– ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ ಕಾಫಿನಾಡು
ಚಿಕ್ಕಮಗಳೂರು: ಕೊರೊನಾ ವೈರಸ್ನಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಈ ಮಧ್ಯೆ ಲಾಕ್ಡೌನ್ ಸಡಿಲಿಕೆ ಆದ ಮೇಲೆ ಕಾಫಿನಾಡಿನ ಹೋಂಸ್ಟೇಗಳು, ರೆಸಾರ್ಟ್ಗಳು ಮುಂಜಾಗ್ರತಾ ಕ್ರಮದೊಂದಿಗೆ ನವವಧುವಿನಂತೆ ಸಿಂಗಾರಗೊಂಡಿದ್ದು, ಪ್ರವಾಸಿಗರ ಆಗಮನದ ನಿರೀಕ್ಷೆಯಲ್ಲಿವೆ.
Advertisement
ಪಶ್ಚಿಮ ಘಟ್ಟಗಳ ತಟದಲ್ಲಿರೋ ಭೂಲೋಕದ ಸ್ವರ್ಗ, ಹಚ್ಚಹಸಿರಿನ ಸೊಬಗಿನ ಜಿಲ್ಲೆಗೆ ಪ್ರವಾಸಿಗರು ಜೇನು ನೊಣಗಳಂತೆ ಮುತ್ತಿಕೊಳ್ಳುತ್ತಿದ್ದರು. ಮಳೆ, ಚಳಿ, ಬೇಸಿಗೆ ಯಾವುದೇ ಕಾಲದಲ್ಲೂ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದರು. ಇದೆಲ್ಲಕ್ಕೂ ಕೊರೊನಾ ಮಹಾಮಾರಿ ಬ್ರೇಕ್ ಹಾಕಿಬಿಟ್ಟಿತ್ತು. ಸಾಲ-ಸೋಲ ಮಾಡಿ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ್ದ ಜನ ನಷ್ಟ ಅನುಭವಿಸುವಂತೆ ಆಗಿತ್ತು. ಇದನ್ನೇ ನಂಬಿದ್ದ ಸಾವಿರಾರು ಕುಟುಂಬಗಳು ಬೀದಿಗೆ ಬಂದಿದ್ದವು. ಸದ್ಯ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಗ್ರೀನ್ಸಿಗ್ನಲ್ ಸಿಕ್ಕಿದ್ದು, ಹೋಂ ಸ್ಟೇ, ರೆಸಾರ್ಟ್, ಹೋಟೆಲ್ ಆತಿಥ್ಯ ನೀಡಲು ಕಾಯುತ್ತಿವೆ ಎಂದು ಹೋಂ ಸ್ಟೇ ಮಾಲೀಕ ಇಲಿಯಾಸ್ ಹೇಳಿದ್ದಾರೆ.
Advertisement
Advertisement
ಹೋಂ ಸ್ಟೇ, ರೆಸಾರ್ಟ್, ಹೋಟೆಲ್ಗಳು ಆರಂಭವಾಗಿದರೂ ಪ್ರವಾಸಿಗರು ಇನ್ನೂ ಹೊರಬರಲು ಮನಸ್ಸು ಮಾಡುತ್ತಿಲ್ಲ. ಒಂದೆಡೆ ಕೊರೊನಾ ಭಯ, ಮತ್ತೊಂದೆಡೆ 2 ತಿಂಗಳಿಂದ ಕೆಲಸ, ಕಾರ್ಯ ಇಲ್ಲದೇ ಕೈ ಬರಿದು ಮಾಡಿಕೊಂಡಿರುವ ಜನ ಪ್ರವಾಸಕ್ಕೆ ಹಿಂದೇಟು ಹಾಕಿದ್ದಾರೆ. ಈ ಮಧ್ಯೆ ಹೋಂಸ್ಟೇ, ರೆಸಾರ್ಟ್ ಮಾಲೀಕರು ಕಾಟೇಜ್ಗಳನ್ನು ನವವಧುವಿನಂತೆ ಸಿಂಗರಿಸಿದ್ದಾರೆ. ಸ್ಯಾನಿಟೈಸರ್, ಮಾಸ್ಕ್, ಹ್ಯಾಂಡ್ ಗ್ಲೋಸ್ಗಳನ್ನ ರೆಡಿ ಮಾಡಿಕೊಂಡಿದ್ದಾರೆ. ಒಂದು ರೂಮಿಗೆ ಇಬ್ಬರಿಗಷ್ಟೆ ಅವಕಾಶ. 2 ದಿನದ ಮೇಲೆ ಯಾರಿಗೂ ರೂಂ ಕೊಡಲ್ಲ. ಗುರುತಿನ ಚೀಟಿ ಕಡ್ಡಾಯ ಮಾಡಿದ್ದಾರೆ.
Advertisement
ಕಾಫಿನಾಡಲ್ಲಿ ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ, ಚಾರ್ಮಾಡಿ ಘಾಟ್ ಸೇರಿದಂತೆ ಹತ್ತಾರು ಪ್ರವಾಸಿ ತಾಣಗಳಿವೆ. ಸದ್ಯ ಮುಂಗಾರು ಮಳೆಯೂ ಆರಂಭವಾಗಿದ್ದು, ಪ್ರವಾಸಿ ತಾಣಗಳು ಕೈಬೀಸಿ ಕರೆಯುತ್ತಿವೆ.