ಬೆಂಗಳೂರು: ನನ್ನ ಪ್ರಜ್ವಲ್ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಪದೇ ಪದೇ ಇಂತಹ ವಿಚಾರ ಬರೋದು ಸರಿಯಲ್ಲ. ನಾವಿಬ್ಬರು ಒಟ್ಟಾಗಿ ಕೆಲಸ ಮಾಡ್ತೀವೆ ಎಂದು ನಿಖಿಲ್ ಕುಮಾರಸ್ವಾಮಿ ಖಾರವಾಗಿ ಹೇಳಿದ್ದಾರೆ.
ಜೆಪಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಪಕ್ಷದ ಸಂಘಟನೆ ಒಟ್ಟಾಗಿ ಮಾಡುತ್ತೇವೆ. ಸರ್ಕಾರದ ವೈಫಲ್ಯದ ಬಗ್ಗೆ ನಾವು ಹೋರಾಟ ಮಾಡ್ತೀವಿ. ವಿಷಯದ ಆಧಾರದಲ್ಲಿ ಪಾದಯಾತ್ರೆಯನ್ನು ಮುಂದಿನ ದಿನಗಳಲ್ಲಿ ಮಾಡುತ್ತೇವೆ ಎಂದು ಹೇಳಿದ್ದಾರೆ.
Advertisement
30 ಜಿಲ್ಲೆಗಳಿಂದ ಜೆಡಿಎಸ್ ಯುವ ನಾಯಕರ ಜೊತೆ ಸಭೆ ಮಾಡುತ್ತಿದ್ದೇವೆ. ಸಾಕಷ್ಟು ವಿಚಾರಗಳು ಮುಕ್ತವಾಗಿ ಚರ್ಚೆ ಮಾಡಬೇಕಾಗಿದೆ. ಈಗಷ್ಟೇ ಗ್ರಾಮ ಪಂಚಾಯತಿ ಚುನಾವಣೆ ಮುಗಿದಿದೆ. ತಾಲೂಕು ಪಂಚಾಯತಿ ,ಜಿಲ್ಲಾ ಪಂಚಾಯತಿ ಚುನಾವಣೆ ಬರುತ್ತಿದೆ. ಹೀಗಾಗಿ ಮುಂಬರುವ ಚುನಾವಣೆಗೆ ಸಿದ್ಧವಾಗಬೇಕಾಗಿದೆ. 2023ರ ಸಾರ್ವರ್ತಿಕ ಚುನಾವಣೆ ನಾವು ಸಿದ್ಧತೆ ಮಾಡಿಕೊಳ್ಳಬೇಕು. ಪ್ರಜ್ವಲ್ ರೇವಣ್ಣ, ನಾನು ಸೇರಿದಂತೆ ಒಂದು ಯುವ ಪಡೆ ಕಟ್ಟುತ್ತೇವೆ. ಪಕ್ಷಕ್ಕೆ ಯುವ ಘಟಕದಿಂದ ಮತ್ತಷ್ಟು ಬಲ ತುಂಬುವ ಕೆಲಸ ಮಾಡುತ್ತೇವೆ ಎಂದರು.
Advertisement
ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷ ಯಾರ ಜೊತೆಯೂ ವಿಲೀನ ಆಗುವುದಿಲ್ಲ. ಜೆಡಿಎಸ್ ವಿಲೀನ ಬಗ್ಗೆ ಈಗಾಗಲೇ ದೇವೇಗೌಡ್ರು ಕುಮಾರಸ್ವಾಮಿ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಜೆಡಿಎಸ್ ಗೆ ವಿಲೀನ ಆಗುವ ಅನಿವಾರ್ಯತೆ ಇಲ್ಲ. ಆ ರೀತಿ ಪರಿಸ್ಥಿತಿ ನಮಗೆ ಬಂದಿಲ್ಲ,ಬರೋದು ಇಲ್ಲ. ನಾವು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುತ್ತೇವೆ. ಜೆಡಿಎಸ್ ಪಕ್ಷವನ್ನ ನಂಬಿಕೊಂಡಿರುವವರು ಸಾವಿರಾರು ಜನ ಇದ್ದಾರೆ. ಯಾವುದೇ ಕಾರಣಕ್ಕೂ ಜೆಡಿಎಸ್ ವಿಲೀನ ಇಲ್ಲ ಎಂದು ತಿಳಿಸಿದ್ದಾರೆ.
