– ಸಂಚಾರ ಆರಂಭವಾಗಿ ತಿಂಗಳಾದ್ರೂ ಖಾಲಿ ಖಾಲಿ
ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋ ಈಗ ಕೊರೊನಾ ಹಾಟ್ಸ್ಪಾಟ್ ಆಗಿ ಬದಲಾಗುತ್ತಿದ್ದು, ನಮ್ಮ ಮೆಟ್ರೋದ 80 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ.
ನಮ್ಮ ಮೆಟ್ರೋ ಆಪರೇಷನ್ ವಿಭಾಗದ 28 ಲೋಕೋ ಪೈಲಟ್ಗಳಿಗೆ ಸೋಂಕು ದೃಢಪಟ್ಟಿದೆ. ಸೋಂಕಿತ ಸಿಬ್ಬಂದಿ ಪೈಕಿ ಕೆಲವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಕೆಲವರು ಹೋಂ ಐಸೋಲೇಷನ್ನಲ್ಲಿದ್ದಾರೆ.
Advertisement
Advertisement
ಲಾಕ್ಡೌನ್ನಿಂದ ಬರೋಬ್ಬರಿ 5 ತಿಂಗಳ ಬಳಿಕ ಮೆಟ್ರೋ ಸಂಚಾರ ಆರಂಭವಾಗಿತ್ತು. ಮೆಟ್ರೋ ಆರಂಭವಾಗಿ 1 ತಿಂಗಳಾಗುತ್ತಾ ಬಂದರೂ ಜನ ಮಾತ್ರ ಮೆಟ್ರೋದಲ್ಲಿ ಓಡಾಡಲು ಹಿಂದೇಟು ಹಾಕುತ್ತಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ ಮೆಟ್ರೋದಲ್ಲಿ 10 ಲಕ್ಷ ಮಂದಿ ಸಂಚರಿಸಿದ್ದಾರೆ. ಕೋವಿಡ್ ಸ್ಥಿತಿಗೂ ಮುನ್ನ ಎರಡು ದಿನಗಳಲ್ಲಿ 10 ಲಕ್ಷ ಮಂದಿ ಪ್ರಯಾಣಿಕರು ಸೇವೆಯನ್ನು ಬಳಸುತ್ತಿದ್ದರು. ಈ ಮಧ್ಯೆ ಸಿಬ್ಬಂದಿಗೂ ಕೊರೊನಾ ಸೋಂಕು ಹರಡುತ್ತಿರೋದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.