ಬೆಂಗಳೂರು: ನನಗೆ ಶಿಲೆ ಆಗಲು ಇಷ್ಟವಿಲ್ಲ. ವಿಧಾನಸೌಧದ ಮೆಟ್ಟಿಲ ಮೇಲಿರುವ ಚಪ್ಪಡಿಯಾಗಿ ನೇವೆಲ್ಲ ನಡ್ಕೊಂಡು ಹೋಗಿ ವಿಧಾನಸೌಧ ಮೂರನೇ ಮೆಟ್ಟಲಿಗೆ ಮುಟ್ಟಿದರೆ ಸಾಕು. ನಾನು ಚಪ್ಪಡಿಯಾದರೆ ಸಾಕು, ಅಷ್ಟಾದರೆ ಸಾಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಪ್ರತಿಜ್ಞಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾರು ಎಷ್ಟು ತೊಂದರೆ ಕೊಟ್ಟರು. ಎಷ್ಟು ಕೇಸ್ ಹಾಕಿ ಜೈಲಿಗೆ ಹಾಕಿದರು. ಮೊನ್ನೆ ಇಂಧನ ಬೆಲೆ ಏರಿಕೆ ಕುರಿತು ಪ್ರತಿಘಟನೆ ನಡೆದರು ಕೇಸ್ ಹಾಕಿದ್ದಾರೆ. ನನ್ನ ಮೇಲೆ ಎಷ್ಟೇ ಕೇಸ್ ಹಾಕಿದರೂ, ಡಿಕೆಶಿ ಜಗ್ಗೋ ಮಗನೇ ಅಲ್ಲ ಎಂದರು.
Advertisement
Advertisement
ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮತ್ತೆ ಆಡಳಿತಕ್ಕೆ ಬರಬೇಕಿದೆ. ನನ್ನನ್ನು ಕೆಲವರು ಕನಕಪುರ ಬಂಡೆ ಎಂದು ತೋರಿಸುತ್ತಾರೆ. ಆದರೆ ನನಗೆ ಕನಕಪುರ ಬಂಡೆ ಎನಿಸಿ ಕರೆಯಿಸಿಕೊಳ್ಳಲು ಇಷ್ಟವಿಲ್ಲ. ಬಂಡೆ ಉಳಿ ಪೆಟ್ಟು ಬಿದ್ದರೆ ಚಪ್ಪಡಿಯೂ ಆಗುತ್ತದೆ. ದ್ವಾರದಲ್ಲಿರುವ ಕಂಬವೂ ಆಗುತ್ತದೆ. ನಾನು ಬಂಡೆಯಾಗಲು ಇಷ್ಟ ಪಡುವುದಿಲ್ಲ. ಉಳಿ ಏಟು ತಿಂದು ಮೂರ್ತಿ ಶಿಲೆಯಾಗಲು ಇಷ್ಟವಿಲ್ಲ. ವಿಧಾನಸೌಧದ ತಪ್ಪಡಿ ಕಲ್ಲಾದರೇ ಸಾಕು. ಈ ಚಪ್ಪಾಡಿ ಕಲ್ಲನ್ನು ನೀವು ತಿಳಿದುಕೊಂಡು ಹೋಗಿ ವಿಧಾನಸೌಧ ಮೂರನೇ ಮಹಡಿಯನ್ನು ಮುಟ್ಟಿದರೆ ಸಾಕು. ಡಿಕೆ ಶಿವಕುಮಾರ್ ಅಂತಹ ಚಪ್ಪಡಿ ಕಲ್ಲಾದರೆ ಸಾಕು ಎಂದು ಹೇಳಿದರು.
Advertisement
ವ್ಯಕ್ತಿ ಪೂಜೆಯೂ ಬೇಡ. ಪಕ್ಷ ಪೂಜೆ ಮಾಡೋಣ. ಈ ಮೂಲಕ ಪಕ್ಷವನ್ನು ಕಟ್ಟೋಣ. ನನಗೆ ಹಿಂಬಾಲಕರು ಬೇಡ. ನನಗೆ ಯಾವುದೇ ಗುಂಪು ಜಾತಿ, ಧರ್ಮದಲ್ಲಿ ನಂಬಿಕೆ ಇಲ್ಲ. ನಮ್ಮದು ಕಾಂಗ್ರೆಸ್ ಗುಂಪು, ಕಾಂಗ್ರೆಸ್ ಧರ್ಮ, ಕಾಂಗ್ರೆಸ್ ಜಾತಿ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮತ್ತೆ ಆಡಳಿತಕ್ಕೆ ಬರಬೇಕಿದೆ ಎಂದು ತಿಳಿಸಿದರು.