Advertisement
Advertisement
ಮಂಡ್ಯದಲ್ಲಿ ನನಗೆ ಸೋಲಾಗಿರಬಹುದು. ಆದರೆ ಇವತ್ತು ಮಂಡ್ಯ ಜನ ನಮ್ಮನ್ನ ಕೈ ಬಿಟ್ಟಿಲ್ಲ. ಗ್ರಾಮ ಪಂಚಾಯತಿಯಲ್ಲಿ ಜನ ನಮ್ಮ ಪರ ಇದ್ದಾರೆ ಅಂತ ತೋರಿಸಿದ್ದಾರೆ. ದೇವೇಗೌಡರ ಅನೇಕ ಚುನಾವಣೆಯಲ್ಲಿ ಸೋತವರು. ಇಂದು ದೊಡ್ಡ ದೊಡ್ಡ ನಾಯಕರು ನಮ್ಮ ಬಗ್ಗೆ ಮಾತಾಡ್ತಾರೆ. ಅವರೆಲ್ಲ ದೇವೇಗೌಡರ ಪ್ರೊಡೆಕ್ಟ್ ಗಳು. 2023 ರ ಚುನಾವಣೆ, ತಾಲೂಕು, ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಯುವಕರಿಗೆ ಮೀಸಲಾತಿ ಕೊಡುತ್ತೇವೆ ಎಂದಿದ್ದಾರೆ.
ನನಗೆ ಯುವ ಘಟಕದ ಅಧ್ಯಕ್ಷ ಸ್ಥಾನ ಕೊಡ್ತಾರೆ ಅಂತ ನಾನು ಊಹೆ ಮಾಡಿಲ್ಲ. ಆದ್ರೆ ದೇವೇಗೌಡರು ನನಗೆ ಕರೆ ಮಾಡಿ ಯುವ ಘಟಕದ ಅಧ್ಯಕ್ಷರು ಅಂತ ಹೇಳಿದ್ರು. ನಾನು ನಿಮ್ಮ ಸಹೋದರನ ತರಹ. ಏನೇ ಕಷ್ಟ, ನೋವು ಇದ್ದರು ಹೇಳಿಕೊಳ್ಳಿ. ಜೆಡಿಎಸ್ ಪಕ್ಷ ವೀಕ್ ಆಗ್ತಿಲ್ಲ. ಎರಡು ಸ್ಥಾನದಿಂದ ದೇವೇಗೌಡರು ಪಕ್ಷ ಕಟ್ಟಿದರು. ಯಾರು ನಿರಾಸೆ ಆಗಬೇಡಿ. ನಿಮ್ಮ ಜೊತೆ ನಾನು ಕೈ ಜೋಡಿಸ್ತೀನಿ ಪಕ್ಷ ಕಟ್ಟಿ ಅಧಿಕಾರಕ್ಕೆ ತರೋಣ ಎಂದು ನುಡಿದರು.
ಭೂ ಸುಧಾರಣೆಗೆ ಬೆಂಬಲ ಕೊಟ್ಟಿದ್ದಕ್ಕೆ ಎಲ್ಲರೂ ವಿರೋಧ ಮಾಡಿದರು. ಆದರೆ ಕುಮಾರಸ್ವಾಮಿ ಯೋಚನೆ ಮಾಡಿ ಬೆಂಬಲ ಕೊಟ್ಟಿದ್ದಾರೆ. ಕುಮಾರಸ್ವಾಮಿ, ದೇವೇಗೌಡ ಅನುಭವ ನಮಗೆ ಮುಖ್ಯ
ಸೋಶಿಯಲ್ ಮೀಡಿಯಾದಲ್ಲಿ ಜೆಡಿಎಸ್ ವೀಕ್ ಇದೆ ಇದನ್ನ ಮತ್ತಷ್ಟು ಬಲ ಪಡಿಸಲು ಕಮಿಟಿ ರಚನೆ ಮಾಡಲಾಗುತ್ತೆ. ಸೋಶಿಯಲ್ ಮೀಡಿಯಾ ಪರಿಣಾಮಕಾರಿಯಾಗಿ ಬಳಕೆಗೆ ಮುಂದಿನ ದಿನಗಳಲ್ಲಿ ಕ್ರಮ ತಗೋತೀವಿ ಎಂದಿದ್ದಾರೆ.
ಡಿ ಕೆ ಶಿವಕುಮಾರ್ ಆರೋಪಗಳ ಕುರಿತಾಗಿ ನಾನು ಮಾತಾನಾಡಲ್ಲ. ಅವ್ರು ಹಿರಿಯರು ಅವ್ರ ಬಗ್ಗೆ ನಾನು ಮಾತಾಡುವಷ್ಟು ದೊಡ್ಡವನಲ್ಲ. ನಮ್ಮ ತಂದೆಯವರು ಅವರೇ ಆರೋಪಗಳಿಗೆ ಉತ್ತರಿಸುತ್ತಾರೆ.
ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.