ನವದೆಹಲಿ: ಭಾನುವಾರ ಮೊದಲ ದೇಶಿ ಆ್ಯಪ್ ಅಲಾಯಿಮೆಂಟ್ಸ್ ಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಚಾಲನೆ ನೀಡಲಿದ್ದಾರೆ.
ಭಾರತದಲ್ಲಿ ಸುಮಾರು 50 ಕೋಟಿಗಿಂತ ಹೆಚ್ಚಿನ ಜನರು ಸೋಶಿಯಲ್ ಮೀಡಿಯಾ ಬಳಕೆ ಮಾಡುತ್ತಾರೆ. ಆದ್ರೆ ಬಳಕೆ ಮಾಡುವ ಬಹುತೇಕ ಆ್ಯಪ್ ಗಳು ವಿದೇಶಿಯ ಮೂಲದ್ದು ಆಗಿರುತ್ತವೆ. ವಿದೇಶಿ ಆ್ಯಪ್ ಬಳಕೆಯಿಂದಾಗಿ ಬಳಕೆದಾರರ ಮಾಹಿತಿಯನ್ನು ಕದಿಯಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಹಿನ್ನೆಲೆ ನಾಳೆ ಆತ್ಮನಿರ್ಭರ ಭಾರತ ಅಭಿಯಾನದ ಭಾಗವಾಗಿ ದೇಶಿಯ ಆ್ಯಪ್ಗೆ ಚಾಲನೆ ಸಿಗಲಿದೆ.
Advertisement
Advertisement
ಅಲಾಯಿಮೆಂಟ್ಸ್ ಆ್ಯಪ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದ್ದು, ಲಕ್ಷಕ್ಕೂ ಅಧಿಕ ಜನ ಡೌನ್ಲೋಡ್ ಮಾಡಿಕೊಂಡು ಬಳಕೆ ಮಾಡುತ್ತಿದ್ದಾರೆ. ಆದ್ರೆ ಆ್ಯಪ್ ಗೆ ಅಧಿಕೃತ ಚಾಲನೆ ನೀಡಿರಲಿಲ್ಲ. ಎಂಟು ಭಾಷೆಗಳಲ್ಲಿ ಆ್ಯಪ್ ಲಭ್ಯವಿದ್ದು, ಆಡಿಯೋ-ವಿಡಿಯೋ ಕಾಲಿಂಗ್ ಮಾಡಬಹುದಾಗಿದೆ.
Advertisement
Advertisement
ಭಾನುವಾರದ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿ, ಯೋಗಗುರು ಬಾಬಾ ರಾಮದೇವ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ.
ಚೀನಾಗೆ ಡಬಲ್ ಶಾಕ್ ನೀಡಲು ಮೋದಿ ಪ್ಲಾನ್- ಯುವಕರಿಗೆ ಪ್ರಧಾನಿ ಚಾಲೆಂಜ್https://t.co/UVPDVLoxaU#PMModi #China #India
— PublicTV (@publictvnews) July 4, 2020