವಾಗಿರಬೇಕು. ನಾಳೆ ಬೆಂಗಳೂರಿನಲ್ಲಿ ಹೊರಹೋಗುವ ಪ್ಲಾನ್ ಇದ್ರೆ ಬೀ ಅಲರ್ಟ್ ಆಗಿರಿ. ಜನವರಿ 26 ರಜೆ ಅಂತ ರೌಂಡ್ಸ್ ಹೊಡೆದ್ರೆ ತಗ್ಲಾಕ್ಕೊಳ್ಳೋದು ಪಕ್ಕಾ.
ಹೌದು. ರೈತರ ‘ಗಣ’ ಘರ್ಜನೆಗೆ ನಾಳೆ ಬೆಂಗಳೂರು ಲಾಕ್ ಲಾಕ್ ಆಗಲಿದೆ. ಕೇಂದ್ರ ಸರ್ಕಾರದ ವಿರುದ್ಧ ಅನ್ನದಾತರು ರಣಕಹಳೆ ಹೊರಡಿಸಲಿದ್ದಾರೆ. ಕೃಷಿ ಮಸೂದೆ ವಿರೋಧಿಸಿ ಅನ್ನದಾತರಿಂದ ಟ್ರ್ಯಾಕ್ಟರ್ ಪರೇಡ್ ನಡೆಯಲಿದ್ದು, ಇಡೀ ಬೆಂಗಳೂರಿಗೆ ಟ್ರ್ಯಾಕ್ಟರ್, ಎತ್ತಿನಬಂಡಿ, ಟ್ರಕ್ಗಳ ದಿಗ್ಬಂಧನವಾಗಲಿದೆ. ಸುಮಾರು 25 ಸಾವಿರಕ್ಕೂ ಅಧಿಕ ಟ್ರ್ಯಾಕ್ಟರ್ಗಳು ಬೆಂಗಳೂರು ನಗರಕ್ಕೆ ನುಗ್ಗಲಿದೆ.
Advertisement
Advertisement
ಹೇಗಿರಲಿದೆ ರೈತ ಪರೇಡ್..?
ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿಸಿ ಕೋಡಿಹಳ್ಳಿ ಚಂದ್ರಶೇಖರ್, ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಪರೇಡ್ ನಡೆಯಲಿದೆ. ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ತುಮಕೂರು ರೋಡ್ ನೈಸ್ ಜಂಕ್ಷನ್ನಿಂದ ಪರೇಡ್ ಆರಂಭವಾಗಲಿದ್ದು, ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಬೆಂಗಳೂರಿನ ನಾನಾ ರಸ್ತೆಯಲ್ಲಿ ಪರೇಡ್ ನಡೆಯಲಿದೆ.
Advertisement
ರೈತರ ಪ್ರತಿಭಟನೆಗೆ ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಒಕ್ಕೂಟ ಸಾಥ್ ನೀಡಲಿದೆ. ಮೈಸೂರು ಬ್ಯಾಂಕ್ ವೃತ್ತದಿಂದ ಫ್ರೀಡಂ ಪಾರ್ಕ್ವರೆಗೆ ವಾಟಾಳ್ ರ್ಯಾಲಿ ನಡೆಯಲಿದೆ. ಇಡೀ ಬೆಂಗಳೂರಿನ ರಸ್ತೆ ರಸ್ತೆಗೆ ಅನ್ನದಾತರು ಮಹಾ ದಿಗ್ಬಂಧನ ಹಾಕಲಿದ್ದಾರೆ. ರಾಜ್ಯದ ಮೂಲೆ ಮೂಲೆಯ ಸಾವಿರಾರು ರೈತರು ಬೆಂಗಳೂರಿಗೆ ಬರಲಿದ್ದಾರೆ.
Advertisement
ಸಿಎಂ ಗಣರಾಜ್ಯೋತ್ಸವ ಭಾಷಣ ಮುಗಿದ ತಕ್ಷಣ ಮಹಾ ಪರೇಡ್ ಆರಂಭವಾಗಲಿದೆ. ದೆಹಲಿ ಮಾದರಿಯಲ್ಲಿ ಟ್ರ್ಯಾಕ್ಟರ್ ಮಹಾ ರ್ಯಾಲಿಗೆ ಬೆಂಗಳೂರು ಕೂಡ ಸಜ್ಜಾಗಿದೆ. ಒಂದು ವೇಳೆ ಪೊಲೀಸರು ತಡೆದರೆ ಹೆದ್ದಾರಿ ಬಂದ್ ಮಾಡ್ತೀವಿ ಅಂತ ರೈತರು ಎಚ್ಚರಿಕೆ ನೀಡಿದ್ದಾರೆ. ‘ನಮ್ಮ ನೋವನ್ನು ಜನತೆಗೆ ತೋರಿಸುವ ಯತ್ನ’ ಎನ್ನುತ್ತಿರುವ ರೈತರು, ರ್ಯಾಲಿ ವೇಳೆ ಸಾರ್ವಜನಿಕರ ವಾಹನ ಓಡಾಡದಂತೆ ಈಗಾಗಲೇ ಮನವಿ ಮಾಡಿದ್ದಾರೆ.